ಸವದತ್ತಿ ಮನೆ ಕಳ್ಳತನ ಇಬ್ಬರ ಕಳ್ಳರ ಬಂಧನ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಶಾಂತವ್ವ ಶಿವಾನಂದ ಸಿರನ್ನವರ ಇವರ ತೋಟದ ಮನೆಯನ್ನು ಕೀಲಿ ಹಾಕಿಕೊಂಡು ಹೊರಗಡೆ ಹೋದಾಗ ಯಾರೋ ಕಳ್ಳರು ಸದರಿ ಮನೆಯ ಕೀಲಿಯನ್ನು ಮುರಿದು ಮನೆಯ ಟ್ರೇಜರಿಯಲ್ಲಿಟ್ಟಿದ್ದ 20.000/- ರೂ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸವದತ್ತಿ ಪೊಲೀಸ್ ಠಾಣೆಗೆ ಬಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಸವದತ್ತಿ ಠಾಣೆ ಗುನ್ನಾ ನಂಃ 65/2025 ಕಲಂ 331. (2) 331(4) 305 ಬಿ.ಎನ್.ಎಸ್ 2023 ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆಯ ಕೈಕೊಂಡಿದ್ದು ಇರುತ್ತದೆ.

ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಂಡ ರಚನೆ ಮಾಡಿ ಪತ್ತೆಗಾಗಿ ಡಾ॥ ಭೀಮಾಶಂಕರ ಗುಳೇದ ಮಾನ್ಯ ಎಸ್.ಪಿ ಬೆಳಗಾವಿ, ಆರ್. ಬಿ. ಬಸರಗಿ ಹೆಚ್ಚುವರಿ ಎಸ್.ಪಿ ಬೆಳಗಾವಿ ಹಾಗೂ ಕುಮಾರಿ ಶೃತಿ ಹೆಚ್ಚುವರಿ ಎಸ್.ಪಿ ಬೆಳಗಾವಿ ಹಾಗೂ ರಾಮದುರ್ಗ ಡಿ ಎಸ್ ಪಿ ಉಪ ವಿಭಾಗ ಚಿದಂಬರ ಮಡಿವಾಳರ, ಮಾರ್ಗದರ್ಶನದಲ್ಲಿ ಡಿ.ಎಸ್. ಧರ್ಮಟ್ಟಿ ಪಿಎಸ್ಐ ಸವದತ್ತಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಕಶ ಬನ್ನೂರ ಪಿ.ಎಸ್ ಐ ಎಲ್. ಆರ್. ಗೌಡಿ ಪಿಎಸ್‌ಐ , ಮತ್ತು ಸಿಬ್ಬಂದಿ ಜನರಾದ ಉದ್ದಪ್ಪ, ಎಚ್. ಪೂಜೇರಿ ಅಮರ ಸಾರಾಪೂರೆ. ಮಹೇಶ ಮಾಳಳ್ಳಿ, ಉಮೇಶ ಗಾಣಗಿ, ಹಾಗೂ ಬೆಳಗಾವಿಜಿಲ್ಲಾ ಬೆರಳು ಮುದ್ರಣ ಘಟಕದ ತಜ್ಞರಾದ ಎಂ ಎಫ್ ಪಾಟೀಲ, ಎಚ್‌ಸಿ ಎಫ್‌ಪಿಬಿ ಮತ್ತು ಎಲ್.ಪಿ ಸುಣಧೋಳಿ ಪಿಸಿ ಎಫ್‌ಪಿಬಿ, ಹಾಗೂ ಪೊಲೀಸ್ ಕಾರ್ಯಾಲಯದ ತಾಂತ್ರಿಕ ಸಿಬ್ಬಂದಿಯವರಾದ ವಿನೋದ ಟಕ್ಕಣ್ಣವರ, ಸಚಿನ ಪಾಟೀಲ ರವರು ಆರೋಪಿತರ ಪತ್ತೆ ಕಾರ್ಯಕೈಗೊಂಡು ಆರೋಪಿತರಾದ 1) ಸಂಜು ದುಂಡಪ್ಪ ಬೊಳೆತ್ತಿನ 2) ಮಂಜುನಾಥ ಶೇಖಪ್ಪ ಹೊಂಗಲ ಸಾಃ ಹಿರೇಕೊಪ್ಪ ತಾಃ ಸವದತ್ತಿ ಇವರನ್ನು ದಿನಾಂಕ:05/03/2025 ರಂದು ದಸ್ತಗೀರ ಮಾಡಿ ಅವರಿಂದಾ 6.60,000 ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಹಾಗೂ 1.35.000/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣ ಹಾಗೂ ಹಣ 5.000/-ಹೀಗೆ ಒಟ್ಟು 8.00.000/- ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಸವದತ್ತಿ ಠಾಣೆಯ 03 ಹಾಗೂ ಬೈಲಹೊಂಗಲ ಠಾಣೆ 01 ಪ್ರಕರಣ ಹೀಗೆ ಒಟ್ಟು 04 ಪ್ರಕರಣಗಳನ್ನು ಭೇದಿಸಿದ್ದು ಇರುತ್ತದೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.

ಸದರಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಸವದತ್ತಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

About The Author