2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13.40 ಕೋಟಿ ರೂ.!!
ಇದರೊಂದಿಗೆ ಪರೀಕ್ಷಾ ಅಭ್ಯರ್ಥಿಗಳಿಂದ Exam ಗೆ ಹೋಗಿ ಬರಲು 20 ಕೋಟಿ ರೂ. ಗಿಂತಲೂ ಅಧಿಕ ವೆಚ್ಚವಾಗಿರಬಹುದೆಂದು ಅಂದಾಜಿಸಲಾಗಿದೆ.!!
KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಿಗದಿಪಡಿಸಿದ್ದು ಮರು ಪರೀಕ್ಷೆ ನಡೆಸಲು ಬೇಕು 15 ಕೋಟಿ ರೂ. ಹಾಗೂ ಮತ್ತೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹೋಗಿ ಬರೆಯಲು ಕನಿಷ್ಠ 20 ಕೋಟಿ ರೂ ಖರ್ಚಾಗಬಹುದು.!!
ಒಟ್ಟಾರೆಯಾಗಿ KAS Prelims ಒಂದೇ ಪರೀಕ್ಷೆಗೆ ಕನಿಷ್ಠ ಪಕ್ಷ 50 ಕೋಟಿ ರೂ. ಹಣ ಖರ್ಚಾಗುತ್ತದೆ. ಇದರಲ್ಲಿ ಅದೆಷ್ಟು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಬಹುದಾಗಿತ್ತು.? ಚಿಂತಕರ ಚಾವಡಿ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಲಿ. ಶ್ರೀ ಸಾಮಾನ್ಯರ ತೆರಿಗೆ ಹಣ ಪೋಲಾಗದಂತೆ ತಡೆಯಲು ಹಾಗೂ ಅತೀ ಕಡಿಮೆ ಖರ್ಚಿನಲ್ಲಿ ಅತೀ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿ ಎಂಬುದು ಅಭ್ಯರ್ಥಿಗಳ ಅಹವಾಲು.!!