
ರಾಮದುರ್ಗ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನಕ್ಕೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಚಾಲನೆ ನಿಡಿದರು.
ರಾಮದುರ್ಗ ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯತಿಗಳ ಸಹಯೋಗದಲ್ಲಿ ಜರುಗಿದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿ ಅಭಿಯಾನಕ್ಕೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಚಾಲನೆ ನಿಡಿ ಮಾತನಾಡಿದರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ತಮಗೆ ಸೂಕ್ತವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಯಾವೊಬ್ಬ ಮತದಾರನೂ ಹೊರಗುಳಿಯಬಾರದು. ಸ್ವೀಪ್ ಸಮಿತಿಯ ಎಲ್ಲ ಸದಸ್ಯರು ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಹೇಳಿದರು.
ಲೋಕಸಭಾ ಚುನಾವಣೆ -2024 ಮತದಾರರ ಮತದಾನದ ಜಾಗೃತಿ ಅಭಿಯಾನ ಸೆಲ್ಪಿ ಸ್ಯ್ಟಾಂಡ್, ಸಹಿ ಅಭಿಯಾನದ ಮತ್ತು ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಮೂಲಕ ಸ್ವೀಪ್ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಈ ವೇಳೆ ಸಹಾಯಕ ನಿರ್ದೇಶಕರು ಸಂಗನಗೌಡಾ ಹಂದ್ರಾಳ ಹಾಗೂ ಸಹಾಯಕ ನಿರ್ದೇಶಕ ಅಪ್ಪಯ್ಯಪ್ಪ ಕುಂಬಾರ , ತಾಲೂಕು ಪಂಚಾಯಿತಿ ವ್ಯವಸ್ಥಾಪಕರು ಹಣುಮಂತ ಕೋಂತಿಕಲ್ಲ, ಆಇಸಿ ಸಂಯೋಜಕ ಕಲ್ಮೇಶ ಹಗೇದ ಹಾಗೂ ಹೌಸಿಂಗ್ ಸಂಯೋಜಕ ಸಂಜು ಹುಣಶ್ಯಾಳ , ಹಾಗೂ ಎಸ್ ಎಸ್ ದೇಸಾಯಿಮಠ್ಠ , ಸೇರಿದಂತೆ ವಿವಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿವರ್ಗ ಭಾಗವಹಿಸಿದ್ದರು


