ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಡ್ರಾವಿಯ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾವಿಯ ಶಾಲೆಯ 6ನೇ ತರಗತಿಯ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆರ್ ಎಫ್ ಮಾಘಿ ವಹಿಸಿಕೊಂಡಿದ್ದರು ಅತಿಥಿಗಳಾಗಿ ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಸುರೇಶ್ ಎಸ್ ಕಾಳಪ್ಪನವರ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಸುಕನ್ಯಾ ಬೀಳಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಯ ಸದಸ್ಯರಾದ ಶ್ರೀ ಮಂಜುನಾಥ್ ಪಾಟೀಲ್ ಶ್ರೀ ಶಿವನಗೌಡ ಮೇದಗೊಪ್ಪ , ಲಕ್ಷ್ಮಣ್ ಮೋಹಾರೆ, ಶ್ರೀ ಪರಶುರಾಮ ಖೊದಾನಪುರ, ಶ್ರೀ ಮಲ್ಲಿಕಾರ್ಜುನ ಮೂದೇನೂರು, ಶ್ರೀಮತಿ ವಾಣಿಶ್ರೀ ಬುಟ್ಟಣ್ಣವರ ಶ್ರೀಮತಿ ಜುಮೇಲಾ ತಬ್ಬಲಜಿ ಶ್ರೀಮತಿ ಸರೋಜಾ ಹಾಸಟ್ಟಿ ಶ್ರೀಮತಿ ರೇಣುಕಾ ಶಿರೂರ, ಶ್ರೀಶೈಲ ದಿಡಗನ್ನವರ ಮತ್ತು ಸರ್ವ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಹೆಮ್ಮೆಯ ಶಿಕ್ಷಕರಾದ ಎಂ ಆರ್ ಮುದ್ದಣ್ಣವರ ಮಾಡಿದರು, ಈ ಸಂದರ್ಭದಲ್ಲಿ ಗುರುಗಳಾದ ಶ್ರೀ ಐ ಬಿ ನೇಸರ್ಗಿ ಇವರು ಆರನೇ ತರಗತಿಯ ಮಕ್ಕಳನ್ನು ಹನಿಗವನಗಳ ಮೂಲಕ ಒಬ್ಬೊಬ್ಬರನ್ನಾಗಿ ಸ್ವಾಗತಿಸಿದರು ಜೊತೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಕರಾದ ಶ್ರೀ ಐ ಜಿ ಉಳ್ಳಿಗೆರೆ, ಶ್ರೀ ಪ್ರವೀಣ್ ಬಣಕಾರ್ ಶ್ರೀ ಪ್ರಸನ್ ಹೆಗಡೆ, ಶ್ರೀ ಎ ಎಸ್ ಕರಾಳೆ , ಶ್ರೀ ಗುರುನಾಥ ಗುಡಿಯನ್ನವರ ಮತ್ತು ಸರ್ವ ಶಿಕ್ಷಕ ವೃಂದ ಮಕ್ಕಳನ್ನು ಅತಿ ವಿಜ್ರೃಂನೆಯಿಂದ ಸ್ವಾಗತಿಸಿದರು.