ಬೆಂಗಳೂರು ನಗರದ ಶೆರಟನ್ ಹೋಟೆಲ್ ನಲ್ಲಿ ಇಂದಿನಿಂದ ಫೆ. 18 ರವರೆಗೆ ನಡೆಯಲಿರುವ ವೈಭವದ “ದಿ ಜ್ಯುವೆಲರಿ ಷೋ” ಆಭರಣ ಮೇಳಕ್ಕೆ ಅದ್ದೂರಿ ಚಾಲನೆ ದೊರೆತಿದೆ.
ದೇಶದ 40 ಪ್ರಮುಖ, ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ತಯಾರಕರು ಭಾಗವಹಿಸಿರುವ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಬಂಗಾರ ಖರೀದಿಗೆ ಉಜ್ವಲ ಅವಕಾಶವಿದೆ. ವಿನ್ಯಾಸ, ಗುಣಮಟ್ಟದ ಆಭರಣಗಳನ್ನು ಕೈಗೆಟುವ ಬೆಲೆಯಲ್ಲಿ ಖರೀದಿಸಲು ಇದು ಸದಾವಕಾಶವಾಗಿದೆ.
ಆಭರಣ ಪ್ರದರ್ಶನಕ್ಕೆ ಚಿತ್ರನಟಿ ನಿಶ್ಚಿಕಾ ನಾಯ್ಡು ಚಾಲನೆ ನೀಡಿದರು. ಸಾಮಾಜಿಕ ಉದ್ದಿಮೆದಾರರಾದ ಪಲ್ಲಿವಿ ಸಿ.ಟಿ. ರವಿ, ಲಕ್ಷ್ಮೀ ಗೋವಿಂದ ರಾಜು, ಉದ್ದಿಮೆದಾರರಾದ ಸ್ವಪ್ನಾ ರೆಡ್ಡಿ, ಕಲಾವಿದರಾದ ಕಲಾ ಗಂಗಾಧರ್, ಪ್ಯಾಷನ್ ಡಿಸೈನರ್ ಅರ್ಪಿತಾ ರಂದೀಪ್, ಭವ್ಯ ಗೌಡ ಮತ್ತು ಜಾನಪದ ಗಾಯಕಿ ದಿವ್ಯಾ ಆಲೂರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ನಿಶ್ಚಿಕಾ ನಾಯ್ಡು, ಮಾತನಾಡಿ ಮೇಳದಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಗ್ರಾಹಕರು ಆಭರಣ ಖರೀಸುವುದಾಗಿ ಮೇಳದಲ್ಲಿ ಉಜ್ವಲ ಅವಕಾಶವಾಗಿದೆ. ಬಂಗಾರ ಖರೀದಿಸಲು ಇದು ಬಂಗಾರದ ಅವಕಾಶವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಮಹತ್ವದ ಆಭರಣ ಮೇಳವನ್ನು ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿದ್ದಾರೆ.
ಮೇಳದಲ್ಲಿ ಬೆಂಗಳೂರಿನ ಅನನ್ಯ ಜುವೆಲ್ಸ್, ಎಂ.ಪಿ. ಸ್ವರ್ಣ ಮಹಲ್, ನೀಲಕಂಠ, ಪಿ.ಎಂ.ಜೆ ಪ್ರಕಾಶ್ ಜುವೆಲರ್ಸ್, ಸಿಂಹ ಜುವೆಲ್ಲರ್ಸ್, ಶ್ರೀ ಗಣೇಶ್ ಡೈಮಂಡ್ಸ್, ವರಶ್ರೀ, ಕಿಯಾ, ಡಯಾಮ್ಸ್, ಡಿ.ಆರ್.ಎನ್. ವಿವಾಂತ್, ವಿತ್ರಾಗ್, ಶ್ರೀ ಕುಮಾರನ್ ತಂಗಮಳಿಗೈ, ವಂಡರ್ ಡೈಮಂಡ್ಸ್, ರೂಪಂ ಸಿಲ್ವರ್, ಮೈ ಸಿಲ್ವರ್, ಸ್ಯಾಂಚೀಸ್, ಸಿಲ್ವರ್ ಗ್ಯಾಲರಿ, ಮದನ್ ಜೇಮ್ಸ್, ನಿಸ್ವಾದಿತ, ಸ್ಟೈಲ್ ಔರ್, ಹರ್ ಹಮ್, ಔರಾ, ಶ್ರೀಹರಿ ಡೈಯಾಜಮ್ಸ್, ಗೋಲ್ಡ್ ಕ್ಯಾರೇಟ್, ಶ್ರೀ ಗೋಲ್ಡ್ ಪಾರಮನಿ, ಮೆಹ್ತಾ ಬ್ರದರ್ಸ್, ಲೈಮ್ ಲೈಟ್ ಡೈಮಂಡ್ಸ್, ಸ್ಯಾಂಜಿನಿ, ಕೊಹೀರಾ, ಬಿ.ಎನ್.ಆರ್. ಡೈಮಂಡ್ಸ್, ಸ್ರಸ್ಟ, ನಿತ್ಯಾಸ್, ಸುನಿಲ್ ಜುವೆಲರ್ಸ್, ಶ್ರೀ ಜುವೆಲ್ಸ್, ಬನೇತಿ ಎಕ್ಸ್ ಪೋರ್ಟ್ಸ್, ಪನ್ನ ಜುವೆಲರ್ಸ್, ಕಿಯಾಮ ಕಲೆಕ್ಷನ್ಸ್ ಭಾಗವಹಿಸಿವೆ.



