
ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬದ ನಿಮಿತ್ಯ ಡಿ ವೈ ಎಸ್ ಪಿ ಪಾಂಡುರಂಗಯ್ಯ ಇವರ ನೇತೃತ್ವದಲ್ಲಿ ಶಾಂತಿ ಸಭೆ ಜರಗಿತು.
ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬದ ನಿಮಿತ್ಯ ಡಿ ವೈ ಎಸ್ ಪಿ ಪಾಂಡುರಂಗಯ್ಯ ರವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು , ಚುನಾವಣಾ ನೀತಿ ಸಂಹಿತೆ ಜಾರಿಗೆ ಆದ ಕಾರಣ ಹೋಳಿ ಹಬ್ಬದ ಹಾಗೂ ರಂಜಾನ ಹಬ್ಬಕ್ಕೆ ಸಂಬಂಧಿಸಿದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ ಚುನಾವಣೆ ನೀತಿ ಸಹಿತಿ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬ ಒಂದೇ ಸಮಯದಲ್ಲಿ ಬಂದಿರುವದರಿಂದ ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು
ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಐ ಆರ್ ಪಟ್ಟಣಶೆಟ್ಟಿ ಸಿಪಿಐ ಅವರು ಈಗಾಗಲೇ ನಾನು ಕಳೆದ ವರ್ಷ ಜವಾಬ್ದಾರಿ ಯುತವಾಗಿ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಲು ಬೇಕಾದ ಕ್ರಮಗಳನ್ನು ಹಾಗೂ ಸಹಕಾರವನ್ನು ನೀಡಿದ್ದೇವೆ ಹಾಗೆಯೇ ಈ ವರ್ಷ ಕೂಡ ನಗರದಲ್ಲಿ ಯಾವುದೇ ರೀತಿಯ ಗಲಭೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಕಾಮಣ್ಣನನ್ನು ಸುಡುವಾಗ ರಸ್ತೆ ಹಾಳಾಗದಂತೆ ನೋಡಿಕೊಳ್ಳಬೇಕು ಏಕೆಂದರೆ ರಸ್ತೆಗಳು ಹಾಳಾದರೆ ಮತ್ತೆ ಆಗಲು ತಡವಾಗುತ್ತದೆ ಎಂದು ತಿಳಿಸಿದರು.
ಈ ಒಂದು ಸಭೆಯಲ್ಲಿ ರಾಮದುರ್ಗ ಪಿಎಸಐ ಸುನಿಲ್ ಕುಮಾರ್ ನಾಯಕ , ತಾಲೂಕಿನ ಪುರಸಭೆ ಅಧ್ಯಕ್ಷರು , ನಗರದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ನಗರದ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು


