
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಶನಿವಾರದಂದು ಸುರೇಬಾನ ನೂತನ ಪೊಲೀಸ್ ಠಾಣೆಯನ್ನು ಸನ್ಮಾನ್ಯ ಅಶೋಕ ಮ. ಪಟ್ಟಣ ಸರ್ಕಾರಿ ಮುಖ್ಯ ಸಚೀತಕರು ಕರ್ನಾಟಕ ವಿಧಾನಸಭೆ ಬೆಂಗಳೂರು ಹಾಗೂ ಶಾಸಕರು ರಾಮದುರ್ಗ ಇವರು ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿ ಮಾತನಾಡಿ ಎಲ್ಲಿ ಅಪರಾಧ ಪ್ರಕರಣಗಳು ಜಾಸ್ತಿ ಇದೆಯೋ ಅಲ್ಲಿ ಪೊಲೀಸ್ ಠಾಣೆ ನಿರ್ಮಿಸಬೇಕೆಂಬ ಕಾನೂನು ಇದ್ದರೂ ಸುರೇಬಾನ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಠಾಣೆ ತೆರೆಯಲಾಗಿದೆ ಕಳೆದ ಹತ್ತು ವರ್ಷಗಳ ಹಿಂದೆ ನಮ್ಮ ಅವಧಿಯಲ್ಲಿಯೇ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಯತ್ನಿಸಿದ್ದೇವೆ ನಂತರ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಕೆಲಸ ವಿಳಂಬವಾಗಿತ್ತು ಇದೀಗ ಮತ್ತೆ ನಮ್ಮ ಅವಧಿಯಲ್ಲಿ ಸರಕಾರ ಬಂದಿದ್ದು ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಸರ್ಕಾರ ಬಂದ ಆರು ತಿಂಗಳಲ್ಲಿಯೇ ಪೊಲೀಸ್ ಠಾಣೆ ನಿರ್ಮಾಣವಾಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಹಾಗೆ ಪೊಲೀಸ್ ಅಧಿಕಾರಿಗಳು ಸಹ ಸಾರ್ವಜನಿಕರ ಜೋತೆ ಸಹಕಾರ ದಿಂದ ವರ್ತಿಸಬೇಕು ನೂತನ ಉದ್ಘಾಟನೆಯಾದ ಸುರೇಬಾನ ಪೊಲೀಸ್ ಠಾಣೆಗೆ ಒಟ್ಟು 32 ಗ್ರಾಮಗಳು ಬರುತ್ತವೆ ಎಂ. ಕಲ್ಲಾಪೂರ, ಮುದಕವಿ, ಎಂ. ಖಾನಾಪೂರ, ಎಂ. ತಿಮ್ಮಾಪೂರ ಮುಳ್ಳೂರ ಮುದೇನಕೊಪ್ಪ, ಕಡ್ಡಿಕೊಪ್ಪ, ಕಲ್ಲೂರ, ಲಕ್ಕನಾಯ್ಕನಕೊಪ್ಪ, ಜಾಲಿಕಟ್ಟಿ, ಸುರೇಬಾನ, ಮನಿಪಾಳ, ಶಿವಪೇಶ, ರೇವಡಿಕೊಪ್ಪ, ಅವರಾದಿ, ಸಂಗಳ, ಚಿಕ್ಕೊಪ್ಪ, ಎಸ್.ಕೆ.ಕಲಹಾಳ, ಕಿತ್ತೂರ, ಹೂಲಿಗೊಪ್ಪ, ಗೊನ್ನಾಗರ, ಹಂಪಿಹೊಳಿ, ಮಾರಡಗಿ ಹಿರೇಮೂಲಂಗಿ, ಚಿಕ್ಕಮೂಲಂಗಿ, ಲಿಂಗದಾಳ, ಇಡಗಲ್, ಬೆನ್ನೂರ, ಹಿರೇತಡಸಿ ಚಿಕ್ಕತಡಸಿ, ಹೊಸಕೇರಿ, ಕರಡಿಗುಡ್ಡ. ಗ್ರಾಮಗಳು ಬರುತ್ತವೆ ಮೊದಲಿಗೆ ನೀವು ಯಾವುದೇ ತಂಟೆ ತಕರಾರು ಇದ್ದರೆ ರಾಮದುರ್ಗ ಪೊಲೀಸ್ ಠಾಣೆಗೆ ಹೋಗಬೇಕಾಗಿತ್ತು ಆದರೆ ಈಗ ಜನರಿಗೆ ಅನುಕೂಲವಾಗಲೆಂದು ಸುರೇಬಾನದಲ್ಲಿ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಾಗಿದೆ ಸಾರ್ವಜನಿಕರ ಏನು ಸಮಸ್ಯೆ ಇದ್ದರೂ ಸುರೇಬಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ ಎನ್ ಎಸ್ ಮಾತನಾಡಿ ನಾವು ನಿಮಗಾಗಿ ಇದ್ದೇವೆ ನಿಮ್ಮ ರಕ್ಷಣೆಯೇ ನಮ್ಮ ಆಧ್ಯ ಕರ್ತವ್ಯವಾಗಿದೆ ಆದ್ದರಿಂದ ಸಾರ್ವಜನಿಕರು ನಮ್ಮ ಜೊತೆ ಸಹಕಾರ ನೀಡಬೇಕು, ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್, ಹಾಗೂ ಸೀಟ್ ಬೇಲ್ಟ್ ಧರಿಸಬೇಕು ಎಂದು ಜನರಲ್ಲಿ ಜಾಗೃತಿ ತಿಳಿಸಿದರು
