ಭೀಕರ ರಸ್ತೆ ಅಪಘಾತ, ವಾಹನ ಸವಾರ ಸಾವು

WhatsApp Group Join Now

ಕಾಗವಾಡ: ತಾಲೂಕಿನ ಐಣಾಪುರ  ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಯಾದ ಪರಿಣಾಮ  ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಶುಕ್ರವಾರ ಈ ಘಟನೆ ಸಂಭವಿಸಿದ್ದು‌ ಮಲಕಾರಿ ರಾಯಪ್ಪ ಚೌಗಲಾ (31) ಮೃತ ಯುವಕ.‌ಕೆಂಪವಾಡ ಗ್ರಾಮದ ಅಥಣಿ ಶುಗರ್ಸ್ ಕಾರ್ಖಾನೆಗೆ ಕಬ್ಬು ಖಾಲಿ ಮಾಡಿ ಮೊಳೆ ಗ್ರಾಮದ ಮಾರ್ಗವಾಗಿ‌ ಬರುತ್ತಿದ್ದ. ಈ ವೇಳೆ ಐಣಾಪುರ ಪಟ್ಟಣದ ಸಮೀಪ ಟ್ರ್ಯಾಕ್ಟರ್ ವಿದ್ಯುತ್ ಕಂಬಕ್ಕೆ ಗುದ್ದಿ ಅಪಘಾತ ಸಂಭವಿಸಿದೆ.

ರಾಯಭಾಗ ತಾಲೂಕಿನ ಮೆಖಳಿ ಗ್ರಾಮದ  ಟ್ರ್ಯಾಕ್ಟರ್ ಇದಾಗಿದ್ದು, ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

About The Author