2023ರಲ್ಲಿ 89 ಲಕ್ಷಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ: 184.83 ಕೋಟಿ ರೂ. ದಂಡ ವಸೂಲಿ

WhatsApp Group Join Now

2023ರಲ್ಲಿ 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 184.83 ಕೋಟಿ ರೂ. ದಂಡವನ್ನು ಬೆಂಗಳೂರು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಸಿಕ್ಯಾಮರಾ ಪರಿಶೀಲಿಸಿ 87,25,321 ಸಂಚಾರಿ ನಿಯಮ ಉಲ್ಲಂಘನೆ ಕೇಸ್, ಸಂಚಾರಿ ಪೊಲೀಸರು ಖುದ್ದಾಗಿ ದಾಖಲಿಸಿದ ಕೇಸ್​ಗಳ ಸಂಖ್ಯೆ 2,49,624.

Traffic Fine

ಬೆಂಗಳೂರು, ಜನವರಿ 01: ನಗರ ಸೇರಿದಂತೆ ರಾಜ್ಯಾದ್ಯಂತ 2023ಕ್ಕೆ ಬೈಬೈ ಹೇಳಿ ಹೊಸ ವರ್ಷ 2024ನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಆದರೆ 2023 ರಲ್ಲಿ ಬೆಂಗಳೂರು ಸಂಚಾರ ಪೊಲೀಸರು Bangaluru Traffic Police ದಾಖಲಿಸಿರುವ ಪ್ರಕರಣಗಳು, ಈ ಬಾರಿ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತಗಳು, ಅದರಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಮತ್ತು ಸಂಚಾರ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

2023ರಲ್ಲಿ 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 184.83 ಕೋಟಿ ರೂ. ದಂಡವನ್ನು ಬೆಂಗಳೂರು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಸಿಕ್ಯಾಮರಾ ಪರಿಶೀಲಿಸಿ 87,25,321 ಸಂಚಾರಿ ನಿಯಮ ಉಲ್ಲಂಘನೆ ಕೇಸ್, ಸಂಚಾರಿ ಪೊಲೀಸರು ಖುದ್ದಾಗಿ ದಾಖಲಿಸಿದ ಕೇಸ್​ಗಳ ಸಂಖ್ಯೆ 2,49,624.

About The Author