
ರಾಮದುರ್ಗ ಪಟ್ಟಣದ ಪ್ರೆಸ್ ಕ್ಲಬ್ ದಲ್ಲಿ ನೂತನವಾಗಿ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ದೂಪದ, ಹಾಗೂ ಕಾರ್ಯದರ್ಶಿಯಾಗಿ ಚನ್ನಪ್ಪ ಮಾದರ್ ಹಾಗೂ ಖಜಾಂಚಿಯಾಗಿ ಜ್ಞಾನೇಶ್ವರ ಮೇಲಪ್ಪಗೋಳ ಇವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮುಖಾಂತರ ಗೌರವಿಸಿ ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ್ ದೂಪದ ಮಾತನಾಡಿ ಪತ್ರಿಕಾರಂಗ ಅನ್ನೋದು ಸಮಾಜದಲ್ಲಿ ಬಹಳಷ್ಟು ಗೌರವ ಇರತ್ತಕ್ಕಂತದ್ದು ಈ ವೃತ್ತಿ ರಂಗದ ಪವಿತ್ರತೆಯನ್ನು ನಾನು ಎತ್ತಿ ಹಿಡಿಯುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಈ ಆಧುನಿಕ ಯುಗದಲ್ಲಿ ಬಹಳಷ್ಟು ಮನುಷ್ಯ ಮತ್ತು ಮಾನವ ನಡುವೆ ಪ್ರೀತಿ ಕೊರತೆ ಕಾಣುತ್ತಾ ಇದೆ ಪ್ರೀತಿಯ ಕೊರತೆಯನ್ನು ನೀಗಿಸಲಿಕ್ಕೆ ಯಾವ ಯೋಜನೆ ಹಾಕಬೇಕು ಮಾನವ ಮಾನವ ನಡುವೆ ಪ್ರೀತಿಯನ್ನು ಬೆಸೆಲಿಕ್ಕೆ ಯಾವ ಕಾರ್ಯಕ್ರಮವನ್ನು ಹಾಕಬೇಕು ಈ ಆಧುನಿಕ ಯುಗದಲ್ಲಿ ಮತ್ತೊಬ್ಬರ ಏಳಿಗೆಯನ್ನು ನಾವು ಕೂಡ ಶ್ರಮಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಪರಮ ಪೂಜ್ಯ ಡಾಕ್ಟರೇಟ್ ಶ್ರೀ ಕಲ್ಲೇಶ್ವರ ಮಹಾಸ್ವಾಮಿಗಳು ಹಿರೇಮಠ್ ಚಿಪಲಕಟ್ಟಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಉಪಾಧ್ಯಕ್ಷ ಶ್ರೀ ಗಂಗಾಧರಯ್ಯ ಹಿರೇಮಠ್, ಕಾರ್ಯದರ್ಶಿ ಈರಭಶಯ ಬನ್ನೂರುಮಠ, ವಾಯ ಎಚ್ ಪಾಟೀಲ್ ಕೃಷಿಕ ಸಮಾಜದ ಅಧ್ಯಕ್ಷರು,ವಕ್ತಾರದ ಬಸವರಾಜ ಕೋಣನ್ನವರ, ಶಂಕರ್ ಕಲ್ಲೂರು. ಶಿವಾನಂದ ಬ್ಯಾಹಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ ದೊಡಮನಿ ಉಪಸ್ಥಿತರಿದ್ದರು.


