
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ
ಬಾಳ ಗ್ರಾಮ ಪಂಚಾಯತ್ ಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ
ಕಾರ್ಡೋಲೈಟ್ ಸ್ಪೆಷಲ್ಟಿ ಕೆಮಿಕಲ್ಸ್ ಇಂಡಿಯಾ ಎಲ್.ಎಲ್.ಪಿ ಇವರಿಂದ ಆರ್ಥಿಕ ವಾಗಿ ಹಿಂದುಳಿದ ಮತ್ತು ದುರ್ಬಲ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಶ್ರೀ ದಿವಾಕರ್ ಕದ್ರಿ ಜನರಲ್ ಮೆನೇಜರ್ ರವರು ಮಾತಾನಾಡಿ ನಮ್ಮ ಕಂಪನಿಯ ಲ್ಲಿ ಶೇಕಡಾ 98 ರಷ್ಟು ಊರಿನ ಜನರಿಗೆ ಕೆಲಸ ನೀಡಲಾಗಿದೆ .ಈ ಕಂಪನಿಯ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮರು ಉಪಯೋಗ ಮಾಡಲಾಗುತ್ತಿದೆ .ಮಹಿಳೆಯರ ಸಬಲೀಕರಣದ ಉದ್ದೇಶ ದಿಂದ ನಮ್ಮ ಕಂಪನಿಯು ಉಚಿತ ಹೊಲಿಗೆ ಯಂತ್ರವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿ ಕಾರ್ಡೋಲೈಟ್ ಕಂಪನಿಯು ಇಂತಹ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಕಾರ್ಯಕ್ರಮ ದಲ್ಲಿ ಕಂಪನಿಯ ಮೆನೇಜರ್(ಎಚ್.ಆರ್) ಪ್ರಭೋದ್. ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಿ .ವಿ. ಸದಸ್ಯರಾದ ಪದ್ಮನಾಭ ಸಾಲ್ಯಾನ್.ಮಹಮ್ಮದ್ ನವಾಜ್ ಸರ್ಫಾಜ್. ಸೌಮ್ಯ .ಎಸ್.ಶೆಟ್ಟಿ. ಲೇಖನ. ಮಾಜಿ ಅಧ್ಯಕ್ಷರಾದ ಹಸನಬ್ಬ.ಮಾಜಿ ಉಪಾಧ್ಯಕ್ಷರಾದ ಕೇಶವ ಪೂಜಾರಿ.ಪಂಚಾಯತ್ ಸಿಬ್ಬಂದಿ ಗಳಾದ ಪುರುಷೋತ್ತಮ. ಸೌಮ್ಯ. ದೀಪಾ.ಸುಮಲತಾ. ವಿಜೇತ್.ಸತೀಶ ಮುಂತಾದ ವರು ಉಪಸ್ಥಿತರಿದ್ದರು
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾದ ವೆಂಕಟರಮಣ ಪ್ರಕಾಶ್ ರವರು ಸ್ವಾಗತಿಸಿದರು ಪಂಚಾಯತ್ ಕಾರ್ಯದರ್ಶಿ ಲೋಕನಾಥ ಭಂಡಾರಿ ನಿರೂಪಿಸಿ ವಂದಿಸಿದರು


