ಸವದತ್ತಿ ನ್ಯಾಯವಾದಿಗಳ ಸಂಘಕ್ಕೆ ನೂತನವಾಗಿ ಆಡಳಿತ ಮಂಡಳಿಗೆ ಚುನಾವಣೆಯು ದಿನಾಂಕ : 24-01-2025 ರಂದು ಚುನಾವನೆ ನಡೆಯಲಿದ್ದು ಇಂದು ದಿನಾಂಕ : 18-01-2025 ರಂದು ಸಂಘದ ಉಪಾಧ್ಯಕ್ಷರಾಗಿ ಮಹಾದೇವಪ್ಪ ಎಸ್ ಹುಬ್ಬಳ್ಳಿ ವಕೀಲರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತು ಸಂಘದ ಕಾರ್ಯಕಾರಿ ಸಮಿತಿಗೆ ಆರ್ ವಿ ಪೂಜಾರ, ಎನ್ ಬಿ ಬೋವಿ, ವಿ ಆರ್ ಕಳ್ಳಿಮಠ, ಎ ಎಮ್ ಒಂಟಿ, ಮತ್ತು ವಿ ವಿ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗಕ್ಕೆ ಎಸ್ ವಾಯ್ ಶಿಬಾರಗಟ್ಟಿ ವಕೀಲರು ಮತ್ತು ಟ್ರಜರಿ ಕ್ಷೇತ್ರಕ್ಕೆ ಎಮ್ ಎಸ್ ಕುರಿ ವಕೀಲರು ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸವದತ್ತಿ ನ್ಯಾಯವಾಧಿಗಳ ಸಂಘಕ್ಕೆ ನೂತನವಾಗಿ ಅವಿರೋಧವಾದ ಆಯ್ಕೆಯಾದ ಪದಾಧಿಕಾರಿಗಳಿಗೆ ಹಿರಿಯ ಮತ್ತು ಕಿರಿಯ ಸಂಘದ ಸದಸ್ಯರು ವಕೀಲರು ಶುಭಾಶಯವನ್ನು ಕೋರಿದ್ದಾರೆ. ಸಂಘಧ ಅಭಿವೃದ್ದಿಗೆ ಮತ್ತು ಸಂಘದ ನ್ಯಾಯವಾದಿಗಳ ಸರ್ವೋತೋಮುಖ ಅಭಿವೃದ್ದಿ ಮಾಡಬೇಕೆಂದು ಶುಭ ಕೋರಿದ್ದಾರೆ. ಮತ್ತು ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಗದೀಶ ಬಿ ಮುನವಳ್ಳಿ, ಮತ್ತು ಮಂಜುನಾಥ ಎನ್ ಮುತ್ತಿನ ಮತ್ತು ಪುಂಡಲೀಕ ಎನ್ ಡೊಳ್ಳಿನ, ವಕೀಲರು ಸ್ಫರ್ಧಿಸಿದ್ದಾರೆ. ಮತ್ತು ಜನರಲ್ ಸಕ್ರೇಟರಿ ಸ್ಥಾನಕ್ಕೆ ಯಶವಂತ ಎನ್ ಪಾಸ್ತೆ, ಮತ್ತು ಸುರೇಶ ಎಸ್ ಕಾಳಪ್ಪನವರ, ವಕೀಲರು ಸ್ಫರ್ಧಿಸಿದ್ದಾರೆ. ಜಾಯಿಂಟ್ ಸಕ್ರೇಟರಿ ಸ್ಥಾನಕ್ಕೆ ಎ ಎಮ್ ಬಾಗೋಜಿಕೊಪ್ಪ, ಮತ್ತು ಎಮ್ ಎಮ್ ಗುಂಡ್ಲೂರ, ಮತ್ತು ಆರ್ ವಿ ಹುಂಬಿ, ವಕೀಲರು ಸ್ಫರ್ಧಿಸಿದ್ದಾರೆ. ಚುನಾವಣೆಯು ದಿನಾಂಕ :24-01-2025 ರಂದು ಸಂಘದ ಭವನದಲ್ಲಿ ನಡೆಯಲಿದೆ.
ಸವದತ್ತಿ ನ್ಯಾಯವಾದಿಗಳ ಸಂಘಕ್ಕೆ ಅವಿರೋಧವಾಗಿ ಆಯ್ಕೆ

WhatsApp Group
Join Now