ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪೂರ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಲೋಕಾಪುರ ಇವರಿಂದ 88ನೇಯ ತ್ರಿಮುರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮ

ಸೋಮನಾಥ ಜ್ಯೋತಿರ್ಲಿಂಗ.
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಈ ಪುಣ್ಯಕ್ಷೇತ್ರವು ಮೊಟ್ಟ ಮೊದಲನೇಯದಾಗಿದೆ. ಇಲ್ಲಿ ಶಿವ ಪರಮಾತ್ಮನನ್ನು ಸೋಮೇಶ್ವರ ಎಂದು ಕರೆಯುತ್ತಾರೆ. ಇದು ಗುಜರಾತಿನ ಅರಬ್ಬಿ ಸಮುದ್ರದ ದಡದಲ್ಲಿದೆ .ದುಃಖದಲ್ಲಿರುವ ಮನುಷ್ಯರಿಗೆ ಆತ್ಮಜ್ಞಾನದ ಅಮೃತವನ್ನು ಕೊಟ್ಟು ಮುಕ್ತಿ ಜೀವನಮುಕ್ತಿಯ ದಾರಿಯನ್ನು ತೋರಿಸಿದ ಕಾರಣ ಇಲ್ಲಿ ಶಿವ ಪರಮಾತ್ಮನನ್ನು ಸೋಮೇಶ್ವರ ಅಥವಾ ಸೋಮನಾಥ ಎಂದು ಕರೆಯುತ್ತಾರೆ.

ಶ್ರೀಶೈಲ ಮಲ್ಲಿಕಾರ್ಜುನ.
ಈ ದೇವಸ್ಥಾನ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಂಬಲ್ಲಿ ಇದೆ. ಇದು ಸಮುದ್ರಮಟ್ಟದಿಂದ ಸುಮಾರು 1500 ಅಡಿ ಎತ್ತರದಲ್ಲಿದೆ .ಎಲ್ಲಾ ಆತ್ಮರ ತಂದೆಯಾದ ಶಿವ ಪರಮಾತ್ಮ ,ಮಕ್ಕಳಿಗೆ ತನ್ನ ನಿಜ ಸ್ವರೂಪ ಬಿಂದು ಹೊಳೆಯುವ ನಕ್ಷತ್ರದ ಸಾಕ್ಷಾತ್ಕಾರ ಮಾಡಿಸಿ ಅವರನ್ನು ನಿಜವಾದ ಅರ್ಜುನ ರನ್ನಾಗಿ ಮಾಡಿ ,ತನ್ಮೂಲಕ ಪಂಚ ವಿಕಾರಗಳ ಮೇಲೆ ವಿಜಯೀ ಗಳನ್ನಾಗಿ ಮಾಡುತ್ತಾನೆ .ಆದ ಕಾರಣ ಅವನನ್ನು ಮಲ್ಲಿಕಾರ್ಜುನ ಎಂದು ಕರೆಯುತ್ತಾರೆ.

ಮಹಾಂಕಾಳೇಶ್ವರ
ಈ ಶಿವನ ದೇವಸ್ಥಾನ ಮಧ್ಯ ಪ್ರದೇಶದಲ್ಲಿರುವ ಉಜ್ಜಯಿನಿ ಹತ್ತಿರ ಹರಿಯುವ ಸಿಪ್ರಾ ನದೀ ತೀರದಲ್ಲಿದೆ. ಕಲಿಯುಗದ ಅಂತ್ಯದಲ್ಲಿ ಶಿವ ಪರಮಾತ್ಮನು ಈ ಭೂಮಿಗೆ ಬಂದು ಎಲ್ಲಾ ಮನುಷ್ಯಾತ್ಮರನ್ನು ಈ ಭವದ ಬಂಧನದಿಂದ ಬಿಡುಗಡೆ ಮಾಡಿ ತನ್ನೊಂದಿಗೆ ಶಾಂತಿಧಾಮಕ್ಕೆ( ಆತ್ಮಗಳ ವಾಸಸ್ಥಾನ) ಕರೆದುಕೊಂಡು ಹೋಗುತ್ತಾನೆ. ಆದುದರಿಂದ ಇಲ್ಲಿ ಶಿವನನ್ನು ಮಹಾಕಾಲೇಶ್ವರ ಎಂದು ಕರೆಯುತ್ತಾರೆ.

ಓಂಕಾರೇಶ್ವರ ಜ್ಯೋತಿರ್ಲಿಂಗ.
ಓಂಕಾರೇಶ್ವರ ಬಹಳ ಸುಂದರವಾದ ಸ್ವಯಂಭು ಲಿಂಗವಾಗಿದೆ .ಇದನ್ನು ಓಂಕಾರ ಅಮರೇಶ್ವರ ಎಂಬುದಾಗಿ ಕೂಡ ಕರೆಯುತ್ತಾರೆ. ಇದು ನರ್ಮದಾ ನದಿಯ ದಡದಲ್ಲಿ ಒಂದು ದ್ವೀಪದಲ್ಲಿದೆ . ಇಲ್ಲಿ ಶಿವ ಪರಮಾತ್ಮನು ಓಂ ಎನ್ನುವ ಮಂತ್ರದ ಅರ್ಥ ನಾನು ಆತ್ಮ ಎಂದು ತಿಳಿಸಿಕೊಡುವುದರಿಂದ ಅವನನ್ನು ಓಂಕಾರೇಶ್ವರ ಎಂಬುದಾಗಿ ಕರೆಯುತ್ತಾರೆ.

ಪರಳಿ ವೈದ್ಯನಾಥ.
ಇದು ಶಿವನ ಅತಿ ಪವಿತ್ರ ಸ್ಥಾನವಾಗಿದೆ .ಇದು ಮಹಾರಾಷ್ಟ್ರ ರಾಜ್ಯದ ಪರಳಿ ಗ್ರಾಮದ ದೇವ್ ಫರ್ ಎಂಬಲ್ಲಿ ಇದೆ .ಇದನ್ನು ಬಾ ಬಾಧಾಮ ಅಥವಾ ವೈದ್ಯನಾಥರಧಾಮ ಎಂಬುದಾಗಿ ಕೂಡ ಕರೆಯುತ್ತಾರೆ. ಕಾಮ, ಕ್ರೋಧ ಮತ್ತು ಅಶಾಂತಿಯಿಂದ ಬಳಲುತ್ತಿರುವ ಮನುಷ್ಯಾತ್ಮರಿಗೆ ಪರಮಾತ್ಮ ಶಿವನು ಜ್ಞಾನಾಮೃತವನ್ನು ಕೊಟ್ಟು ದೇವಿ ದೇವತೆಗಳಾಗಿ ಪರಿವರ್ತನೆ ಮಾಡುತ್ತಾನೆ. ಈ ಕಾರಣಕ್ಕಾಗಿ ಇಲ್ಲಿ ಶಿವನನ್ನು ವೈದ್ಯನಾಥ ಎಂಬುದಾಗಿ ಕರೆಯುತ್ತಾರೆ.

ಭೀಮಾಶಂಕರ ಜ್ಯೋತಿರ್ಲಿಂಗ.
ಈ ದೇವಸ್ಥಾನ ಮಹಾರಾಷ್ಟ್ರ ಪೂನಾದ ಹತ್ತಿರ ಇರುವ ತೇಜಿ ನಗರ ಎಂಬಲ್ಲಿ ಇದೆ .ಮನುಷ್ಯ ಆತ್ಮಗಳು ಪಂಚ ವಿಕಾರಗಳಿಗೆ ವಶರಾದಾಗ ಪರಶಿವ ಪರಮಾತ್ಮ ಬಂದು ಈ ವಿಕಾರಗಳೆಂಬ ಭೀಮಾ ಸುರನನ್ನು ವಧೆ ಮಾಡಿ ,ಆತ್ಮರನ್ನು ವಿಕಾರಗಳ ವಶದಿಂದ ಬಿಡುಗಡೆ ಮಾಡಿ ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ಆದ್ದರಿಂದ ಅವನು ಭೀಮಾ ಶಂಕರ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದಾನೆ.

ರಾಮೇಶ್ವರಂ ಜ್ಯೋತಿರ್ಲಿಂಗ.
ಇದು ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಮನ್ನಾರ ಕೊಲ್ಲಿಯ ಒಂದು ದೇವಸ್ಥಾನವಾಗಿದೆ. ಮಾಯೆಯೆಂಬ ರಾವಣನ ಮೇಲೆ ವಿಜಯ ಗಳಿಸಿದ ಶ್ರೀ ರಾಮನು ಶಿವ ಪರಮಾತ್ಮನಿಗೆ ಪೂಜೆ ಸಲ್ಲಿಸಿದ ನೆನಪಾರ್ಥವಾಗಿ ರಾಮೇಶ್ವರ ವೆಂದು ಹೆಸರಿದೆ. ಎಲ್ಲಾ ದೇವಿ ದೇವತೆಗಳಿಗೂ ಒಡೆಯನಾದ ಶಿವ ಪರಮಾತ್ಮನು ಜಗದೊಡೆಯನೂ ಸರ್ವ ಆತ್ಮರಿಗೆ ಪಿತನೂ ಆಗಿದ್ದಾರೆ.

ನಾಗೇಶ್ವರ ಜ್ಯೋತಿರ್ಲಿಂಗ.
ಈ ದೇವಸ್ಥಾನ ಗುಜರಾತಿನಲ್ಲಿರುವ ಸುಂದರ ಶಿಲ್ಪಕಲಾ ಕೃತಿಯಾಗಿದೆ ಕಲಿಯುಗದಲ್ಲಿ ಶಿವಪರಮಾತ್ಮನು ಬಂದು, ಜ್ಞಾನ ಮತ್ತು ಯೋಗದ ಶಕ್ತಿಯಿಂದ ಮನುಷಾತ್ಮದಲ್ಲಿರುವ ಸರ್ಪರೂಪಿ ವಿಕಾರಗಳ ನಾಶ ಮಾಡಿ ಅವರಿಗೆ ಸುಖದ ದಾರಿಯನ್ನು ತೋರಿಸುತ್ತಾನೆ ಆದುದರಿಂದ ಅವನನ್ನು ನಾಗೇಶ್ವರ ಎಂದು ಕರೆಯುತ್ತಾರೆ

