ಬೆಕ್ಕಿನಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಲಕ್ಷ್ಮೀ ದೇವಿ ಮಂದಿರದ ಮೂರ್ತಿಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಿದರು

WhatsApp Group Join Now

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಲಕ್ಷ್ಮೀ ದೇವಿ ಮಂದಿರದ ವಾಸ್ತುಶಾಂತಿ ಹಾಗೂ ಮೂರ್ತಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಿ ಮಾತನಾಡಿದ ಅವರು ಈ ಗ್ರಾಮದಲ್ಲಿ‌ ಶ್ರೀ ಲಕ್ಷ್ಮೀ ಮಂದಿರ ಕಟ್ಟಡದ ನಿರ್ಮಾಣ‌ ಒಂದು ಕನಸಾಗಿತ್ತು, ಇಂದು ಆ ಕನಸು ಸಾಕಾರಗೊಂಡಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಧಾರ್ಮಿಕವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಈಗಾಗಲೇ 100 ಕ್ಕೂ ಅಧಿಕ ಗುಡಿ ಗೋಪುರಗಳು ಜೀರ್ಣೋದ್ಧಾರಗೊಂಡಿವೆ. ಕ್ಷೇತ್ರ ನನ್ನನ್ನು ಮನೆಯ ಮಗಳಾಗಿ ಸ್ವೀಕರಿಸಿ, ದ್ವೀತಿಯ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ರಾಜ್ಯದಲ್ಲಿ‌ ಮಂತ್ರಿಯನ್ನಾಗಿ ಮಾಡಿದೆ. ಕ್ಷೇತ್ರದ ಜನರ ಪ್ರೀತಿ‌, ಪ್ರೋತ್ಸಾಹ, ಆಶೀರ್ವಾದಕ್ಕೆ ನಾನು ಸದಾ ಚಿರಋಣಿ.

ಕಾರ್ಯಕ್ರಮದಲ್ಲಿ ಯುವರಾಜಣ್ಣ ಕದಂ, ಜಯವಂತ ಸಾವಂತ, ನಾರಾಯಣ ಬಂಡಾರಗೆ, ಅರುಣ ಗಾವಡೆ, ಮಾರುತಿ ಖಾದರವಾಡ್ಕರ್, ನಾರಾಯಣ ಸಾವಂತ, ಮಲ್ಲಪ್ಪ ಗಾವಡೆ, ಗಾವಡು ಗಾವಡೆ, ನಾಗೇಶ ಬಾಳೇಕುಂದ್ರಿ, ನಾರಾಯಣ ಬಾಳೇಕುಂದ್ರಿ, ನಾರಾಯಣ ಬೆಳಗಾಂವ್ಕರ್, ಮಹಾದೇವ ಬಿ. ಚಬ್ಬುಬಾಯಿ ಕಾಂಬಳೆ, ಅರುಣ‌ ಬೋಗನ್, ಮಲಪ್ರಭಾ ಗಾವಡೆ, ಬೇಬಿತಾಯಿ ಗಾವಡೆ, ಲಕ್ಷ್ಮೀ ಗಾವಡೆ, ಎಸ್. ಎಲ್. ಚೌಗುಲೆ, ಕಲ್ಪನಾ ಕಾಂಬಳೆ, ರಘುನಾಥ್ ಖಂಡೇಕರ್, ಮನೋಹರ್ ಬೆಳಗಾಂವ್ಕರ್, ಬಾಳಕೃಷ್ಣ ತೆರಸೆ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಭಾಗವಹಿಸಿದ್ದರು

About The Author