
8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಹಲಗತ್ತಿ ಸನ್ 2023-24 ನೇ ಶೈಕ್ಷಣಿಕ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸ್ನೇಹ ಸಮ್ಮೇಳನ ಶಾಲಾ ಆವರಣದಲ್ಲಿ ಜರಗಿತು ಸಮಾರಂಭದ ಅಧ್ಯಕ್ಷತೆಯನ್ನು ಎಸಡಿಎಂಸಿ ಅಧ್ಯಕ್ಷರು ವಹಿಸಿದ್ದರು,ಉಪಾಧ್ಯಕ್ಷರು, ಸರ್ವ ಸದಸ್ಯರು ಭಾಗವಹಿಸಿ ಮಕ್ಕಳಿಗೆ ಭವಿಷ್ಯದಲ್ಲಿ ಓದಿನ ಮಹತ್ವ ತಿಳಿಸಿದರು.ವೇದಿಕೆಯಲ್ಲಿ ಆಸೀನರಾದ ಎಲ್ಲ ಗಣ್ಯರನ್ನು ಪ್ರಭಾರಿ ಪ್ರಧಾನ ಗುರುಗಳಾದ ಶ್ರೀ ಬಿ.ವಾಯ್. ಅಪ್ಪಾಜಿಗೌಡ್ರ ಸ್ವಾಗತಿಸಿ ಶಿಕ್ಷಕರಿಂದ ಆತ್ಮೀಯ ಮಾಲಾರ್ಪಣೆ ಮಾಡಿಸಿ ಆತ್ಮೀಯ ಸ್ವಾಗತ ಮಾಡಿದರು.ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಶ್ರೀ ಎಂ.ಎಚ್.ನರಸನಗೌಡ್ರ. ನಿವೃತ್ತ ಮುಖ್ಯೋಪಾಧ್ಯಾಯರು. ಸರಕಾರಿ ಪ್ರೌಢ ಶಾಲೆ ಇವರು ಮಕ್ಕಳಿಗೆ ಹಿತವಚನ,ಕಿವಿಮಾತು,ಹೇಳಿ ಮಕ್ಕಳ ಭವಿಷ್ಯದ ಬಗ್ಗೆ ಮಾರ್ಗದರ್ಶನ ಮಾಡಿ ದುಶ್ಚಟಗಳಿಂದ,ಮೊಬೈಲ್ ನಿಂದ ದೂರವಿರಿ.ಮೊದಲು ಶಿಕ್ಷಣ, ನಂತರ ಎಲ್ಲಾ ಸೌಲಭ್ಯ ತಾವಾಗಿಯೇ ಬರುವವು ಎಂದು ಮಾರ್ಗದರ್ಶನ ಮಾಡಿದರು.ಬಿಳ್ಕೊಡುವ ಸಮಾರಂಭ ಯಶಸ್ವಿಯಾಗಿ ಜರುಗಿತು.ಎಲ್ಲಾ ಗುರುವೃಂದ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಎಲ್ಲಾ ಅತಿಥಿಗಳಿಗೆ, ಮಕ್ಕಳಿಗೆ ಸಿಹಿಭೋಜನ ಊಟ ಬಡಿಸಲಾಯಿತು. ಹಲವಾರು ಮಕ್ಕಳು ತಮ್ಮ ಅನಿಸಿಕೆ ಹೇಳುತ್ತಾ ಭಾವನಾತ್ಮಕವಾಗಿ ಮಾತನಾಡಿದರು


