ಬೆಳಗಾವಿ ಜಿಲ್ಲೆ ಸದತ್ತಿಯ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಮೋಹನ್ ದಂಡೀನ ರವರನ್ನು ಡಿಡಿಪಿಐ ಆಗಿ ಪದೋನ್ನತಿ ಹೊಂದಿರುವ ಪ್ರಯುಕ್ತ ಮತ್ತು ಸವದತ್ತಿ ತಾಲೂಕಿನ ಸರ್ಕಾರಿ ಶಾಲೆಗಳ ಬಗ್ಗೆ ಅವರು ಮಾಡಿರುವ ಉತ್ಕೃಷ್ಟ ಸೇವಾಭಿವೃಧ್ಧಿಯನ್ನು ಶ್ಲಾಘಿಸಿ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾವಿಯ ಮುಖ್ಯ ಶಿಕ್ಷಕರಾದ ಆರ್ ಎಫ್ ಮಾಘಿ ಮತ್ತು ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಶ್ರೀ ಸುರೇಶ್ ಎಸ್ ಕಾಳಪ್ಪನವರ ಉಪಾಧ್ಯಕ್ಷರಾದ ಶ್ರೀಮತಿ ಸುಕನ್ಯಾ ಬೀಳಗಿ ಹಾಗೂ ಸದಸ್ಯರಾದ ಶ್ರೀಮತಿ ಜುಮೇಧ ಮೊಲಾಸಾಬ್ ತಬ್ಬಲ್ಜಿ, ಶ್ರೀಮತಿ ವಾಣಿಶ್ರೀ ಬುಟ್ಟನ್ನವರ , ಶ್ರೀಮತಿ ರೇಣುಕಾ ಶಿರೂರ, ಶ್ರೀಮತಿ ವಿಜಯಲಕ್ಷ್ಮಿ ಬಿ ಹೊನ್ನಬಿಂದಗಿ, ಶ್ರೀ ಪರಶುರಾಮ ಖೋದಾನಪುರ, ಶ್ರೀ ಮಲ್ಲಿಕಾರ್ಜುನ್ ಮೂದೇನೂರು ಮತ್ತು ಸರ್ವ ಸದಸ್ಯರು ಸೇರಿ ಶ್ರೀ ಮೋಹನ್ ದಂಡಿನ ಸಾಹೇಬರನ್ನು ಅತ್ಯಂತ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿಬ್ಬಂದಿಯವರಾದ ಶ್ರೀ ಬಾಬಾಜಾನ್ ಮಾಳಗಿ , ಶ್ರೀ ಸುರೇಶ್ ಬೆಟಗೇರಿ ,ಶ್ರೀ ನದೀಮ್ ಮುಜಾವರ್ , ಸುಧೀರ್ ವಾಗೇರಿ ಶ್ರೀ ಸುನೀಲ ಏಕನಗೌಡ್ರ ಮತ್ತು ಇತರರು ಉಪಸ್ಥಿತರಿದ್ದರು