
ರಾಮದುರ್ಗ ತಾಲೂಕಿನ ಹಳೇ ತೋರಗಲ್ಲ ತಾಂಡಾದಲ್ಲಿ ಸುಮಾರು 80 ವರ್ಷಗಳಿಂದ ಸುಮಾರು 60 ಕುಟುಂಬಗಳು ವಾಸವಾಗಿವೆ. ಅದರಲ್ಲಿ ಸುಮಾರು22 ಕುಟುಂಬಗಳು 3 ರಿಂದ ನಾಲ್ಕು ಏಕರೆಯಂತೆ ತಮ್ಮ ಉಪಜೀವನಕ್ಕಾಗಿ ಅರಣ್ಯ ಇಲಾಖೆಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. 1986 ರಿಂದ ಆಯಾ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರು ಯಾವುದೇ ಪರಿಹಾರ ಸಿಕ್ಕಿಲ್ಲ.
ಆದರೇ ಸಾಗುವಳಿ ಮಾಡಿತ್ತಿರುವ ಭೂಮಿಯಲ್ಲಿ ಅರಣ್ಯ ಇಲಾಖೆುಂದ ಸಸಿ ನೆಡುವ ಕುರಿತು ಗಮನಕ್ಕೆ ಬಂದಾಗ ಬಂಜಾರ ಸಮಾಜದ ಹೋರಾಟಾಗಾರರೊಂದಿಗೆ ಸಾಗುವಳಿ ಮಾಡುತ್ತಿರುವ ರೈತರು ಬೆಳಗಾವಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ, ಅಲ್ಲಿಂದ ಗೋಕಾಕ ಹಾಗೂ ರಾಮದುರ್ಗ ಅರಣ್ಯ ಇಲಾಖೆಗೆ ಪತ್ರ ನೀಡಿದ್ದರು ಯಾವುದೇ ನ್ಯಾಯ ಸಿಕ್ಕಿಲ್ಲ.
ಇದರಿಂದ ಮತ್ತೇ ಬೆಳಗಾವಿ ಅರಣ್ಯ ಇಲಾಖೆಗೆ ತೆರಳಿ ಮನವಿ ಪತ್ರ ಸಲ್ಲಿಸಿದಾಗ ತಮ್ಮ ತಮ್ಮ ಸಾಗುವಳಿ ಮಾಡುತ್ತಿರುವ ಜಮೀನುಗಳಲ್ಲಿ ನಿಂತು ಭಾವಚಿತ್ರ ತೆಗೆಯುವಲಾಗುವದು ಎಂದು ಹೇಳಿ ಅದರಂತೆ ಜಮೀನುಗಳಲ್ಲಿ ರೈತರನ್ನು ನಿಲ್ಲಿಸಿ ಭಾವಚಿತ್ರ ತೆಗೆದು ಒಂದು ಪ್ರತಿಯನ್ನು ರೈತರಿಗೆ ನೀಡಲಾಗಿದೆ. ಈ ಕುರಿತು ಫೆಬ್ರವರಿ 12 ರಂದು ಬೆಂಗಳೂರಿನಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಆದರೇ ಇಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೂರು ಜೆಸಿಬಿ ಯಂತ್ರಗಳನ್ನು ತಂದು ಸಾಗುವಳಿ ಮಾಡುತ್ತಿರುವ ಜಮೀನುಗಳಲ್ಲಿ ಗುಂಡಿ ತೋಡಲು ಮುಂದಾಗಿದ್ದು, ಇದರಿಂದ ನಮ್ಮ ಹೊಟ್ಟೆಯ ಮೇಲೆ ಹೊಡೆದಂತಾಗುತ್ತಿದೆ ಎಂದು ರೈತರು ಸಿಬ್ಬಂದಿಗಳೊಂದಿಗೆ ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರು ಆಗಮಿಸಿ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ ಅಲ್ಲಿ ಈ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮವಹಿಸುವಂತೆ ತಿಳಿಸಿದರು.


