2024ರ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗ ವಕ್ತಾರರು, ಶ್ರೀಮತಿ ಲಕ್ಷ್ಮೀ ಕೆ. ನಾಗಣ್ಣವರ ಹೇಳಿದರು

WhatsApp Group Join Now

50 ವರ್ಷಗಳಿಂದ ಲೋಕಸಭಾ ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಿರುವುದಿಲ್ಲ. ಕಳೆದ
ವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಜಿಲ್ಲೆ ಅಂತಾ ವಿಕೇಂದ್ರಿಕರಣ ಮಾಡಿ
ಸೀಟಗಳನ್ನು ಹಂಚಿಕೆ ಮಾಡಿದ್ದರು. ಆ ಸಂದರ್ಭದಲ್ಲಿ ಚಿಕ್ಕೋಡಿ ಭಾಗದವರಿಗೆ ಪ್ರಾಶಸ್ತ್ರ ನೀಡಿದರು.
ಬೆಳಗಾವಿಯವರಿಗೆ ನೀಡಲಿಲ್ಲ. ಕನಿಷ್ಠ 6 ಲಕ್ಷ ಮತಗಳು ಪರಿಶಿಷ್ಟ ಜಾತಿಯ ಬೆಳಗಾವಿ ಲೋಕಸಭೆಯಲ್ಲಿ
ಇರುವುದರಿಂದ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಹಾಗೂ ನಿಗಮಮಂಡಳಿಗಳಲ್ಲಿ ನಮಗೆ
ಈಗಿನವರೆಗೂ ಅನ್ಯಾಯವಾಗುತ್ತಾ ಬರುತ್ತಿದೆ. 75 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮೂಲ ಬುನಾದಿ
ಆಗಿರುವ ಪ್ರಜೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಇಂದಿನವರೆಗೂ ಪ್ರಾದ್ಯಾನ್ಯತೆ ಸಿಗದೆ
ಕಡೆಗಣಿಸಲಾಗುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಅಭ್ಯರ್ಥಿಯಾಗಿ ಘೋಷಿಸಬೇಕು
ಹಾಗೂ ನಮ್ಮೆಲ್ಲರ ಅಭ್ಯರ್ಥಿಯಾದ ಶ್ರೀ ಅನಂತಕುಮಾರ ಯ, ಬ್ಯಾಕೂಡ, ಬೆಳಗಾವಿ ಜಿಲ್ಲಾ (ಗ್ರಾಮೀಣ)
ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಇವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡಲು ಈ ಮೂಲಕ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ, ಸಂಸದರಾದ ಸನ್ಮಾನ್ಯ ಶ್ರೀ
ರಾಹುಲ ಗಾಂಧಿಯವರಿಗೆ, ರಾಜಸಭಾ ಸದಸ್ಯರಾದ ಸನ್ಮಾನ್ಯ ಶ್ರೀಮತಿ ಸೋನಿಯಾ ಗಾಂಧಿಯವರಿಗೆ,
ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಮಾನ್ಯ ಕರ್ನಾಟಕದ ಉಪ ಮುಖ್ಯ
ಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ
ಜಾರಕಿಹೊಳಿಯವರಿಗೆ ಹಾಗೂ ಕರ್ನಾಟಕದ ಮುಖ್ಯ ಸಚೇತಕರಾದ ಶ್ರೀ ಅಶೋಕ ಪಟ್ಟಣವರಿಗೆ ಜಿಲ್ಲಾ
ಘಟಕದಿಂದ ಮನವಿ ಮಾಡಿದರು

ಈ ವೇಳೆ ಡಿ ಆರ್ ದೊಡಮನಿ ದಲಿತ ಮುಖಂಡರು. ರಮೇಶ್ ರಜಪೂತ ಜಿಲ್ಲಾ ಉಪಾಧ್ಯಕ್ಷಕರು ಬೆಳಗಾವಿ. ಸಾಗರ್ ಮನವಳ್ಳಿ ಪ್ರಧಾನ ಕಾರ್ಯದರ್ಶ. ಧರ್ಮಣ್ಣ ದೊಡಮನಿ ಉಪಸ್ಥಿತರಿದ್ದರು

About The Author