ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯು ಆಯೋಜಿಸಿದ್ದ ನೆಲಮಂಗಲದ ಎಮ್ ವಿ ಎಮ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ 2ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.

WhatsApp Group Join Now

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ 2 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನೆಲಮಂಗಲದ ಎಮ್.ವಿ.ಎಮ್ ಕನ್ವೆನ್ಷನ್ ಹಾಲ್ ನಲ್ಲಿ ರವಿವಾರ ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಿಕಾ ಧರ್ಮದ ನೈತಿಕ ಮೌಲ್ಯಗಳ ಬಗ್ಗೆ ಚರ್ಚಿಸಲಾಯಿತು. ಕಾನಿಪ ಧ್ವನಿಯ ಸಂಸ್ಥಾಪಕ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ನಮ್ಮ ಕಾನಿಪ ಧ್ವನಿ ಸಂಘಟನೆಯು ಪತ್ರಕರ್ತರಿಗಾಗಿ ಹಗಲಿರುಳು ದುಡಿದು, ಎಲ್ಲರ ಪ್ರಗತಿಗಾಗಿ ಶ್ರಮದಾನ ಮಾಡಿತ್ತಿದ್ದು, ಇಂದು ಸರ್ಕಾರ ಪತ್ರಿಕಾ ಭವನಗಳನ್ನು ಕೆಲವು ಸಂಘಟನೆಗಳಿಗೆ ಸೀಮಿತ ಮಾಡಿದೆ. ಇದು ಬದಲಾಗಬೇಕು. ನಮ್ಮ ಕಾನಿಪ ಧ್ವನಿಯ ಹಲವು ಬೇಡಿಕೆಗಳನ್ನು ಈಡೇರಿಸುವ ಕಡೆ ಸರ್ಕಾರಗಳು ಗಮನಹರಿಸಬೇಕು ” ಎಂದು ಹೇಳಿದರು.

   ಉದ್ಘಾಟನಾ ಭಾಷಣ ಮಾಡಿದ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಸಂತೋಷ್ ಹೆಗ್ಡೆ ಅವರು”ಪತ್ರಿಕಾ ರಂಗದ ಸೇವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುದ್ದಿ ಮಾಡುತ್ತಾರೆ. ಸಾಕಷ್ಟು ಹಗರಣಗಳು ಬೆಳಕಿಗೆ ಬರಲು ಮಾಧ್ಯಮಗಳು ತುಂಬಾ ದುಡಿದಿವೆ. ಅಕ್ರಮಗಳನ್ನು, ಭ್ರಷ್ಟಾಚಾರಗಳನ್ನು ಹೆಡೆಮುರಿ ಕಟ್ಟಲು ಸಾಂವಿಧಾನಿಕ ಎಲ್ಲಾ ಅಂಗಗಳ ಜೊತೆ ಅಂದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಜೊತೆಗೆ ನಾಲ್ಕನೇ ಅಂಗವಾಗಿ ಸಾಂವಿಧಾನಿಕ ಪತ್ರಿಕಾ ರಂಗ ಶ್ರಮಿಸುತ್ತಿದ್ದಾರೆ. ದೇಶ ಕಟ್ಟಲು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳ ಪಾತ್ರ ಬಹಳಷ್ಟಿದೆ ” ಎಂದರು.

ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದ ಪ.ಪೂ. ಬಸವರಮಾನಂದ ಸ್ವಾಮಿಗಳು ಮಾತನಾಡುತ್ತಾ ” ಇಂದು ಡಿಗ್ರಿ ಮಾಸ್ಟರ್ ಡಿಗ್ರಿ, ಪಿಎಚ್ಡಿ, ಮಾಡಿದ ಪ್ರಬುದ್ಧ ಪತ್ರಕರ್ತರು ಇಂದು ಉಪಸ್ಥಿತರಿದ್ದು, ನಿಮ್ಮ ಶಕ್ತಿ ಅನಂತತೆ ಹೊಂದಿದೆ. ನೀವು ಬಳಸುವ ಲೇಖನವೆಂಬ ಅಸ್ತç ಇನ್ನುಳಿದ ಶಸ್ತçಗಳಿಗಿಂತ ಬಲಿಷ್ಠತೆ ಮತ್ತು ಚತುರತೆಯೊಂದಿಗೆ ಹರಿತವಾಗಿದೆ. ಪತ್ರಕರ್ತರು ಮನಸ್ಸು ಮಾಡಿದರೆ ಹೊಸ ಕ್ರಾಂತಿಗಳನ್ನು ಸೃಷ್ಟಿ ಮಾಡುವಂತ ಶಕ್ತಿ ನಿಮ್ಮಲ್ಲಿದೆ ” ಎಂದು ಶ್ಲಾಘಿಸಿದರು.

 ಆನಂತರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರವೀಣ ಶೆಟ್ಟಿ ಅವರು ಮಾತನಾಡಿ “ಕನ್ನಡ ನಾಡು, ನುಡಿ, ಸಂಸ್ಕöÈತಿಗೋಸ್ಕರ ಎಂದೆದಿಗೂ ಹೋರಾಟಕ್ಕೆ ಸಿದ್ಧ. ಇಂದು ಪತ್ರಕರ್ತರು ಹೋರಾಟಗಾರರ, ಬಡವರ, ನಿರ್ಗತಿಕರ, ಅಸಹಾಯಕರ, ಶೋಷಿತರಿಗೆ ಬೆಂಗಾವಲಾಗಿ ನಿಂತು ನ್ಯಾಯವನ್ನು ಒದಗಿಸುವ ಪ್ರಯತ್ನ ಮಾಡುತ್ತಿರುವುದು ಉತ್ತಮ ಸಂದೇಶ ರವಾನೆ ಮಾಡುತ್ತಿದೆ” ಎಂದು ಹೊಗಳಿದರು. ಆನಂತರ ಪದ್ಮಶ್ರೀ ಪ್ರಶಸ್ತಿ ಪುರಸ್ಕöÈತರಾದ ಜೋಗುತಿ ಮಂಜಮ್ಮ ಅವರು ಭಾವುಕರಾಗಿ “ಇಂದು ನನ್ನನ್ನು ದಿಲ್ಲಿಯ ಪಾರ್ಲಿಮೆಂಟ್ ತನಕ ಬೆಳೆಸಿದ್ದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ನೀವುಗಳು ಕೈ ಹಿಡಿದರೆ ಎಲ್ಲರನ್ನು ಬೆಳೆಸಲು ಬಹುದು, ಅಳಿಸಲು ಬಹುದು ಆ ಶಕ್ತಿ ನಿಮ್ಮಲ್ಲಿದೆ. ನಿಮ್ಮ ಸಂಘಟನೆಯಲ್ಲಿ ಹೆಣ್ಮಕ್ಕಳಿಗೂ ಮತ್ತು ನಮ್ಮಂಥ ತೃತೀಯ ಲಿಂಗಿಗಳಿಗೆ ಅವಕಾಶ ಮಾಡಿಕೊಟ್ಟು ಸಮಾನತೆಯ ಘನತೆಯನ್ನು ಎತ್ತರಿಸಿ. ನಿಮ್ಮ ಮಕ್ಕಳು ಸರ್ವತೋಮುಖವಾಗಿ ಬೆಳೆಯಲು ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಅದಕ್ಕಾಗಿ ನಿಮ್ಮ ಮಕ್ಕಳು ದುರ್ಮಾರ್ಗ ಹಿಡಿಯದಂತೆ ವಿದ್ಯಾವಂತರನ್ನಾಗಿ ಮಾಡಿ ” ಎನ್ನುತ್ತಾ ಮಾಧ್ಯಮಗಳಿಗೆ ಕೃತಜ್ಞತೆ ಅರ್ಪಿಸಿದರು. ಇನ್ನುಳಿದ ಸಾಕಷ್ಟು ಅತಿಥಿಗಳು ಈ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು

ಇನ್ನು ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದಲ್ಲಿ ಸಾಧನೆಗೈದ ಸಾಕಷ್ಟು ಪತ್ರಕರ್ತರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಕಾನಿಪ ಧ್ವನಿಯ ಜಿಲ್ಲಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು, ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. 

