ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಉಗಲವಾಟ ಗ್ರಾಮದ ಸುಕ್ಷೇತ್ರ ತೀರ್ಥಬಸವೇಶ್ವರ ದೇವಸ್ಥಾನ ರಾಮತೀರ್ಥದ 15ನೇ ವರ್ಷದ ಶ್ರಾವಣ ಮಾಸದ ನಿಮಿತ್ಯ ಕೋಟಿಜಪಯಜ್ಞ ಹಾಗೂ 7ನೇ ಮಹಾ ರಥೋತ್ಸವ ಅಗಸ್ಟ್ 18ರಂದು ಜರಗಲಿದೆ.
ಈ ವರ್ಷ ಶ್ರಾವಣ ಮಾಸದ ನಿಮಿತ್ಯ ಸದ್ಭಕ್ತರು ದೇಶದ ಹಿತಾಶಕ್ತಿಗಾಗಿ ಮತ್ತು ಭಗವಂತನ ಕೃಪೆಗಾಗಿ ಪ್ರತಿದಿನ ಮುಂಜಾನೆ ಬ್ರಾಹ್ಮೀಮುಹೂರ್ತದಲ್ಲಿ ಶ್ರೀ ರುದ್ರಾಭಿಷೇಕ ಸಹಸ್ರಬಿಲ್ವಾರ್ಚನೆ ಮತ್ತು ಸೂತ್ರದೊಂಗಿ ಕೋಟಿ ಜಪಯಜ್ಞ ಪ್ರಾರಂಭವಾಗುತ್ತದೆ ಈ ಸತ್ಕಾಕಾರ್ಯದಲ್ಲಿ ತಾವೆಲ್ಲರು ತನು, ಮನ, ಧನದೊಂದಿಗೆ ಹೃದಯಪೂರ್ವಕವಾಗಿ ಭಗವಂತನಿಗೆ ಅರ್ಪಿಸಿ ಪರಮಾತ್ಮನಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.

ಜ್ಞಾನಯೋಗಿ ಲಿಂ, ಪರಮಪೂಜ್ಯ ಶ್ರೀ ಸಿದ್ದೇಶ್ವರಸ್ವಾಮಿಗಳು, ಜ್ಞಾನಯೋಗಾಶ್ರಮ ವಿಜಯಪೂರ.
ಪೂಜ್ಯಶ್ರೀ ಲಿಂ, ಮ.ನಿ.ಪ್ರ.ಸ್ವ. ಶ್ರದ್ಧಾನಂದಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಮಠ ಸೋಮನಕೊಪ್ಪ, ಶ್ರೀ ಅಭಿನವ ಶಿವಾನಂದಸ್ವಾಮಿಗಳು ಹಾಗೂ ಶ್ರೀ ಸದಾನಂದಮಹಾಸ್ವಾಮಿಗಳ ಅನುಗೃಹದಿಂದ ಅಗಸ್ಟ್ 18ರಂದು ಕಡೆ ಸೋಮವಾರ ಸಂಜೆ 4-00 ಘಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ರಥೋತ್ಸವ ನಡೆಯುವದು.
ಇವರುಗಳ ಕೃಪಾಶೀರ್ವಾದಿಂದ ಮತ್ತು ಹರಗುರು ಚರಮೂರ್ತಿಗಳ ಪಾವನ ಸಾನಿಧ್ಯದಲ್ಲಿ ಜಪಯಜ್ಞ ಪ್ರಾರಂಭ ತಿಂಗಳವರೆಗೆ ನೇರವೆರುವ ಈ ಸತ್ಕಾಕಾರ್ಯದಲ್ಲಿ ಸಮಸ್ತ ಸದ್ಭಕ್ತರು ಭಕ್ತಿಪೂರ್ವಕವಾಗಿ ಆಗಮಿಸಿ ಜಪ ಧಾನ ಸೇವೆಗಳಂತ ಪುಣ್ಯಕಾರ್ಯಮಾಡಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ಸುಕ್ಷೇತ್ರ ತೀರ್ಥಬಸವೇಶ್ವರ ದೇವಸ್ಥಾನದ ಕಮಿಟಿಯವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9008070498, 7760161773