ಕರಸೇವಕರಾದ ಗೋವಿಂದ ಮೋಡಕ ಹಾಗೂ ಮಲ್ಲಿಕಾರ್ಜುನ ಭಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.

WhatsApp Group Join Now

ರಾಮದುರ್ಗ ಪಟ್ಟಣದ ಪಟಕೋಟ ಗಲ್ಲಿಯ ಅಂಜನೇಯನ ದೇವಸ್ಥಾನದಲ್ಲಿ ಕರಸೇವಕರಾದ ಗೋವಿಂದ ಮೋಡಕ ಹಾಗೂ ಮಲ್ಲಿಕಾರ್ಜುನ ಭಾವಿಕಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಜನೇವರಿ 22 ರಂದು ಅಯ್ಯೋಧೆ ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪಣೆ ಹಿನ್ನಲೆ ರಾಮದುರ್ಗದಲ್ಲಿ ಹಿಂದೂ ಕಾರ್ಯಕರ್ತ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಹಿನ್ನಲೆ ರಾಮದುರ್ಗ ಪಟ್ಟಣದ ಲಕ್ಷ್ಮೀ ನರಸಿಂಹ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮೀಗಳ ಮಠ ಹಾಗೂ ಅಂಜನೇಯ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮದ ಜೊತೆಗೆ ರಾಮ ನಾಮ ಜಪ ಹನುಮಾನ ಚಾಲೀಸ ಹಾಗೂ ರಾಮ ರಕ್ಷಾ ಸ್ತೋತ್ರ ಪಠಣ ಮಾಡಿ ಸಂಜೆ ದೀಪ ಬೆಳಗಿಸಿ ಸಂಭ್ರಮಿಸಲಾಯಿತು ನಂತರ ಉಪನ್ಯಾಸಕರಾದ ಎಸ್.ಪಿ. ಮುರಾರಿ ಅವರು ಮಾತನಾಡಿ, ಕರಸೇವಕರ ತ್ಯಾಗ ಬಲಿದಾನದಿಂದ ರಾಮ ಮಂದಿರ ನಿರ್ಮಾಣವಾಗಿದ್ದು ಅವರ ಸೇವೆ ಅಗಣ್ಯ ಎಂದು ವರ್ಣಿಸಿದರು. ಧರ್ಮಕ್ಕಾಗಿ ರಾಮನ ಭಕ್ತಿ ಪ್ರೇರಣೆುಂದ ಕರಸೇವೆಯಲ್ಲಿ ತೊಡಗಿದ ಈ ಕರ ಸೇವಕರನ್ನ ಸನ್ಮಾನಿಸುತ್ತಾ ಇರುವುದು ಹೆಮ್ಮೆ ಸಂಗತಿ ಎಂದು ಹೇಳಿದರು.

ಈ ವೇಳೆ ಪಟ್ಟಣದ ಹಾಗೂ ಪಡಕೋಟ ಗಲ್ಲಿಯ ಮುಖಂಡರಾದ ಸಹದೇವ ಪವಾರ, ರಮೇಶ ದಾತೆ, ಗದಗಕರ, ಗೋಪಾಲಾಚಾರ್ಯ ಬಿಂದಗಿ ಸೇರಿದಂತೆ ಭಜನಾ ಮಂಡಳಿಯ ಮಹಿಳೆಯರು ಉಪಸ್ಥಿತರಿದ್ದರು.

About The Author