ಕಾನಿಪ ಧ್ವನಿ ಸಂಘದ ಸಂಜೆ ವಿಚಾರ ಸಂಕೀರ್ಣ

ಬೆಳಿಗ್ಗೆ ನಾಡಿನ ವಿವಿಧ ಕ್ಷೇತ್ರಗಳ ಸಾಧಕರಾದ ಗೌರವಾನ್ವಿತ ನ್ಯಾ. ಸಂತೋಷ್ ಹೆಗ್ಡೆ, ಜೋಗುತಿ ಮಂಜಮ್ಮ, ಗುರುರಾಜ ಹೊಸಕೋಟೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು. ಮಧ್ಯಾಹ್ನ ಭೋಜನದ ಬಳಿಕ ನಡೆದ ಸಾಯಂಕಾಲದ ವಿಚಾರ ಸಂಕೀರ್ಣದಲ್ಲಿಯು ಹಲವು ವಿದ್ವತ್ ಪೂರ್ಣ ಗಣ್ಯರು ಭಾಗವಹಿಸಿ ಪತ್ರಿಕಾ ರಂಗದ ಘನತೆಯನ್ನು ಹಾಡಿ ಹೊಗಳಿದರು. ಮೊದಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು, “ಪತ್ರಕರ್ತರಿಗಾಗಿ ಜೀವ, ಜೀವನ ಎರಡನ್ನು ಮುಡುಪಿಡುವೆ. ಹಗಲಿರುಳು ಅವರಿಗಾಗಿ ದುಡಿಯುವೆ ನಮ್ಮ ಪತ್ರಕರ್ತರ ಬೇಡಿಕೆಗಳು ಈಡೇರುವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತೆ. ಮಾಡು ಇಲ್ಲವೇ ಮಡಿ ಎಂಬ ಧ್ಯೇಯದೊಂದಿಗೆ ನಾವೆಲ್ಲರೂ ಹೋರಾಟಕ್ಕೆ ಸಿದ್ಧರಾಗಿ ನಿಂತಿದ್ದೇವೆ” ಎಂದರು.

ಮಾತನಾಡಿದ ಡಾ. ಪುಷ್ಪ ಅವರು ” ಪತ್ರೀಕೊದ್ಯಮ ಸಮಾಜದ ಅಂಕುಡೊAಕುಗಳನ್ನು ತಿದ್ದಲು ನಿಮಗೆ ಸಿಕ್ಕಿರುವ ಪ್ರಬಲ ಅಸ್ತç. ಅದನ್ನು ಸದುಪಯೋಗ ಪಡಿಸಿಕೊಂಡು ದೇಶ ಕಟ್ಟಲು ಕಾನೂನುಬದ್ಧವಾಗಿ ದುಡಿಯುತ್ತಿರುವವರನ್ನು ನೋಡಿದರೆ ನಂಗೆ ಹೆಮ್ಮೆ ಎನಿಸುತ್ತದೆ. ಎಷ್ಟೋ ಪತ್ರಕರ್ತರು ತಮ್ಮ ಕರ್ತವ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟಿದ್ದಾರೆ. ಹೀಗಾಗಿ ಪತ್ರಕರ್ತರು ಕೂಡ ಹೀರೊಗಳಂತೆ ಸಮಾಜದ ಏಳಿಗೆಗೆ ತೊಡಗಿಸಿಕೊಳ್ಳುತ್ತಿರುವುದನ್ನು ಮರೆಯುವಂತಿಲ್ಲ ” ಎಂದು ಹೇಳಿದರು.

