ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ರಾಜ್ಯ ಸರ್ಕಾರ ಇಡು ಗಂಟು ಎಂದು ಒಂದು ಸಾವಿರ ಕೋಟಿ ರೂಪಾಯಿ ನೀಡಿ ಆರ್ಥಿಕವಾಗಿ ಭದ್ರ ಸ್ವಾವಲಂಭಿ ಪರಿಷತ್ತು ಸ್ವಾಭಿಮಾನಿಯಾಗುವಂತೆ ಮಾಡಬೇಕೆಂದು ಸಾಹಿತಿ ಜೆ ಎಮ್ ರಾಜಶೇಖರ ಮನವಿಸಿಕೊಂಡು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಂತರ ಸರ್ಕಾರದ ಆರ್ಥಿಕ ಸೌಲಭ್ಯವನ್ನು ಪ್ರತಿ ವರ್ಷ ಕೊಡುವುದನ್ನು ಸ್ಥಗಿತ ಮಾಡಬಹುದು.
ಇಡು ಗಂಟು ಒಂದು ಸಾವಿರ ಕೋಟಿ ರೂಪಾಯಿ ರಾಷ್ಟ್ರೀಯ ಬ್ಯಾಂಕಿನಲ್ಲಿರಿಸಿ ಬರುವ ಬಡ್ಡಿಯಿಂದ ಪರಿಷತ್ತಿನ ಆಡಳಿತ ಮತ್ತು ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡಲು ಮುಕ್ತ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸಿದಂತಾಗುತ್ತದೆ. ಸರ್ಕಾರದ ಇಡು ಗಂಟು ಮೊತ್ತವಲ್ಲದೆ ಕನ್ನಡಿಗ ಶಾಸಕರು, ಸಂಸದರು, ಎಮ್ ಎಲ್ ಸಿ, ಜಿಲ್ಲಾ ಪಂಚಾಯತಿ ಪಂಚಾಯತಿ ಅಧ್ಯಕ್ಷ ಸದಸ್ಯರು ಸೇರಿದಂತೆ ಕೊಡುಗೈ ದಾನಿಗಳ ಮೂಲಕ ಹಾಗೂ ಸರ್ಕಾರೀ ನೌಕರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕನ್ನಡದ ಕರ್ನಾಟಕದ ನೌಕರರಿಂದ ಒಂದು ಬಾರಿ ದೊಡ್ಡ ಮೊತ್ತ ಸಂಗ್ರಹ ಮಾಡಿದರೆ ಯಾವುದೇ ಅಡೆತಡೆಗಳಿಲ್ಲದೆ ಕನ್ನಡ ಭಾಷೆ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ನಿಯಮಿತವಾಗಿ ಹಾಗೂ ನಿರಂತರವಾಗಿ ಮಾಡಿಕೊಂಡು ಹೋಗಲು ಸರಳ ಮತ್ತು ಸುಲಭವಾಗುತ್ತದೆ ಎಂದಿರುವ ಅವರು. ಪುನಃ ಪ್ರತಿ ವರ್ಷ ದಾನ ಬೇಡುವುದರಿಂದಲೂ ಕನ್ನಡ ಸಾಹಿತ್ಯ ಪರಿಷತ್ತು ಮುಕ್ತವಾಗಲಿದೆ. ಜಾಗತೀಕರಣದ ಆರ್ಥಿಕ ಹೊಡೆತದಿಂದ ಶಾಶ್ವತವಾಗಿ ಪರಿಷತ್ತು ರಕ್ಷಣೆ ಮಾಡಿದಂತೆಯೂ ಆಗುತ್ತದೆ ಎಂದು ಸಾಹಿತಿ ಜೆ ಎಮ್ ರಾಜಶೇಖರ ಹೇಳಿದ್ದಾರೆ.