ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ಸುರಗೇರಿ ಬೆಟ್ಟದಲ್ಲಿ ಭುವನೇಶ್ವರಿ ದೇವಿ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ, ಸೇವಿಸಿದರೆ ರೋಗಗಳು ಮಾಯಾ
ಮಕ್ಕಳಾಗದವರ ಒಡಲು ತುಂಬುತ್ತದಂತೆ. ದೇವರ ಸನ್ನಿಧಾನದಲ್ಲಿ ಸಿಗುವ ಆ ಅಂಬಲಿ ಪ್ರಸಾದಕ್ಕೆ ಭಕ್ತರು ಭಕ್ತಿಯಿಂದ ದಿನಗಟ್ಟಲೆ ಕಾಯ್ದು ಸಂಕಲ್ಪ ಮಾಡುವರು ತಾಯಿ ಭುವನೇಶ್ವರಿ ದೇವಿ ದರ್ಶನ ಪಡೆಯಲು ಪ್ರತಿ ಶುಕ್ರವಾರದಂದು ದೇವಿ ಆರಾಧನೆ ಪೂಜೆ ಮಂತ್ರ ಪಠಣೆ ಅಭಿಷೇಕ ನಡೆಯುತ್ತದೆ ಸುಮಾರು 40 ಸಾವಿರದಿಂದ ಒಂದು ಲಕ್ಷದವರೆಗೆ ಸಹಸ್ರಾರು ಭಕ್ತರು ಬರುವರು ಎಲ್ಲಕ್ಕಿಂತ ಹೆಚ್ಚಾಗಿ ದೇವಿಯ ಅಮೃತೌಷಧ ಅಂಬಲಿ ಸೇವನೆ ಮಾಡಿದರೆ ಎಲ್ಲಾ ರೋಗಗಳು ಗುಣಮುಖವಾಗುವುದು ಎಂದು ಭಕ್ತರ ನಂಬಿಕೆಯಾಗಿದೆ.
ಎಲ್ಲರೂ ವೈದ್ಯರ ಪ್ರಯತ್ನ ಕೈ ಮೀರಿದಾಗ ಹೋಗೋದು ದೇವರ ಕಡೆಗೆ. ಸಮಾಜದಲ್ಲಿನ ಎಲ್ಲ ಭರವಸೆ ಕೈ ಕೊಟ್ಟಾಗ ದೇವರ ಪಾದವೊಂದೆ ಗತಿ.
ನೊಂದ ಭಕ್ತರಿಗೆ ಭುವನೇಶ್ವರಿ ದೇವಿಯೇ ಆಸರೆ. ಕುಂದರಗಿ ಗ್ರಾಮದ ಸುರಗಿರಿ ಬೆಟ್ಟದಲ್ಲಿ ನೆಲೆಸಿರುವ ಭುವನೇಶ್ವರಿ ದೇವಿ ಭಕ್ತರ ಕಲ್ಪತರುವಾಗಿದ್ದಾಳೆ. ಇಲ್ಲಿನ ವಿಶೇಷತೆ ಏನೆಂದರೆ ಭುವನೇಶ್ವರಿ ದೇವಿ ಗರ್ಭದ ಗುಡಿಯಲ್ಲಿ ವಿದ್ಯುತ್ ಬಳಸ ವಂತಿಲ್ಲ ಇದುವರೆಗೂ ಗರ್ಭದ ಗುಡಿಯೊಳಗೆ ಲೈಟ್ ಇರುವುದಿಲ್ಲ ದೀಪದ ಜ್ಯೋತಿಯಿಂದ ಭುವನೇಶ್ವರಿ ದೇವಿ ಮೂರ್ತಿಗೆ ಬೆಳಕು ಬೀಳುತ್ತದೆ. ಹಾಗೂ ಭುವನೇಶ್ವರಿ ದೇವಿ ಪೂಜೆ ಸಂದರ್ಭದಲ್ಲಿ ಗುಡಿಯ ಹೂರಗೆ ಇದ್ದಂತಹ ವಿದ್ಯುತ್ ಲೈಟುಗಳನ್ನು ಬಂದ್ ಮಾಡಲಾಗುತ್ತದೆ
ಹಾವಿನ ರೂಪದಲ್ಲಿ ದೇವಿ ನೆಲೆಸಿದ್ದಾಳೆ ಈ ದೇವಿಯ ಮೂರ್ತಿಯನ್ನು ಬಾಲ್ಯೇ ಮುತ್ತೇದೆಯಾದ ಭಾರತೀ ಸರಗನಾಚಾರಿ ಬದಾಮಿ ಇವರು ಕೆತ್ತಿರುತ್ತಾರೆ. ನೊಂದ ಬಂದ ಭಕ್ತರಿಗೆ ಇಲ್ಲಿ ಅಂಬಲಿ ಪ್ರಸಾದ ಕೊಡಲಾಗುತ್ತದೆ. ಈ ಅಂಬಲಿ ಔಷಧವಿದ್ದಂತೆ, ಯಾವುದೇ ಕಾಯಿಲೆ , ಮಾಹಾಮಾರಿ ಬಂದರೂ ಅಂಬಲಿ ಸೇವಿಸಿದರೆ ವಾಸಿಯಾಗುತ್ತದೆ.