ಈ ವೇಳೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ. ಭೀಮಾಶಂಕರ ಗುಳೇದ ಮಾತನಾಡಿ ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ನೂತನ ಪೊಲೀಸ್ ಠಾಣೆ ನಿರ್ಮಾಣವಾಗಿದ್ದು 32 ಹಳ್ಳಿಗಳಿಗೂ ಅನುಕೂಲವಾಗಿದೆ ನಾವು ನಿಮ್ಮ ಜೊತೆಗೆ ಇದ್ದೇವೆ ನೀವು ನಮ್ಮ ಜೊತೆಗೆ ಕೈ ಜೋಡಿಸಿ ಸಹಕಾರ ನೀಡಿದ್ರೆ ಅಪರಾಧ ರಹಿತ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ನಮ್ಮ ಕೈಯಲ್ಲಿ ಇದ್ದಂತ ಒಂದು ಮೊಬೈಲಿಗೆ ಮೊಬೈಲ್ ಕವರನ್ನು ಹಾಕಿಕೊಳ್ಳುತ್ತೇವೆ ಹೀಗೆ ನಾವು ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಿಮ್ಮ ಜೀವನವನ್ನು ಉಳಿಸಿಕೊಳ್ಳಿ ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಮ್ಮ ಜೀವ ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಕಳೆದ ಒಂದು ವರ್ಷದಲ್ಲಿ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತಗಳು ನಡೆದಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅನ್ನದಾನೇಶ್ವರ ಹಿರೇಮಠ, ಮುಳ್ಳೂರ, ಶ್ರೀ ಗುರುದೇವ ಸಮರ್ಥ ಶಿವಾನಂದ ಮಹಾ ಸ್ವಾಮಿಗಳು ಗುರುದೇವ ಆತ್ಮಾನಂದ ಪುಣ್ಯಾಶ್ರಮ, ಮನಿಹಾಳ, ಹಾಗೂ ಶ್ರೀ ಮ. ನಿ. ಪ್ರ.ಶಿವಮೂರ್ತಿ ಮಹಾಸ್ವಾಮಿಗಳು ಫಲಾಹಾರೇಶ್ವರ ಸಂಸ್ಥಾನ ಮಠ, ಅವರಾಧಿ , ಪೊಲೀಸ್ ಉಪ ಅಧೀಕ್ಷಕರು ಪಾಂಡುರಂಗಯ್ಯ ಎಂ, ಪೊಲೀಸ್ ವೃತ್ತ ನಿರೀಕ್ಷಕರು, ಆಯ್.ಆರ್.ಪಟ್ಟಣಶೆಟ್ಟಿ , ಪೊಲೀಸ್ ಉಪ ನಿರೀಕ್ಷಕರು ಎಸ್.ಎಚ್.ಪವಾರ .ಸುರೇಬಾನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಷ್ಪಾ ಸುಣಗಾರ, ಉಪಾಧ್ಯಕ್ಷರು ಬಸವ್ವ ಭಜಂತ್ರಿ, ಮನಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಣಮವ್ವ ಪಿಡ್ಡಣ್ಣವರ, ಉಪಾಧ್ಯಕ್ಷರು ಹಣಮವ್ವ ಪ್ಯಾಟಿ, ತಾಲೂಕಾ ದಂಡಾಧಿಕಾರಿ ಸುರೇಶ ಚವಲರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ಹಾಗೂ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