  ಮೈನಾ ಚಲನಚಿತ್ರದ ನಾಯಕ ನಟರಾದ ಚೇತನ್ ಅಹಿಂಸಾ ಅವರು ಮಾತನಾಡುತ್ತಾ”ಪತ್ರಿಕಾ ರಂಗವು ಯುಗ ಕಳೆದಂತೆ ಆಧುನೀಕರಣಗೊಂಡಿದೆ. ಇತಿಹಾಸದಲ್ಲೂ ಸಾಕಷ್ಟು ವಿಸ್ಮಯಗಳು ಪತ್ರಕರ್ತರ ಮೂಲಕ ಆಗಿದ್ದೂ, ಇಂದು ಸಹ ಪತ್ರಕರ್ತರು ಅಂತಹ ಸುದ್ದಿಗಳ ನಿರೀಕ್ಷೆಯಲ್ಲಿರುವುದನ್ನು ಕಾಣುತ್ತೇವೆ. ಆದರೆ ವಿಪರ್ಯಾಸ ಎಂದರೆ ಹಲವು ಪತ್ರಕರ್ತರು ಪ್ರಾಮಾಣಿಕತೆ, ಪಾರದರ್ಶಕತೆ ಜೊತೆಗೆ ಕರ್ತವ್ಯ ಪ್ರಜ್ಞೆಯನ್ನು ಮರೆತಿದ್ದಾರೆ. ಅಂತಹ ಕೆಲವು ತಪುö್ಪಗಳನ್ನು ಸರಿಪಡಿಸಿಕೊಂಡು ಹೋಗುವತ್ತ ಪ್ರಯತ್ನಿಸಿ ” ಎಂದರು. ತದ ನಂತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಡಾ. ಎಸ್.ಎಸ್. ಪಾಟೀಲ್ ಅವರು “ಯಾವ ಮುಲಾಜಿಲ್ಲದೆ ನಿರ್ಭೀತಿಯಿಂದ, ಸತ್ಯಶೋಧನಾ ಸುದ್ದಿಗಳನ್ನು ಮಾಡಿ ಯಾರಿಗೂ ಹೆದರುವ ಅವಶ್ಯಕತೆ, ಅನಿವಾರ್ಯತೆ ನಮಗಿಲ್ಲ. ಲೇಖನಿಯ ಶಕ್ತಿ ಎಷ್ಟು ಪ್ರಬಲವೋ, ಅಷ್ಟೇ ಬಲಿಷ್ಠವಾಗಿದೆ. ನಿಮ್ಮ ಸುದ್ದಿಯ ತೀವ್ರತೆಗೆ ಭ್ರಷ್ಟಾಚಾರಿಗಳು, ಖದೀಮರು ನಲುಗಬೇಕು ಹಾಗೆ ಸುದ್ದಿ ಮಾಡಿ. ಆದರೆ ನಮ್ಮ ಪತ್ರಕರ್ತರ ಬೆನ್ನಿಗೆ ನಮ್ಮವರೇ ಚೂರಿ ಹಾಕುವ ಕೆಲಸ ಬಿಡಬೇಕು. ಸಾಕಷ್ಟು ಕ್ರಾಂತಿಕಾರಕ ಸಕಾರಾತ್ಮಕ ಅಂಶಗಳುಳ್ಳ ಮಾಹಿತಿಗಳನ್ನು ಸುದ್ದಿ ಮಾಡಿ, ಜನರಿಗೆ, ರೈತರಿಗೆ, ಕಾರ್ಮಿಕರಿಗೆ ಸರ್ವರಿಗೂ ಅನುಕೂಲವಾಗುವಂತ ಸುದ್ದಿಗಳನ್ನು ಮಾಡಿ. ಅನ್ಯಾಯ, ಅನಾಚಾರ, ದುರ್ಮಾಗಗಳನ್ನು ಮಾಡುತ್ತಿರುವವರನ್ನು ಪತ್ರಿಕಾ ರಂಗದ ಮೂಲಕ ಹೆಡೆಮುರಿ ಕಟ್ಟುವ ಕೆಲಸ ಮಾಡಿ ” ಎಂದು ನೆರೆದಿದ್ದ ಸಾವಿರಾರು ಪತ್ರಕರ್ತರಲ್ಲಿ ಉತ್ಸಾಹ ತುಂಬಿದರು. ತದ ನಂತರ ರಾಜ್ಯ ಮಾಧ್ಯಮ ಕಾರ್ಯದರ್ಶಿಗಳಾದ ಶ್ರೀ.