ಹಲಗತ್ತಿಯಿಂದ ಮುದೇನೂರು ಹೋಗುವ ರಸ್ತೆಯ ಘಾಟದಲ್ಲಿ ಇದ್ದಂತ ಅಪಘಾತ ವಲಯ ಸೂಚನಾ ಫಲಕದ ಸೋಲಾರ್ ಹಾಗೂ ಲೈಟ್ ಕಳ್ಳತನ .

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ರಸ್ತೆಯಿಂದ ಮುದೇನೂರು ಹೋಗುವ ರಸ್ತೆಯಲ್ಲಿ ಅಪಘಾತ ಸಂಭವಿಸಬಾರದೆಂದು ರಸ್ತೆ ತಿರುವಿನಲ್ಲಿ ಅಪಘಾತ ವಲಯ ಸೂಚನಾ ಫಲಕವನ್ನು ಸುಮಾರು 4 ರಿಂದ 5 ತಿಂಗಳ ಹಿಂದೆಯೇ 24×7 ರೆಡ್ ಲೈಟಿನ ಸೋಲಾರ್ ಲೈಟ್ ಒಳಗೊಂಡಂತಹ ಸೂಚನಾ ಫಲಕವನ್ನು ಹಾಕಿರುತ್ತಾರೆ ಆದರೆ ಆ ಅಪಘಾತ ವಲಯದ ಸೂಚನಾ ಫಲಕದ ಸೋಲಾರ್ ಪ್ಯಾಡ್ ಹಾಗೂ ರೆಡ್ ಲೈಟ್ ಇದ್ದಂತ ಲೈಟ್ ಬಾಕ್ಸನ್ನು ಯಾರೋ ಖದೀಮರು ಕಳ್ಳತನ ಮಾಡಿರುವ ದೃಶ್ಯ ಕಂಡು ಬರುತ್ತದೆ. ಇದಲ್ಲದೆ ಇನ್ನೊಂದು ಅಪಘಾತ ವಲಯದ ಸೂಚನಾ ಫಲಕದ ಲೈಟ್ ವೈರನ್ನು ಕಟ್ಟು ಮಾಡಿ ಬಿಟ್ಟಿರುತ್ತಾರೆ.

ಇಷ್ಟು ದಿನ ಮನೆ ಕಳ್ಳತನ ಅಂಗಡಿ ಕಳ್ಳತನ ಇವುಗಳನ್ನೆಲ್ಲ ಕೇಳಿದ್ದೇವೆ ಆದರೆ ಸಾರ್ವಜನಿಕರಿಗೆ ಹಾಗೂ ವಾಹಾನ ಸವಾರರಿಗೆ ಅನುಕೂಲವಾಗಲೆಂದು ಮುದೇನೂರ ತಿರುವು ರಸ್ತೆಯಲ್ಲಿ ಅಪಘಾತ ವಲಯದ ಸೂಚನಾ ಫಲಕವನ್ನು ಕೂಡ ಬಿಡದೆ ಕಳ್ಳತನ ಮಾಡಿರುತ್ತಾರೆ

About The Author