2,80,000 ರೂ. ಮೌಲ್ಯದ
ವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿ ಕುಷ್ಟಗಿ ಪೊಲೀಸರ ವಶ.
ವಿದ್ಯುತ್ ವಾಯರ್ ಕಳ್ಳತನಮಾಡಿದ
ಆರೋಪಿತರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೊಲೀಸರು ಬಂಧಿಸಿ
ಒಟ್ಟು 1,400 ಕೆ.ಜಿ. ತೂಕದ 2,80,000 ರೂ. ಮೌಲ್ಯದ
ವಿದ್ಯುತ್ ವಾಯರ್ ವಶಕ್ಕೆ
ಪಡೆದಿದ್ದಾರೆ.

2023 ನವೆಂಬರ್ 11 ರಂದು ಪಟ್ಟಣದ ಹೊರವಲಯ
ತಾವರಗೇರಾ ರಸ್ತೆಯ ಕೆವಿಸಿ ನಗರದಲ್ಲಿ ಖಾಲಿ
ಪ್ಲಾಟ್’ಗಳ ರಸ್ತೆಗಳಲ್ಲಿನ ವಿದ್ಯುತ್ ಕಂಬಗಳಿಗೆ
ಅಳವಡಿಸಲಾಗಿದ್ದ ವಿದ್ಯುತ್ ವಾಯರ್ ಕತ್ತರಿಸಿ ಕಳ್ಳತನ
ಮಾಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿತ್ತು. ಈ ಪ್ರಕರಣ ಭೇದಿಸಲು ಕೊಪ್ಪಳ ಎಸ್ಪಿ
ಯಶೋದಾ ವಂಟಿಗೋಡಿ, ಹೆಚ್ಚುವರಿ ಪೊಲೀಸ್
ಅಧೀಕ್ಷಕ ಹೇಮಂತಕುಮಾರ, ಗಂಗಾವತಿ ಡಿವೈಎಸ್ಪಿ
ಸಿದ್ದಲಿಂಗಪ್ಪಗೌಡ ಅವರ ಮಾರ್ಗದರ್ಶನ ಮೇರೆಗೆ
ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ನೇತೃತ್ವದಲ್ಲಿ
ಪಿಎಸ್’ಐ ಮುದ್ದುರಂಗಸ್ವಾಮಿ, ಕ್ರೈಂ ಪಿಎಸ್’ಐ
ಮಾನಪ್ಪ ವಾಲ್ಮೀಕಿ ಮತ್ತು ಸಿಬ್ಬಂದಿ
ಎಂ.ಬಿ.ಇನಾಯತ್, ಅಮರೇಶ ಹುಬ್ಬಳ್ಳಿ, ಪ್ರಶಾಂತ,
ನೀಲಕಂಠಸ್ವಾಮಿ, ಷರ್ಪುದ್ದಿನ್, ಪ್ರಸಾದ, ಕೋಟೇಶ
ಅವರು ಒಳಗೊಂಡ ತಂಡ ತಾಲೂಕಿನ ಚಿಕ್ಕನಂದಿಹಾಳ
ಗ್ರಾಮದ ನಾಲ್ವರು ಆರೋಪಿತರನ್ನು ಬಂದಿಸಿರುತ್ತಾರೆ
ವಿದ್ಯುತ್ ವಾಯರ್ ಸಾಗಿಸಲು ಬಳಸಿದ್ದ 2 ಲಕ್ಷ ರೂ. ಬೆಲೆ
ಬಾಳುವ ಮಹೇಂದ್ರ ಕಂಪನಿ ಜಿತೂ ವಾಹನ ವಶಕ್ಕೆ
ಪಡೆದು ಆರೋಪಿತರನ್ನು ನ್ಯಾಯಾಂಗ ವಶಕ್ಕೆ
ಒಪ್ಪಿಸಿದ್ದಾರೆ. ಕಳ್ಳರನ್ನು ಬಂಧಿಸಿ, ವಿದ್ಯುತ್ ವಾಯರ್
ವಶ ಪಡಿಸಿಕೊಳ್ಳಲು ಪತ್ತೆ ಕಾರ್ಯದಲ್ಲಿ ತೊಡಗಿದ್ದ
ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ
ಯಶೋಧ ವಂಟಿಗೋಡಿ ಅವರು ಶ್ಲಾಘಿಸಿದ್ದಾರೆ.
ಕಳೆದ ಐದಾರು ತಿಂಗಳು ಹಿಂದೆ ಇಂಥದ್ದೇ ಪ್ರಕರಣ
ನಡೆದಿತ್ತು. ಓರ್ವನನ್ನು ಬಂಧಿಸಿ ಕುಷ್ಟಗಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ
ಆರೋಪಿಯನ್ನು ಪಿಎಸ್’ಐ ಮುದ್ದುರಂಗಸ್ವಾಮಿ
ಅವರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ
ವಿದ್ಯುತ್ ವಾಯರ್ ಕಳ್ಳತನ ಮಾಡಿದ ನಾಲ್ವರು
ಆರೋಪಿತರು ಯಾರು ಎಂಬುದು ತಿಳಿದುಬಂದ
ಹಿನ್ನಲೆಯಲ್ಲಿ ಆರೋಪಿತರನ್ನು ಪತ್ತೆ ಮಾಡಿ ಬಂದಿಸಲಾಗಿದೆ ಎಂದು ಸಿಪಿಐ ಯಶ್ವಂತ್ ಬಿಸನಹಳ್ಳಿ ಹೇಳಿದರು.