ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ್ದರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶಂಕರ ಲಿಂಗ ದೇವಸ್ಥಾನದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..

ಈ ಸಂದರ್ಭದಲ್ಲಿ ಬಸವರಾಜ ಕೋನನ್ನವರ. ಮಹೇಶ್ ದೊಡಮನಿ. ಪ್ರಶಾಂತ್ ಅಂಗಡಿ. ಗಂಗಾಧರಯ್ಯ ಹಿರೇಮಠ. ನಾಗಪ್ಪ ಹಡಪದ. ಯಮನಪ್ಪ ಬಾರ್ಕಿ. ಚುರಚಪ್ಪ ಮಡ್ಡಿ ನಾಯ್ಕರ್.
ಬಸವರಾಜ ಮ ನಾವಿ. ಮಂಜುನಾಥ್ ಹಡಪದ. ಬಸವರಾಜ ನಾವಿ. ಅಪ್ಪಣ್ಣ ನಾವಿ ಇನ್ನೂ ಕೆಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..
ಈ ಸಂದರ್ಭದಲ್ಲಿ ಶ್ರೀ ಬಸವರಾಜ ಕೊಣನ್ನವರ ವಿಶ್ವಗುರು ಬಸವಣ್ಣನವರಿಗೆ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ರಾಜ್ಯ ಸರ್ಕಾರದ ತೀರ್ಮಾನ ಕುರಿತು ಹರ್ಷವನ್ನು ವ್ಯಕ್ತ ಪಡಿಸಿ ಬಸವಾದಿ ಶರಣ ಶರಣೆಯರ ಬಗ್ಗೆ ಬಸವ ಭಕ್ತರಿಗೆ ಹಾಗೂ ಸಮಸ್ತ ನಾಡಿನ ಜನತೆಗೆ ಹಿತ ನುಡಿಗಳನ್ನು ತಿಳಿಸಿದರು ಹಾಗೂ ಶ್ರೀ ಮಂಜುನಾಥ ಹಡಪದ ಬಸವಾದಿ ಶರಣರಿಗೆ ವಂದನೆಗಳನ್ನು ಸಲ್ಲಿಸಿದರು..


