
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೇಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೆ. ಗುಡದಾರಿ ಚಾಲನೆ ನಿಡಿದರು.
ರಾಮದುರ್ಗ ಪಟ್ಟಣದ ಪುರಸಭೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕ ಸ್ವಿಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿಗಳಾದ ಈರಣ್ಣ ಕೆ ಗುಡದಾರಿರವರು ಸೆಲ್ಪಿ ಸ್ಟ್ಯಾಂಡ ನಲ್ಲಿ ಪೋಟೋ ತಗೆದುಕೊಳ್ಳುವದರ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಮತದಾನ ಪ್ರತಿಯೊಬ್ಬ ಪ್ರಜೇಯ ಹಕ್ಕು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು.ಮತ್ತು ತಾಲೂಕಿನಲ್ಲಿ ಅಧಿಕಾರಿಗಳು ವಿವಿಧ ರೀತಿಯ ಮತದಾನ ಜಾಗೃತಿ ಅಂದರೇ ಮಾರ್ಚ್ ಕ್ಯಾಂಡಲ್. ಮನೆ-ಮನೆಗೆ ಪಾಂಪ್ಲೆಟ್ ಹಂಚುವುದು ಈ ರೀತಿಯಲ್ಲಿ 7-8 ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು . ಒಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ನುಡಿದರು. ನಂತರ ಅವರು ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾವಿಧಿ ಬೋದಿಸಿದರು. ಅದರ ಜೊತೆ ಅಧಿಕಾರಗಳು ಮತ್ತು ಸಾರ್ವಜನಿಕರ ಸಹಿ ಸಂಗ್ರಹಿಸಿ ರಾಮದುರ್ಗ ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಥಾ ವಾಹನ ಸಂಚರಿಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ರಾಮದುರ್ಗ ಪುರಸಭೆಯ ಕಚೇರಿ ವ್ಯವಸ್ಥಾಪಕರಾದ ಎಮ್ ಆರ್ ನಧಾಪ.ಆರೋಗ್ಯ ನಿರೀಕ್ಷಕರು ಚಂದನ್ ಪಾಟೀಲ್, ಮಹಬುಬ ಲಷ್ಕರಿ, ಎಸ್ ಕೆ ಹಿರೇಮಠ.ಗೀತಾ ಬೆಳಗಳಿ ಸೇರಿದಂತೆ ರಾಮದುರ್ಗ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