ಜಗಳೂರು ಲಕ್ಷ÷್ಮಣರಾವ್ ಅವರು ತಮ್ಮ ಭಾಷಣದಲ್ಲಿ “ಇಂದು ಪತ್ರಿಕಾ ರಂಗದಲ್ಲಿ ಅದಕ್ಷತೆ, ಅನ್ಯಾಯ, ಅನಾಚಾರ, ಅಕ್ರಮ, ಪುಂಡತನ ಸೇರಿದಂತೆ ಹಲವಾರು ನಕಾರಾತ್ಮಕ ಭಾವನೆಗಳು ಪತ್ರಕರ್ತರನ್ನು ಆವರಿಸಿದ್ದು ಬೇಸರದ ಸಂಗತಿ. ನಾನು ಕೂಡ ರವಿ ಬೆಳಗೆರೆಯವರಂತ ದಿಗ್ಗಜರ ಜೊತೆ ಕೆಲಸ ಮಾಡಿರುವೆ. ಲಂಕೇಶ್ ಅವರು ನಮ್ಮ ಗುರುಗಳು ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆದು ಬಂದಿರುವೆ. ಹಿಂದಿನ ದಿನಗಳಲ್ಲಿ ಬರಿ ಎರಡು ಸಾಲು ಸುದ್ಧಿಯಾದರೆ ಸಾಕು ಹೆದರಿ ನಡುಗುತ್ತಿದ್ದರು. ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಸರ್ಕಾರಗಳನ್ನೆ ಕೆಡವಿದ ಕೀರ್ತಿ ನಮ್ಮ ಪತ್ರಕರ್ತರಿಗಿದೆ. ಆದರೆ ಇಂದು ಅಂತಹ ವ್ಯವಸ್ಥೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ, ಮುಂದೊAದು ದಿನ ಹಾಗಾಗುವ ಭರವಸೆ ಇದೆ ” ಎಂದು ತಿಳಿಸಿದರು. ಆನಂತರ ಅತಿಥಿಯೋರ್ವರು ಮಾತನಾಡಿ “ಅಂಬೇಡ್ಕರ್ ಹೇಳಿದಂತೆ ಒಬ್ಬ ಮಾರಾಟವಾದ ಪತ್ರಕರ್ತ ಸಾವಿರ ಭಯೋತ್ಪಾದಕರಿಗೆ ಸಮ. ಹೀಗಾಗಿ ಪತ್ರಕರ್ತರು ಕೂಡ ಸಾಹಸ ಪರಾಕ್ರಮದಿಂದ ಇತಿಹಾಸವನ್ನು ತಿಳಿದು ಇತಿಹಾಸ ಸೃಷ್ಟಿಸುವಂತಹ ನೈಜ ಸುದ್ದಿಗಳನ್ನು ಬಿತ್ತರಿಸಬೇಕು. ಆ ನಿಟ್ಟಿನಲ್ಲಿ ತಾವೆಲ್ಲರೂ ಕಡ್ಡಾಯವಾಗಿ ತೊಡಗಿಸಿಕೊಳ್ಳಿ” ಎಂದರು. ಸಂಜೆ ವಿಚಾರ ಸಂಕಿರಣ ಮುಗಿದ ಬಳಿಕ ಸುಮಾರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

About The Author