110 ಕೆವಿ. ತಡಸಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರ; ಸೆ.07 ರಂದು ವಿದ್ಯುತ್ ವ್ಯತ್ಯಯ

WhatsApp Group Join Now

ಧಾರವಾಡ : 110 ಕೆವಿ. ತಡಸಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ 07, 2025 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಸೆಪ್ಟೆಂಬರ 07, 2025 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಕೆ.ಹೆಚ್.ಬಿ, ಉದಯಗಿರಿ, ವನಸಿರಿ ನಗರ, ರಾಜಾಜಿ ನಗರ, ಸತ್ತೂರ ವಿಲೇಜ್, ಸತ್ತೂರ, ಆಶ್ರಯ ಕಾಲೋನಿ, ಎನ್.ಜಿ.ಇ.ಎಫ್, ಎಸ್.ಡಿ.ಎಮ್ ಮೆಡಿಕಲ್ ಕಾಲೇಜ್, ಎಸ್.ಡಿ.ಎಮ್ ಡೆಂಟಲ್ ಕಾಲೇಜ್, 2ನೇ ಕೆ.ಹೆಚ್.ಬಿ ಹಂತ, ಐಐಐಟಿ, ಕೆ.ಐ.ಏ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ ಸತ್ತೂರ, ರಾಶಿಫಾರ್ಮ, ಎಐಆರ್, ನವಲೂರ ರೇಲ್ವೆ ಸ್ಟೇಶನ್, ಸಂಜೀವಿನಿ ಪಾರ್ಕ, ಹುಬ್ಬಳ್ಳಿ-ಧಾರವಾಡ ಡ್ಯೂರೆಬಲ್ ಗೂಡ್ಸ(ಏಕಸ್), ಕೆಎಮ್‍ಎಫ್ ರಾಯಾಪೂರ, ಐಓಸಿಎಲ್ ರಾಯಾಪೂರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.


About The Author