ಮಕ್ಕಳಾಗದವರು ಇಲ್ಲಿನ ಆಂಜನೇಯ ದೇವರಿಗೆ ಸಂಕಲ್ಪದಿಂದ ಕಂಕನ ಕಟ್ಟುವುದರಿಂದ ಮಕ್ಕಳಾಗುವುದು ಮದುವೆ ಆಗದವರಿಗೆ ಮದುವೆ ಆಗುವುದು ಅಂಬಲಿ ಸೇವನೆಯಿಂದ ಭಕ್ತರ ಎಲ್ಲ ಬೇಡಿಕೆ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಕುಂದರಗಿ ಗ್ರಾಮದಲ್ಲಿ ಕಳೆದ 21 ವರ್ಷದಿಂದ ಈ ದೇವಸ್ಥಾನ ಭುವನೇಶ್ವರಿ ಪವಾಡ ನಡೆಯುತ್ತಾ ಬಂದಿದೆ. ಪ್ರತಿ ಶುಕ್ರವಾರ ದೇವಿ ಸನ್ನಿಧಿಗೆ ಸಹಸ್ರಾರು ಭಕ್ತರು ಬರುತ್ತಾರೆ. ಭುವನೇಶ್ವರಿ ದೇವಿ ಬೇಡಿದ ಭಕ್ತರ ಕಲ್ಪತರು ಎಂಬಂತೆ ಎಲ್ಲ ಹರಕೆ ಈಡೇರಿಸುತ್ತಾಳೆ. ಇನ್ನು ಇಲ್ಲಿ ಅಂಬಲಿ ಪ್ರಸಾದವನ್ನು ಮಾಡುವುದರಲ್ಲೂ ಪರಿಶುದ್ದತೆ ಪಾವಿತ್ರತೆ ಇದೆ. ನದಿ ನೀರನ್ನುತಂದು ಕೇವಲ ಉಪ್ಪು ಹಿಟ್ಟಿನಿಂದ ಅಂಬಲಿ ಮಾಡುತ್ತಾರೆ. ಅಂಬಲಿ ಮಾಡೋದು ರಾಮನ ಮುದಕಣ್ಣವರ ಎಂಬುವರ ಮನೆಯವರು ಮಾತ್ರ.
ಬೇರೆಯವರ ಮನೆಯವರು ಮಾಡಿದ ಅಂಬಲಿ ನಡೆಯುವುದಿಲ್ಲ.ಅಂಬಲಿ ಮಾಡಿ ಅದನ್ನು ದೇವಿ ಮುಂದೆ ಇಟ್ಟು ಪೂಜೆ ಮಾಡಿ ನಂತರ ಬಂದ ಭಕ್ತರಿಗೆ ಹತ್ತಿ ಎಲೆ ಮೂಲಕ ಪ್ರಸಾದದ ರೂಪದಲ್ಲಿ ನೀಡಲಾಗುವುದು.ಆದರೆ ದೇವಿ ಮುಂದಿಟ್ಟು ಪೂಜೆ ಮಾಡಿದಾಗ ಅಂಬಲಿ ಔಷಧಿ ರೂಪ ಪಡೆಯುತ್ತದೆ ಎಂಬುದು ನಂಬಿಕೆ.ಇನ್ನು ಭಕ್ತರು ದೇವಿಗೆ ಹರಕೆ ಹೇಳಿ ಸಂಕಲ್ಪ ಮಾಡಿಕೊಂಡು ಐದು ವಾರದಲ್ಲಿ ಹರಕೆ ಈಡೇರುತ್ತದೆ. ಆಗ ಭಕ್ತರು ದೀಡನಮಸ್ಕಾರ ಉರುಳು ಸೇವೆ ಮಾಡೋದ ದಾಸೋಹ ದೇವಸ್ಥಾನಕ್ಕೆ ವಿವಿಧ ಕಾಣಿಕೆ ನೀಡಿ ದೇವಿಗೆ ಕೃತಾರ್ಥರಾಗ್ತಾರೆ.