ರಾಮದುರ್ಗ ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ. ಎಂ.ಆರ್. ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ, ಎನ್.ಎಸ್.ಎಸ್ ಹಾಗೂ ರೆಡ್‌ರಿಬ್ಬನ್ನ ಕ್ಲಬ್‌ಗಳ ಸಹಯೋಗದಲ್ಲಿ ಜರುಗಿದ ಹೆಚ್.ಐ. ವಿ/ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ನಿರ್ಮಲಾ ಹಂಜಿ ಪಾಲ್ಗೊಂಡು ಅವರು ಮಾತನಾಡಿದರು.
ಅಸುರಕ್ಷಿತ ಲೈಂಗಿಕ ಚಟುವಟಿಕೆಗಳಿಂದ ದೂರ ವಿದ್ದು, ರಕ್ತದ ವರ್ಗಾವಣೆ ಸಮಯದಲ್ಲಿ ರಕ್ತದ ಪಾಕೀಟಿನ ಮೇಲೆ ರಕ್ತ ಪರೀಕ್ಷೆಯ ವಿವರಗಳನ್ನು ದೃಢಪಡಿಸಿಕೊಳ್ಳುವ ಮೂಲಕ ಹೆಚ್.ಐ. ವಿ ಬರದಂತೆ ಎಚ್ಚರ ವಹಿಸಬೇಕು. ಹೆಚ್.ಐ. ವಿ ರೋಗದ ಕುರಿತು ನಿಮ್ಮ ನೆರೆಹೊರೆಯವರಲ್ಲಿ ಜಾಗೃತಿ ಮೂಡಿಸುವ ಮೂಲಕ ದೇಶವನ್ನು ಹೆಚ್.ಐ. ವಿ ಮುಕ್ತ ರಾಷ್ಟ್ರ ಮಾಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ. ಎಮ್. ಸಕ್ರಿ ಮಾತನಾಡಿ, ರೋಗ ಬಂದ ನಂತರ ಗುಣ ಪಡಿಸುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.
ಐ.ಕ್ಯೂ.ಎ.ಸಿ ಸಂಯೋಜಕ ಡಾ| ಪಿ.ಬಿ. ತೆಗ್ಗಿಹಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಡಿ. ರಾಠೋಡ ಅತಿಥಿಗಳನ್ನು ಪರಿಚುಸಿದರು. ಸಾಹಿತ್ರಿ ಕಡ್ಡಿ ಹಾಗೂ ರ್ಹತಾ ಹಳ್ಳಿಕೆರೆ ನಿರೂಪಿಸಿದರು. ಐಶ್ವರ್ಯ ದೊಡಮನಿ ವಂದಿಸಿದರು.