ಬೀಡಕಿ ಗ್ರಾಮದ ಶಿವಾನಂದ ಮಠದಲ್ಲಿ ನೂತನ ಗೋಶಾಲೆಯನ್ನು ಕಾಂಗ್ರೆಸ್ ಮುಖಂಡ ಪ್ರದೀಪ್ ಪಟ್ಟಣ ಉದ್ಘಾಟಿಸಿದರು.

ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದ ಶಿವಾನಂದ ಮಠದಲ್ಲಿ ಸದ್ಗುರು ಶ್ರೀ ರುದ್ರಮುನಿ ಮಹಾಸ್ವಾಮಿಗಳ ಗೋ ಶಾಲೆಯನ್ನು ಕಾಂಗ್ರೆಸ್ ಮುಖಂಡ ಪ್ರದೀಪ್ ಪಟ್ಟಣ ಉದ್ಘಾಟಿಸಿ ಮಾತನಾಡಿದ ಅವರು, ಗೋವುಗಳೆಂದರೆ ಪೂಜ್ಯ ಭಾವನೆ ಕಾಣುವ ನಮ್ಮಲ್ಲಿ ಅವುಗಳನ್ನು ರಕ್ಷಿಸುವದು ಅಷ್ಟೇ ಮುಖ್ಯವಾಗಿದೆ. ಪುಟ್ಟ ಗ್ರಾಮದಲ್ಲಿ ಶಿವಾನಂದ ಮಠದ ಶ್ರೀಗಳು ಗೋಶಾಲೆ ಆರಂಭಿಸಿರುವ ಮೂಲಕ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಗೋ ಶಾಲೆ ಆರಂಭಿಸಿದ್ದು ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಸಂದರ್ಭ. ಶ್ರೀ ಮಠದ ಗೋ ಶಾಲೆಗೆ ಬೇಕಾಗುವ ಎಲ್ಲ ಸೌಲಭ್ಯವನ್ನು ಕೂಡಲೇ ಮಾಡಿಸಿ ಕೊಡುತ್ತೇವೆ. ಬೀಡಕಿ ಹಾಗೂ ಸುತ್ತಲಿನ ಗ್ರಾಮಗಳ ಜನತೆ ಪುಣ್ಯವಂತರು. ಶ್ರೀಮಠಕ್ಕೆ ಒಳ್ಳೆಯ ಗುರುಗಳು ಬಂದಿದ್ದಾರೆ. ಎಲ್ಲರೂ ಸೇವೆ ಮಾಡಿ ನಿಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಅಜ್ಜಪ್ಪ ಕುಲಗೋಡ ಮಾತನಾಡಿ, ಗೋ ಸೇವೆ ಪವಿತ್ರವಾದುದು. ಗೋವುಗಳನ್ನು ದಾನ ಮಾಡುವುದರೊಂದಿಗೆ ಸೇವೆ ಮಾಲಡು ರೈತರು, ದಾನಿಗಳು ತರುಣರು ಸಹಕರಿಸಬೇಕು. ಗೋ ಮಾತೆ ತಮ್ಮ ತಾಯಿ ಇದ್ದಂತೆ ಅವುಗಳನ್ನು ಪೂಜಿಸಬೇಕು, ಪ್ರೀತಿಸಬೇಕು. ಗೋವುಗಳನ್ನು ಸ್ಪರ್ಶ ಮಾಡಿದರೆ ಹಲವಾರು ರೋಗಗಳು ದೂರವಾಗುತ್ತವೆ ಎಂದು ತಿಳಿಸಿದರು.
ನೇತೃತ್ವದ ವಹಿಸಿದ್ದ ಬೀಡಕಿ ಶಿವಾನಂದ ಮಠದ ಶ್ರೀ ಗಂಗಾದರ ಸ್ವಾಮೀಜಿ ಮಾತನಾಡಿ, ಗ್ರಾಮದ ಹಾಗೂ ಸುತ್ತಲಿನ ಎಲ್ಲ ಭಕ್ತರು ತಮ್ಮ ತನು-ಮನ-ಧನ ಹಾಗೂ ಸೇವೆಯನ್ನು ಸಲ್ಲಿಸುವುದರೊಂದಿಗೆ ಶ್ರೀಮಠದ ಗೋಶಾಲೆಯನ್ನು ಎತ್ತರಕ್ಕೆ ಬೆಳೆಸಿರಿ ಮತ್ತು ಗೋಮಾತೆಯ ಆಶೀರ್ವಾದದಿಂದ ಸಕಲಸೌಭಾಗ್ಯ ಹಾಗೂ ಆರೋಗ್ಯ ಭಾಗ್ಯವನ್ನು ಪಡೆುರಿ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಮನ್ನಿಕೇರಿ ವಿಜಯಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ವಿಭೂತಿ, ಗೋ ಅರ್ಕ, ಗಂಜಲ, ಸಾವಯುವ ಗೊಬ್ಬರ, ಗೋದೀಪಗಳು, ಮೊಬೈಲ್ ಸ್ಕಾನ್, ದಂತಮಂಜನ, ತುಪ್ಪ ಎಲ್ಲವೂ ಲಾಭದಾಯಕ ಔಷದಿ ವಸ್ತುಗಳಾಗಿವೆ. ಇವೆಲ್ಲವುಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ರಾಣಿಬೆನ್ನೂರ ಶ್ರೀ ಕೃಷ್ಣಾನಂದ ಸ್ವಾಮೀಜಿ, ಮುಖಂಡ ಬಿ.ಎಸ್. ನಾಯ್ಕ ಮಾತನಾಡಿದರು. ಸದಾಶಿವ ಮಾತನವರ, ಸಿದ್ದಪ್ಪ ಗುಡದೂರ, ಬಸವರಾಜ ಅಳಗವಾಡಿ, ಸುರೇಶ ದೇಸಾಯಿ ಉದ್ದಪ್ಪ ಗುಡಸಲಮನಿ, ಉಮೇಶ ಹಿರೇಮಠ, ಬಸಪ್ಪ ನರೇಂದ್ರ, ಜಗದೀಶ ದೇಸಾಯಿ, ರಂಗನಗೌಡ ಪಾಟೀಲ, ಬಸವರಾಜ ಸಂಗಟಿ, ಮೆಹಬೂಬ ಖಾಜಿ, ಎಸ್.ಸಿ.ನುಗ್ಲಿ, ಶಿವಪ್ರಸಾದ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಅಂಗಡಿ ಸ್ವಾಗತಿಸಿ, ವಂದಿಸಿದರು.
