
ರಾಮದುರ್ಗ ತಾಲೂಕಿನ ಸುರೇಬಾನ ಪೋಲಿಸ್ ಠಾಣೆ ಆವರಣದಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬದ ನಿಮಿತ್ಯ ಸಿಪಿಐ ಐ ಆರ್ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು , ಈಗಾಗಲೇ ನಾನು ಕಳೆದ ವರ್ಷ ಜವಾಬ್ದಾರಿ ಯುತವಾಗಿ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಲು ಬೇಕಾದ ಕ್ರಮಗಳನ್ನು ಹಾಗೂ ಸಹಕಾರವನ್ನು ನೀಡಿದ್ದೇವೆ ಹಾಗೆಯೇ ಈ ವರ್ಷ ಕೂಡ ನಗರದಲ್ಲಿ ಯಾವುದೇ ರೀತಿಯ ಗಲಭೆ ಆಗದಂತೆ ನೋಡಿಕೊಳ್ಳಬೇಕು ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ ಚುನಾವಣೆ ನೀತಿ ಸಹಿತಿ, ಬಣ್ಣದಾಟದ ದಿನವಾದ ದಿ. 25 ರಿಂದ ಎಸ್.ಎಸ್.ಎಲ್.ಸಿ. ಪರಿಕ್ಷೆಗಳು ನಡೆಯುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಬಣ್ಣ ಹಚ್ಚುವದಾಗಲಿ ತೊಂದರೆ ಕೊಡವದಾಗಲಿ ಮಾಡಬಾರದು , ಎಸ್.ಎಸ್.ಎಲ್.ಸಿ. ಪರಿಕ್ಷೆ, ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬ ಒಂದೇ ಸಮಯದಲ್ಲಿ ಬಂದಿರುವದರಿಂದ ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು
ಈ ಒಂದು ಸಭೆಯಲ್ಲಿ ಸುರೇಬಾನ ಪೋಲಿಸ್ ಠಾಣೆ ಪಿಎಸಐ ಪವಾರ್, ಮನಿಹಾಳ ಹಾಗೂ ಸುರೇಬಾನ್ ಗ್ರಾಮ ಪಂಚಾಯತಿ ಅಧ್ಯಕ್ಷರು. ಸದಸ್ಯರು , ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು


