
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಾ ಪಂಚಾಯತಯಿಂದ ಹುತಾತ್ಮ ವ್ರತ ಮಾರ್ಗವಾಗಿ ತಹಸೀಲ್ದಾರ್ ಕಛೇರಿವರೆಗೂ ಪ್ರತಿಭಟನೆ ಮುಖಾಂತರ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು
ರಾಜ್ಯಾದ್ಯಂತ ಅಂಬೇಡ್ಕರ ಪುತ್ಕಳಿಗೆ ಅವಮಾನ ಮಾಡುವುದು ಹೆಚ್ಚಾಗುತ್ತಿದೆ ಅಂತವರ ಮೇಲೆ ಸೂಕ್ತ ಕ್ರಮ ಜರಗಿಸಬೇಕು.
ಡಾ॥ ಬಿ.ಆರ್.ಅಂಬೇಡ್ಕರ ರವರು ಸಂವಿಧಾನ ಎಂಬ ಗ್ರಂಥವನ್ನು ಬರೆದು ಇಡಿ ವಿಶ್ವಕ್ಕೆ ಮಾದರಿಯಾಗಿದ್ದ ಡಾ|| ಬಿ.ಆರ್.ಅಂಬೇಡ್ಕರ ರವರು ಒಂದೆ ಜನಾಂಗಗೋಸ್ಕರ ಸಂವಿಧಾನವನ್ನು ರಚಿಸಿರುವುದಿಲ್ಲಾ. ಸರ್ವ ಜನಾಂಗಕ್ಕೂ ಅನುಕೂಲವಾಗುವಂತೆ ಸಂವಿಧಾವನ್ನು ರಚಿಸಿದ್ದಾರೆ. ಅಂತಹ ಮಹಾನ ವ್ಯಕ್ತಿಯ ಪುತ್ತಳಿಗೆ ಅವಮಾನ ಮಾಡುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯ ಕೊಟನೂರ ಗ್ರಾಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಎಸಗಿ ಪಟಾಕಿಯನ್ನು ಸಿಡಿಸಿ ವಿಕ್ರತಿ ಮೆರೆದಿದ್ದಾರೆ. ಇನ್ನೂ ಕೇಲವು ಜಿಲ್ಲೆಗಳಲ್ಲಿ ಡಾ॥ ಬಾಬಾ ಸಾಹೇಬ ಅಂಬೇಡ್ಕರ ರವರ ಪುತ್ಕಳಿಗೆ ಅವಮಾನ ಮಾಡುವುದು ಕಂಡು ಬರುತ್ತಿದೆ.
ಘನ ಸರ್ಕಾರ ದಲಿತರ ಮೇಲೆ ದೌರ್ಜನ್ಯ ನಡೆದರೆ ಸರ್ಕಾರ ಸಹಿಸುವುದಿಲ್ಲಾ ಎಂದು ಹೇಳುತ್ತಲೆ ಇದೆ. ಇಲ್ಲಿ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಿಲ್ಲುತ್ತಿಲ್ಲಾ. ಕೆಲ ಬ್ರಷ್ಟ ಕಿಡಿಗೆಡಿಗಳು ಸಂವಿಧಾನದ ಬಗ್ಗೆ ಅವಹೇಳನಕಾರಿ ಮಾಡುತ್ತಿದ್ದಾರೆ. ಇಂತಹವುಗಳು ಘಟನೆ ನಡೆದಾಗ ಆ ತಪಿಸ್ಥರಿಗೆ ಜಾಮೀನು ಮಂಜೂರಿಯಾಗದಂತೆ ಮತ್ತು ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡುವುದು ಘನ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಡಾ|| ಬಾಬಾ ಸಾಹೇಬ ಅಂಬೇಡ್ಕರವರ ಪುತ್ಕಳಿಗೆ ಅವಮಾನ ಮಾಡಿದವರನ್ನು ಬಂಧಿಸಿದರೆ ಕೆಲಸವಾಗುವುದಿಲ್ಲಾ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಮತ್ತು ದಲಿತ ಜನಾಂಗದ ಮೇಲೆ ಹಲ್ಲೆ, ದಬ್ಬಾಳಿಕೆ, ನಿಂದನಾ ಇವುಗಳನ್ನೆಲ್ಲಾ ನಿಲ್ಲಿಸಲು ಸೂಕ್ತ ನಿರ್ದೇಶನ ಆಡಳಿತ ವರ್ಗಕ್ಕೆ ಮಾಡಬೇಕೆಂದು ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದರು.
ಈ ಸಂಧರ್ಭದಲ್ಲಿ.ಶ್ರೀಕಾಂತ ಪೂಜಾರ.ಗಣೇಶ್ ದೊಡ್ಡಮನಿ,ಸಾಗರ ಮುನೊಳಿ, ಗೋಪಾಲ್ ಕರಡಿಗುಡ್ಡ, ,ಸಂಜು ಕಪಾಲಿ,ಮುತ್ತಣ್ಣ ಮ್ಯಾಗೇರಿ, ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಫೈರೋಜ್ ಪಠಾಣ, ಸಮೀರ್ ತೋರಗಲ್ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯರು, ಮುಖಂಡರು ಯುವಕರು ಉಪಸ್ಥಿತರಿದ್ದರು.