ವಿಶ್ವನಾಥ ಜ್ಯೋತಿರ್ಲಿಂಗ.
ಭಾರತದ ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ಕಾಶಿ ವಿಶ್ವನಾಥ ಕ್ಷೇತ್ರವು ಬಹಳ ಪ್ರಸಿದ್ಧಿ ಪಡೆದಿದೆ ಮತ್ತು ಇದು ಮುಕ್ತಿ ಕ್ಷೇತ್ರ ಎಂದು ಕರೆಯಲ್ಪಡುತ್ತದೆ ಇದು ಗಂಗಾನದಿಯ ತಟದಲ್ಲಿರುವುದು ಇದರ ವಿಶೇಷತೆ ಆಗಿದೆ ಇಲ್ಲಿ ಶಿವ ಪರಮಾತ್ಮ ಹೊಸ ಪ್ರಪಂಚ ಸ್ವರ್ಗದ ಸ್ಥಾಪನೆ ಮಾಡುವುದರಿಂದ ಅವನನ್ನು ವಿಶ್ವನಾಥ ಎಂದು ಕರೆಯುತ್ತಾರೆ

ತ್ರಯಂಬಕೇಶ್ವರ ಜ್ಯೋತಿರ್ಲಿಂಗ.
ಈ ಪುಣ್ಯ ಕ್ಷೇತ್ರವು ಮಹಾರಾಷ್ಟ್ರದ ನಾಸಿಕ ನಲ್ಲಿರುವ ಬ್ರಹ್ಮಾಗಿರಿ ಬೆಟ್ಟದ ಸಮೀಪ ಗೋದಾವರಿ ನದಿಯ ಉಗಮ ಸ್ಥಾನದಲ್ಲಿದೆ ತ್ರಿಮೂರ್ತಿ ಶಿವನು ಬ್ರಹ್ಮಾ. ವಿಷ್ಣು. ಶಂಕರ ರನ್ನು ಸೃಷ್ಟಿ ಮಾಡಿದ ಕಾರಣ ಅವನನ್ನು ತ್ರಯಂಬಕೇಶ್ವರ ಎಂದು ಹೇಳುತ್ತಾರೆ

ಕೇದಾರನಾಥ ಜ್ಯೋತಿರ್ಲಿಂಗ.
ಈ ದೇವಸ್ಥಾನ ಉತ್ತರ ಖಂಡದಲ್ಲಿ ಹಿಮಾಲಯ ಪರ್ವತದಲ್ಲಿ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ ಯಾರು ತಮ್ಮ ಮನಸ್ಸು ಮತ್ತು ಬುದ್ಧಿಯಿಂದ ಸಂಪೂರ್ಣವಾಗಿ ಪರಮಾತ್ಮನಿಗೆ ಸಮರ್ಪಿತರಾಗಿರುತ್ತಾರೋ ಅವರು ಎಲ್ಲ ತರಹದ ದುಃಖ ದುಮ್ಮನಗಳಿಂದ ಮುಕ್ತರಾಗಿ ಸದಾ ಸುಖ ಸಂತೋಷದಿಂದ ಇರುತ್ತಾರೆ ಆದುದರಿಂದ ಇಲ್ಲಿ ಶಿವನನ್ನು ಕೇದಾರನಾಥ ಎಂದು ಕರೆಯುತ್ತಾರೆ

ಘೃಷ್ಣೇಶ್ವರ ಜ್ಯೋತಿರ್ಲಿಂಗ.
ಜೀವನದ ಸಾರವನ್ನು ಅರಿಯದೆ ದುಃಖ ಹಾಗೂ ಅಶಾಂತಿಯಲ್ಲಿರುವ ಆತ್ಮಗಳಿಗೆ ಸಾಕ್ಷಾತ್ ಭಗವಂತನು ಬಂದು ಅವರಲ್ಲಿ ಆತ್ಮ ಜಾಗೃತಿಯನ್ನು ಉಂಟು ಮಾಡಿ ಅವರನ್ನು ಸ್ವರ್ಗ ಸುಖವನ್ನು ಅನುಭವಿಸಲು ಯೋಗ್ಯರನ್ನಾಗಿ ಮಾಡುತ್ತಾನೆ ಆದ ಕಾರಣ ಇಲ್ಲಿ ಪರಮಾತ್ಮನನ್ನು ಘೃಷ್ಣೇಶ್ವರ ಜ್ಯೋತಿರ್ಲಿಂಗ ಎಂದು ಹೊಗಳುವರು
ಹೀಗೆ ವಿವಿಧ 12 ಜ್ಯೋತಿರ್ಲಿಂಗವನ್ನು ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಲೋಕಾಪುರ ಇವರಿಂದ 88ನೇಯ ತ್ರಿಮುರ್ತಿ ಶಿವ ಜಯಂತಿ ಮಹೋತ್ಸವ ಹಾಗೂದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮ ಜರಗಿತು


