ಹಲಗತ್ತಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಜರಗಿತು

ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತ ಜಾಥಾದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸೋನವ್ವ ರಾಜೇಂದ್ರ ದೊಡವಾಡ ಇವರು ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಪೂಜೆ ಮಾಡುವುದರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಮಾತನಾಡಿ, ಸಂವಿಧಾನ ಒಂದು ಆಚರಣೆ ಮಾಡಿ ಸೀಮಿತ ಮಾಡದೇ ತಮ್ಮ ಮನೆ ಮನೆಗಳಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದರು. ಸಂವಿಧಾನ ಮೌಲ್ಯಗಳನ್ನು ಜೀವಂತವಾಗಿರಬೇಕೆಂಬ ಉದ್ದೇಶದಿಂದ ಜಾಗೃತ ಜಾಥಾ ಹಮ್ಮಿಕೊಳ್ಳಲಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಮಾತನ್ನು ಆಡದ ಸ್ಥಿತಿಯಲ್ಲಿದ್ದವರಿಗೆ ಸಂವಿಧಾನದ ಮೂಲಕ ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ನೀಡಿ ಸಮಾನಾಗಿ ಬದುಕುವ ಅವಕಾಶ ಕಲ್ಪಸಿಕೊಟ್ಟಿದೆ. ಆದ್ದರಿಂದ ನಮ್ಮೆಲ್ಲ ಮಹಿಳಾ ಬಂಧುಗಳು ಸಂವಿಧಾನ ಮೌಲ್ಯಗಳನ್ನು ಮರೆಯಬಾರದು ಎಂದರು.

ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಲಕ್ಷ್ಮಣ ಹೂಗಾರ ಇವರು ಮಾಲಾರ್ಪಣೆ ಮಾಡಿ, ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ಮನ-ಮುಟ್ಟುವಂತೆ ತಿಳಿಸಿದರು.

ಸುತ್ತಮುತ್ತಲಿನ ಗ್ರಾಮದ ಎಲ್ಲಾ ಶಾಲಾ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದರು. ಹಲಗತ್ತಿ ಹಾಗೂ ಸುತ್ತಮುತ್ತಲಿನ ಶಾಲೆಯ ಮಕ್ಕಳಿಂದ ಭಾಷಣ, ನೃತ್ಯ. ರಾಷ್ಟ್ರ ನಾಯಕರ ವೇಷಭೂಷಣ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವದರ ಮೂಲಕ ಹಲಗತ್ತಿ ಗ್ರಾಮದಲ್ಲಿ ಹಬ್ಬದ ವಾತವರಣ ಸೃಷ್ಠಿಯಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶ್ರೀಮತಿ ವಿ.ಎ . ಗಣಪ , ಗ್ರಾಮ ಪಂಚಾಯತಿ ಅಧ್ಯಕ್ಷರು .ಶ್ರೀಮತಿ ಸೋನವ್ವ ರಾಜೇಂದ್ರ ದೊಡವಾಡ ,ಉಪಾಧ್ಯಕ್ಷರು ಶ್ರೀಮತಿ ಲಲಿತಾ ಲಕ್ಷ್ಮಣ ಹೂಗಾರ , ಸರ್ವ ಸದಸ್ಯರು, ಎಸಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮದ ಸರ್ವ ನಾಗರೀಕರು, ಯುವಕ ,ಯುವತಿ ಸಂಘದವರು, ಆಶಾ ಕಾರ್ಯಕರ್ತೆ ಯರು, ಆರೋಗ್ಯ ಇಲಾಖೆಯವರು.ಸ್ಥಳೀಯ ಸಂಸ್ಥೆಗಳ ಪಧಾದಿಕಾರಿಗಳು, ಶಾಲಾ ಮಕ್ಕಳು, ತಾಲೂಕಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು, ಭಾಗವಹಿಸಿ ಯಶಸ್ವಿಗೊಳಿಸಿದರು.
