
ಬೆಳಗಾವಿ ಜಿಲ್ಲೆಯ ರಾಮದುರ್ಗ ಸವದತ್ತಿ ಮುನವಳ್ಳಿಯಲ್ಲಿ ಪಡಿತರ ಅಕ್ಕಿದಂದೆ ರಾಜಾರೋಷವಾಗಿ ಮನೆ ಮನೆಗೆ ತೆರಳಿ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಅಕ್ರಮ ಅಕ್ಕಿ ದಂದೆ ಕೋರರು.
ಪ್ರತಿದಿನ ಬೆಳಗ್ಗೆಯಾದರೆ ಸಾಕು ಮನೆ ಮನೆಗೆ ಹೋಗಿ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿಕೊಂಡು ಲಾರಿಯಲ್ಲಿ ಹಾಡು ಹಗಲಲ್ಲೇ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇವರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಸಾಕಷ್ಟು ಬಾರಿ ಅಕ್ರಮ ಪಡಿತರ ಅಕ್ಕಿ ತುಂಬುವರ ಮೇಲೆ ಕೇಸ್ ದಾಖಲಾದರೂ ಕೂಡ ಇಲ್ಲಿವರೆಗೂ ನಿಲ್ಲದೆ ರಾಜಾರೋಶವಾಗಿ ಪಡಿತರ ಅಕ್ಕಿ ದಂದೆ ಇನ್ನು ನಿಂತಿಲ್ಲ. ಬಡವರಿಗೆ ಅನುಕೂಲವಾಗಲಿ ಎಂದು ಸರ್ಕಾರ ಉಚಿತವಾಗಿ ಪಡಿತರ ಅಕ್ಕಿ ಕೊಟ್ಟರೆ ಅದನ್ನು ಹಣದ ಆಸೆಗೆ ಜನರು ಮಾರಿಕೊಳ್ಳುತ್ತಿದ್ದಾರೆ ಪ್ರತಿ ಕುಟುಂಬಕ್ಕೂ 10 ಕೆ.ಜಿ ಅಕ್ಕಿ ಪೂರೈಸಲು ಸರಕಾರ ಹರ ಸಾಹಸ ಪಡುತ್ತಿದೆ .ಆದರೆ ಇನ್ನೊಂದೆಡೆ ಪಡಿತರ ಅಕ್ಕಿಯು ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಅನೇಕ ಕುಟುಂಬಗಳು ಈಗ ಪಡೆಯುತ್ತಿರುವ 5 ಕೆ.ಜಿ ಅಕ್ಕಿಯನ್ನು ತಾವು ಬಳಸದೆ ಪ್ರತಿ ಕೆ.ಜಿ.ಗೆ 15 ರಂತೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದರಿಂದ ಕಾಳಸಂತೆಯ ವ್ಯವಹಾರ ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಯುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ . ಪಡಿತರ ಅಕ್ಕಿಯನ್ನು ಡಬಲ್ ಪಾಲಿಷ್ ಮಾಡಿಸಿ 70 ಕೆ.ಜಿ ವಿವಿಧ ರೀತಿಯ ಕ್ವಾಲಿಟಿ ಅಕ್ಕಿಗೆ 30 ಕೆ.ಜಿ ಮಿಶ್ರಣ ಮಾಡಲಾಗುತ್ತದೆ ಇದು ಒಂದು ರೀತಿ ಕಣ್ಣಿಗೆ ಕಣ್ಣೆರಚುವ ಕೆಲಸ. ಪ್ರಭಾವಿ ರಾಜಕಾರಣಿಗಳ ಹಿಂಬಾಲಕರೇ ಈ ಅಕ್ಕಿ ದಂದೆಯಲ್ಲಿ ತೊಡಗಿದ್ದಾರೆ. ಇದೆಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ನಿಯಂತ್ರಣ ಮಾಡದೇ ಇರುವುದು ವಿಪರ್ಯಾಸ. ರಾಮದುರ್ಗ ಸವದತ್ತಿ ಮುನವಳ್ಳಿಯ ಭಾಗದಲ್ಲಿ ಪಡಿತರ ಅಕ್ಕಿ ತುಂಬುವವರ ಹಾವಳಿ ಹೆಚ್ಚಾಗಿದೆ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಇಷ್ಟು ರಾಜಾರೋಷವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದರು ಇವರ ಮೇಲೆ ಕ್ರಮ ಕೈಗೊಳ್ಳದೆ ಇರುವುದು ಜಿಲ್ಲಾ ಆಡಳಿತ ಸಂಪೂರ್ಣ ವಿಫಲವಾಗಿದೆ
ಅನ್ನಭಾಗ್ಯ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ಮುಕ್ತ ಮಾರು ಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡುವ ಫಲಾನುಭವಿಗಳ ಪಡಿತರ ಚೀಟಿ ಆರು ತಿಂಗಳು ಅಮಾನತು ಆಗಲಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದ್ದು, ಅಕ್ರಮವಾಗಿ ಪಡಿತರ ಆಹಾರ ಧಾನ್ಯ ಮಾರಾಟಕ್ಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಚಿತವಾಗಿ ಹಂಚಿಕೆಯಾಗುವ ಅಕ್ಕಿಯನ್ನು ಫಲಾನುಭವಿಗಳು ಹಣಕ್ಕೆ ಮಾರುತ್ತಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿವೆ. ಹೀಗಾಗಿ ಅಕ್ಕಿ ಮಾರಾಟ ಮಾಡಿ ಸಿಕ್ಕಿಬೀಳುವ ಫಲಾನುಭವಿಯ ಪಡಿತರ ಚೀಟಿ ಆರು ತಿಂಗಳು ಅಮಾನತು ಮಾಡಿ ಹಾಗೂ ಮಾರುಕಟ್ಟಿದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ.
ಸರ್ಕಾರದ ಆದೇಶ
ದುಡಿಗೆ ಪಡಿತರ ಅಕ್ಕಿಮಾರಿದರೆ 6 ತಿಂಗಳು ರೇಶನ್ ಕಾರ್ಡ್ ಅಮಾನತು ಮತ್ತು ದಂಡ ಉಲ್ಲೇಖ(3)ರನ್ವಯ ಹೊಸ ನಿಯಮ 18(ಎ)ಅನ್ನು ಸೇರ್ಪಡಿಸಿ ಪಡಿತರ ಚೀಟಿ ಪಡೆದಿರುವ ಪಡಿತರದಾರರು ಅಥವಾ (ಪಡಿತರದಾರರ ಯಾರೇ ಕುಟುಂಬಸ್ಥರು) ಅಗತ್ಯ ವಸ್ತುಗಳ ಮಾರಾಟ ಅಥವಾ ಹಣಕ್ಕೆ ಅಥವಾ ಇನ್ನಿತರೆ ರೂಪದಲ್ಲಿ ಮಾರಾಟ ಮಾಡಲು ಶೇಕರಣೆ ಮಾಡಿದಲ್ಲಿ ಅಂತಹ ವ್ಯವಕ್ತಿಗಳಿಂದ ಮಾರಾಟ ಮಾಡಿರುವ ಪಡಿತರ ಪ್ರಮಾಣಕ್ಕೆ ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕೆ ಅನುಗುಣವಾಗಿ ಹಣ ವಸೂಲಿ ಮಾಡಿ ಅಂತಹ ಪಡಿತರದಾರರ ಪಡಿತರ ಚೀಟಿಯನ್ನು 6 ತಿಂಗಳ ಅವಧಿಯವರೆಗೆ ಅಮಾನತ್ತುಪಡಿಸಲಾಗುವುದೆಂದು ದಿನಾಂಕ. 10.12.2020 ರಂದು ಆದೇಶಿಲಾಗಿರುತ್ತದೆ.


