ಸವದತ್ತಿ ನ್ಯಾಯಾಲಯದಲ್ಲಿ 78ನೇ ಸ್ವಾತಂತ್ರ ದಿನೋತ್ಸವದ ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹನವನ್ನು ಸವದತ್ತಿಯ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀ ಶಶಿಧರ ಎಮ್. ಗೌಡ ಅವರು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹನವನ್ನು ಮಾಡಿದರು.

ಧ್ವಜಾರೋಹನ ಕಾರ್ಯಕ್ರಮದಲ್ಲಿ ಸವದತ್ತಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ ಎಮ್. ಎನ್. ಮುತ್ತಿನ ಮತ್ತು ಉಪಾಧ್ಯಕ್ಷರಾದ ಶ್ರೀ ಜಿ. ಬಿ. ಮುನವಳ್ಳಿ ಹಾಗೂ ಕಾರ್ಯದರ್ಶಿಯಾದ ಶ್ರೀ ಎಮ್.ಎಫ್.ಬಾಡಿಗೇರ ಸಹ ಕಾರ್ಯದರ್ಶಿಯಾದ ಶ್ರೀ ಮಂಜು ಮಲ್ಲಾಡ,
ಖಜಾಂಜಿಯಾದ ಎಮ್.ಎಸ್.ಪಂಚೆನವರ, ಮಹಿಳಾ ಪ್ರತಿನಿಧಿಯಾದ ಶ್ರೀಮತಿ ಸುನೀತಾ ಗೋಂಧಕ‌ ಮತ್ತು ಹಿರಿಯ ನ್ಯಾಯವಾದಿಗಳಾದ ಶ್ರೀ ಬಿ.ಎಮ್.ಎಲಿಗಾರ್, ಎಮ್.ಬಿ.ದ್ಯಾಮನಗೌಡರ, ಸಿ.ಜಿ.ತುರಮರಿ,
ಸಿ.ಬಿ.ದುಂಡಿ, ರಾಜೇಂದ್ರ ಬಾಳಿ, ಎ.ಆರ್. ಜಕಾತಿ, ಎ.ಎಚ್.ನದಾಫ್, ಎ.ಎಮ್.ಬಾಗೋಜಿಕೊಪ್ಪ, ಹೂಲಿಕಟ್ಟಿ
ವಕೀಲರು, ಜೆ.ಬಿ.ಪಟ್ಟಣಶೆಟ್ಟಿ, ಸಿ.ಬಿ.ದೊಡ್ಡಗೌಡರ, ಜಿ.ವಾಯ್. ಕರಿಮಲ್ಲಪ್ಪನವರ, ಹೊನಗೇಕರ ವಕೀಲರು,
ಸಿ.ಬಿ.ವಕ್ಕುಂದ, ಆನಂದ ಏಣಗಿ, ವಾಯ್.ಎನ್.ಪಾಸ್ತೆ, ಎಮ್.ಎಮ್. ಎಲಿಗಾರ, ಶ್ರೀಮತಿ ನಿರ್ಮಲಾ ವಂಟಮುರಿ, ಪವಿತ್ರಾ ಉಪ್ಪಾರ, ಶ್ರೀ ಮುರುಘಶ ವಂಟಮುರಿ, ಶ್ರೀಮತಿ ಸಾವಿತ್ರಿ ಶಿಬಾರಗಟ್ಟಿ, ಭಾಂಡೇಕರ್,
ಶ್ಯಾಮಸುಂದರ ಲಾಳಗೆ, ಸಂಗ್ರೇಸಕೊಪ್ಪ, ಜಿ.ಕೆ.ಬಡಿಗೇರ, ಯು.ಎಮ್. ನಾಗನೂರ, ಪಿ.ಆರ್. ಆಗಾಸಿ, ಉಮೇಶ ನವಲನ್ನವರ, ಪ್ರದೀಪ ಹೂಲಿಕಟ್ಟಿ, ಮಯೂರ ಕಾರದಗಿ, ಎಸ್. ಆರ್. ಪಾಟೀಲ, ಬೆಡಸೂರಮಠ,
ಎಮ್.ಕೆ. ಹೊಸಮಠ, ಎಮ್.ಎಸ್. ಕುರಿ, ಎಫ್.ಎಮ್.ಕಾಳೆ ಹಾಗೂ ಹಿರಿಯ, ಕಿರಿಯ ನ್ಯಾಯವಾದಿಗಳು ಮತ್ತು ಸವದತ್ತಿ ನ್ಯಾಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಹಾಗೂ ಸವದತ್ತಿ
ಪೊಲೀಸ್ ಸಿಬ್ಬಂದಿಯವರು ಗೌರವ ಕವಾಯತ್ ಮಾಡಿದರು.
