ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡ ಚಿಕ್ಕರೇವಣ್ಣ ಮಾತನಾಡಿದರು.

WhatsApp Group Join Now

ರಾಮದುರ್ಗ ಪಟ್ಟಣದ ಹಲಗತ್ತಿ ಬೈಪಾಸ್ ರಸ್ತೆಯಲ್ಲಿರುವ ಆರಿಬೆಂಚಿ ಪಾರ್ಮ ಹೌಸ್‌ನಲ್ಲಿ ಬಿಜೆಪಿ ಮುಖಂಡ ಚಿಕ್ಕರೇವಣ್ಣ ನೇತೃತ್ವದಲ್ಲಿ ಏರ್ಪಡಿಸಿದ ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರ ಪಕ್ಷವೆಂದರೆ ಭಾರತೀಯ ಜನತಾ ಪಕ್ಷವಾಗಿದೆ. ಸದಾ ದೇಶಕ್ಕಾಗಿ ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಮಾಜಿ ಬೆಳಗಾವಿ ಲೋಕಸಭೆಗೆ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಅತ್ಯಧಿಕ ಮತಗಳ ಅಂತರದಿAದ ಆಯ್ಕೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು
ರಾಮದುರ್ಗದಲ್ಲಿ ಹಿರಿಯರೊಬ್ಬರು ಗೆದ್ದವರು ಬೆಂಗಳೂರು ಸೇರಿದರು. ಬಿದ್ದವರು ಬೆಂಗಳೂರು ಸೇರಿದರೂ ಎಂದು ಹೇಳಿದ್ದಾರೆ, ಕರೋನಾ, ಪ್ರವಾಹದ ಸಂದರ್ಭದಲ್ಲಿ ನಾನು ಬಡವರ ಸೇವೆ ಮಾಡಿದ್ದೇನೆ. ಅವರು ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ. ನಾನು ಅನಾರೋಗ್ಯದ ನಿಮಿತ್ಯ ಬೆಂಗಳೂರಿನಲ್ಲಿದ್ದೆ. ಆರೋಗ್ಯ ಸರಿಯಾದ ನಂತರ ಸದಾ ಕ್ಷೇತ್ರದಲ್ಲಿದ್ದು ಪಕ್ಷ ಸಂಘಟನೆ ಮಾಡುವದಾಗಿ ಹೇಳಿದರು.
ಮುಖಂಡರಾದ ಡಾ| ಕೆ.ವಿ. ಪಾಟೀಲ, ಬಿ.ಎಸ್. ಬೆಳವಣಕಿ, ದ್ಯಾವಪ್ಪ ಬೆಳವಡಿ, ಸಿದ್ದು ಮೇತ್ರಿ, ಕೃಷ್ಣಾ ಲಮಾಣಿ ಸೇರಿದಂತೆ ಇತರರು ಮಾತನಾಡಿ, ಲೋಕಸಭಾ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಈ ಒಂದು ಸಭೆಯಲ್ಲಿ ಸಂಜೀವ ಶೆಟ್ಟಿಸದಾವರ್ತಿ, ಐ.ಎಸ್. ಹರನಟ್ಟಿ, ಫಕೀರಪ್ಪ ರೊಟ್ಟಿ, ವಿಠ್ಠಲ ಜಟಗನ್ನವರ, ತಿಪ್ಪಣ್ಣ ಕಂಬಳಿ, ಅಪ್ಪಾಸಿಗೌಡ ಪಾಟೀಲ, ಸುಭಾಸ್ ಹಡಗಲಿ, ಸಿದ್ದಪ್ಪ ಕನಸಗೇರಿ, ಭೀಮಪ್ಪ ಜಂಜೇಲಿ, ಶೇಕಪ್ಪ ಮಾಲಶೆಟ್ಟಿ, ಲಕ್ಕಪ್ಪ ಗುತವಾರ, ಅಣ್ಣೇಶಗೌಡ ಪಾಟೀಲ, ವೆಂಕಟೇಶ ಪಂಚಗಾವಿ, ವೆಂಕಟರಾವ್ ದೇಸಾಯಿ, ಗಿರಿಯನಗೌಡ ಪಾಟೀಲ, ವೆಂಕಟೇಶಗೌಡ ಪಾಟೀಲ, ಶ್ರೀದೇವಿ ಮಾದನ್ನವರ, ರಘುನಾಥ ರೇಣಕೆ, ನಿಂಗಪ್ಪ ಮೆಳ್ಳಿಕೇರಿ, ಶಾನೂರ ಯಾದವಾಡ ಇನ್ನು ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author