ಕಾನಿಪ ಧ್ವನಿ ಹೋರಾಟಕ್ಕೆ ಜಯದ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪುತ್ತಳಿಗೆ ಮಾಲಾರ್ಪಣೆ

WhatsApp Group Join Now

ಕಿತ್ತೂರು ರಾಣಿ ಚೆನ್ನಮ್ಮ ನವರ ಐಕ್ಯವಾದಂತ ಸ್ಥಳ ಬೈಲಹೊಂಗಲವಾದ ಹಿನ್ನೆಲೆ ಹಾಗೂ ನಮ್ಮ ಧ್ವನಿಯ ಹೋರಾಟ ಪ್ರಾರಂಭವಾಗಿದ್ದು ಈ ಅಮ್ಮನ ಸಮಾಧಿ ಪವಿತ್ರ ಸ್ಥಳದಿಂದ ನಮಗೆ ಪ್ರಥಮ ಜಯವೆನ್ನುವಂತೆ ಗ್ರಾಮೀಣ ಪತ್ರಕರ್ತರಿಗೆ ಓಡಾಡಲು ಉಚಿತ ಬಸ್-ಪಾಸ್ ಸೌಲಭ್ಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಈ ಜಯದಿಂದ ನಮಗೆ ಒಂದು ಬೇಡಿಕೆ ಈಡೇರಿದ್ದು ಇನ್ನುಳಿದಂತ ಒಂಬತ್ತು ಬೇಡಿಕೆಗಳಲ್ಲಿ ಪ್ರಮುಖ ಪತ್ರಕರ್ತರ ರಕ್ಷಣಾ ಕಾಯ್ದೆ,ಪತ್ರಕರ್ತರ ಜೀವವಿಮೆ,ಸೇವಾಭದ್ರತೆಯ ಪೇಸ್ಲಿಫ್,ನಿವೃತ್ತರಾಗುವ ಪ್ರತಿಯೊಬ್ಬ ವರದಿಗಾರರಿಗೂ ಸರ್ಕಾರದಿಂದ ಮಶಾಸನ ಹಾಗೂ ಟೋಲ್ ಪ್ರೀ ಮುಂತಾದ ಬೇಡಿಕೆಗಳ ಈಡೇರಿಕೆಗೆ ಕಾನಿಪ ಧ್ವನಿ ಸಂಘಟನೆಗೆ ಶಕ್ತಿ ನೀಡಿ ಆರ್ಶಿವಧಿಸು ಎಂದು ರಾಣಿ ಚೆನ್ನಮ್ಮನವರಿಗೆ ಮನಸಾರೆ ಪ್ರಾರ್ಥನೆ ಸಲ್ಲಿಸುವುದರ ಮುಖಾಂತರ ಮಾಲಾರ್ಪಣೆಯನ್ನು ಸಲ್ಲಿಸಿದರು
ಈ ವೇಳೆ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಬಗಳಾಂಬಿಕ ದೇವಸ್ಥಾನದ ಸ್ವಾಮೀಜಿ ಹಾಗೂ ಬೈಲಹೊಂಗಲದ ಕಾನಿಪ ಧ್ವನಿ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author