
ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಹಾಯಕ ಚುನಾವಣಾಧಿಕಾರಿ ಪ್ರಶಾಂತ ಹಣಗಂಡಿ ಅವರು ಮಾತನಾಡಿ, ಲೋಕಸಭೆಗೆ
ಚುನಾವಣೆಗೆ ದಿನಾಂಗ ಘೋಷಣೆಯಾಗಿದ್ದು, ಈ ಹಿನ್ನಲೆಯಲ್ಲಿ ನ್ಯಾಯಸಮ್ಮತ
ಚುನಾವಣೆ ಜರುಗಿಸುವ ಸಂಬಂಧ ರಾಮದುರ್ಗ ತಾಲೂಕಿನಾದ್ಯಂತ ಆಯಕಟ್ಟಿನ ನೀತಿ ಸಂಹಿತೆ
ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚುನಾವಣೆ
ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು. ರಾಮದುರ್ಗದಿಂದ ಹೊರ ಹೋಗುವ ಮತ್ತು ಒಳ ಬರುವ ಎಲ್ಲಾ ವಾಹನದ ಮೇಲೆ ನಿಗಾವಹಿಸಲು ರಾಮದುರ್ಗ ತಾಲೂಕಿನ ಬಟಕುರ್ಕಿ, ಪಂಚಗಾವಿ ಕ್ರಾಸ್, ಹೊಸಕೇರಿ ಕ್ರಾಸ್ ಮತ್ತು ಕಲಹಾಳ ಗ್ರಾಮ ಸೇರಿ 4 ಸ್ಥಳಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ ಹಾಗೂ ಚೆಕಪೋಸ್ಟ್ ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಹಾಗೂ ಸಿಬ್ಬಂದಿ 24 ತಾಸು ಕರ್ತವ್ಯ
ನಿರ್ವಹಿಸಲಿದ್ದಾರೆ ಎಂದು ಹೇಳಿದರು
ರಾಮದುರ್ಗ ತಾಲೂಕಿನಲ್ಲಿ ಒಟ್ಟು 251 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1,04,951
ಪುರುಷರು, 1,02,382 ಮಹಿಳೆಯರು ಸೇರಿ ಒಟ್ಟು 2,07,333 ಜನರು ತಮ್ಮ ಹಕ್ಕು
ಚಲಾಯಿಸಲಿದ್ದಾರೆ. ತಾಲೂಕಿನಲ್ಲಿ 4864 ಜನ 18-19 ವರ್ಷ ವಯಸ್ಸಿನ ಯುವ ಮತದಾರರು, 4269 ಜನ 80 ವರ್ಷ ಮೇಲ್ಪಟ್ಟು ವಯಸ್ಸಿನ ಮತದಾರರು ಹಾಗೂ
57 ಜನರು ಶತಾಯುಷಿ ಮತದಾರರು ಹಾಗೂ ಒಟ್ಟು 265 ವಿಕಲಚೇತನ ಮತದಾರರಿದ್ದಾರೆ ಎಂದು ಹೇಳಿದರು.
ರಾಜಕೀಯ ಸಭೆ ಸಮಾರಂಭ ನಡೆಸಲು ಪೂರ್ವಾನುಮತಿಗಾಗಿ ಸುವಿಧಾ ಯಾಪ
ಮೂಲಕ ಪರವಾಣಿಗೆ
ಸಂಬಂಧ ಪಡೆಯಬಹುದಾಗಿದ್ದು, ಜಾತ್ರೆ, ವಿವಾಹ ಕಾರ್ಯಕ್ರಮಗಳಿಗೆ ಇರುವ ಮಾರ್ಗಸೂಚಿಗಳು ಇನ್ನೂ ಲಭ್ಯವಾಗಿಲ್ಲ ಎಂದು
ಹೇಳಿದರು.
ಈ ಒಂದು ಸಭೆಯಲ್ಲಿ ತಹಶೀಲ್ದಾರ್ ಸುರೇಶ ಚವಲಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ,
ಗ್ರಾಮ ಆಡಳಿತಾಧಿಕಾರಿ ಬಸವರಾಜ ಕುಂಬಾರ ಭಾಗವಹಿಸಿದ್ದರು.


