3.50 ಕೋಟಿ ಅನುದಾನದ ರಸ್ತೆ ನಿರ್ಮಾಣ ಕಾಮಗಾರಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭೂಮಿ ಪೂಜೆ ನೆರವೇರಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2.50 ಕೋಟಿ ಅನುದಾನದಲ್ಲಿ ಚಿಪ್ಪಲಕಟ್ಟಿ-ಕುನ್ನಾಳದಿಂದ ತಾಲೂಕಿನ ಗಡಿ ವರೆಗಿನ ರಸ್ತೆ ಸುಧಾರಣೆ ಹಾಗೂ ಕೆ.ಚಂದರಗಿ ಗ್ರಾಮದ ಹತ್ತಿರ 1 ಕೋಟಿ ಅನುದಾನದಲ್ಲಿ ರಾಮದುರ್ಗ ತಾಲೂಕಿನ ವ್ಯಾಪ್ತಿಯ ಬದಾಮಿ, ಗೊಡಚಿ, ಗೋಕಾಕ ಪಾಲ್ಸ್ ರಾಜ್ಯ ಹೆದ್ದಾರಿ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಸೇರಿದಂತೆ ಒಟ್ಟು 3.50 ಕೋಟಿ ಅನುದಾನದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ನೆರವೇರಿಸಿ ಅವರು ಮಾತನಾಡಿದರು.
ಕುನ್ನಾಳ ಗ್ರಾಮಸ್ಥರ ಬೇಡಿಕೆಯಂತೆ ರಸ್ತೆಯನ್ನು ನಿರ್ಮಿಸಲು ಆರಂಭಿಸಲಾಗುವದು. ಈ ರಸ್ತೆಯನ್ನು ಕೆಲ ಭಾಗಗಳಲ್ಲಿ ಸಿಸಿ ಹಾಗೂ ಡಾಂಬರೀಕರಣ ಮಾಡಲಾಗುವದು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ರಸ್ತೆಯ ಅಕ್ಕದ ರೈತರು ಗುತ್ತಿಗೆದಾರರಿಗೆ ಸಹಕರ ನೀಡಬೇಕು. ಕಾಮಗಾರಿ ಸಮಯದಲ್ಲಿ ಅಡೆತಡೆ ಮಾಡಿದರೇ ಅಭಿವೃದ್ದಿಗೆ ಹಿನ್ನಡೆಯಾಗಲಿದೆ. ಗ್ರಾಮಸ್ಥರು ಮುಂದೆ ಕಾಮಗಾರಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ಕಾಮಗಾರಿ ಕಳಪೆಯಾದರೆ ತಮ್ಮ ಗಮನಕ್ಕೆ ತಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಎಫ್.ಎಂ ನಿರ್ದೇಶಕ ರಮೇಶ ಅಣ್ಣಿಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಮುಖಂಡರಾದ ಶಿದ್ಲಿಂಗಪ್ಪ ಶಿಂಗಾರಗೊಪ್ಪ, ಕೆ.ಎಸ್. ಉದಪುಡಿ, ಶಿವರಡ್ಡಿ ಶೇಖರಪ್ಪಗೋಳ, ಸೋಮು ಹಿರೇಮಠ, ಚನ್ನಪ್ಪ ಹುದ್ದಾರ, ವೆಂಕಟೇಶ ಶೇಖರಪ್ಪಗೋಳ, ಸಿದ್ದಪ್ಪ ಕೊಣ್ಣುರ, ವಿಠ್ಠಲ ಗುಡಗುಂಟಿ, ಪಿರು ತಳವಾರ ಸೇರಿದಂತೆ ಗ್ರಾಮದ ವಿವಿಧ ಮುಖಂಡರು, ಪಿಡಬ್ಲೂಡಿ ಇಲಾಖೆಯ ಎಇ ಗಳಾದ ದೇವರಡ್ಡಿ ತೋಳಗಟ್ಟಿ, ಚಿಂದಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author