ಇದೇ ಸಂದರ್ಭದಲ್ಲಿ ಸವದತ್ತಿ ಹಿರಿಯ ನ್ಯಾಯಾಲಯದ ಶಿರಸ್ತೇದಾರರಾದ
ಮಹೇಶ್ ಬಿ. ಅಂಗಡಿಯವರು 2006 ರಿಂದ 2024 ರವರೆಗೂ ಅನೇಕ ಜಿಲ್ಲೆಗಳಲ್ಲಿ ಹಾಗೂ ರಾಜ್ಯಗಳಲ್ಲಿ ನಡೆದಂತಹ ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ
ಹಾಗೂ ಪದಕಗಳನ್ನು ಪಡೆದಿರುತ್ತಾರೆ. 2024 ರಂದು ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಉತ್ತರ ಪ್ರದೇಶದಲ್ಲಿ ಪ್ಯಾರಾ ಟೈಕ್ವಾಂಡೋ ಅಸೋಸಿಯೇಶನ್ ಆಫ್ ಇಂಡಿಯಾ ಆಯೋಜಿಸಿರುವ 7ನೇ ರಾಷ್ಟ್ರಮಟ್ಟದ ಟೈಕ್ವಾಂಡೋ ಚಾಂಪಿಯನಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಹಾಗೂ 1/7/2024 ರಂದು ಮೈಸೂರಿನಲ್ಲಿ ನಡೆದ 12ನೇ ಸ್ಟೇಟ್ ಲೇವಲ್ ಮೇನ್, ವುಮೆನ್, ಪಿಜಿಕಲಿ ಡಿಸೆಬಲ್ಡ್ ಆರ್ಮ್, ವೆಸ್ಲಿಂಗ್ ಚಾಂಪಿಯನ್‌ಶಿಫ್ 2024 ರಲ್ಲಿ ತಮ್ಮ ಕ್ರೀಡಾ ಸಾಧನೆಯನ್ನು ತೋರಿಸಿ
ಪ್ರಥಮ ಸ್ಥಾನದೊಂದಿಗೆ 2 ಬಂಗಾರದ ಪದಕಗಳನ್ನು ಪಡೆದಿದ್ದಾರೆ. ಇದಲ್ಲದೆ 1/8/2024 ರಿಂದ 5/8/2024
ರವರೆಗೆ ನಿರಂಜನ ಧರ್ಮಶಾಲಾ ರಾಯಪುರ, ಚತ್ತೀಸಗಡದಲ್ಲಿ ಇಂಡಿಯನ್ ಆರ್ಮ್ ವೆಸ್ಟಿಂಗ್ ಫೆಡರೇಷನ್‌ ಸಂಸ್ಥೆಯು ಆಯೋಜಿಸಿರುವ ನ್ಯಾಶನಲ್ ಆರ್ಮ್ ವೆಸ್ಟಿಂಗ್ ಚಾಂಪಿಯನಶಿಪ್‌ನಲ್ಲಿ ಮೊದಲ
ಸ್ಥಾನವನ್ನು ಪಡೆದು ಬಂಗಾರದ ಪದಕವನ್ನು ಪಡೆದಿದ್ದಾರೆ. ಇಂತಹ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಸವದತ್ತಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀ ಶಶೀಧರ್ ಎಮ್. ಗೌಡ ಮತ್ತು ನ್ಯಾಯಾಲಯದ ಎಲ್ಲ
ಸಿಬ್ಬಂದಿಯವರು ಹಾಗೂ ನ್ಯಾಯವಾದಿಗಳ ಸಂಘದ ವತಿಯಿಂದ ಗೌರವ ಸನ್ಮಾನವನ್ನು ನೆರವೇರಿಸಿದರು.

About The Author