ಓಬಳಾಪೂರ ಗ್ರಾಮದ ಶ್ರೀ ರೇವಯ್ಯ ಶಿವಯೋಗಿಗಳವರ ಜಾತ್ರಾ ಮಹೋತ್ಸವದಂದು ಶ್ರೀಗಳು ಶ್ರೀ ರೇವಯ್ಯನವರ ಕೃತಿ ಲೋಕಾರ್ಪಣೆಗೊಳಿಸಿದರು.

WhatsApp Group Join Now

ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದಲ್ಲಿ ಸದ್ಗುರು ಶ್ರೀ ರೇವಯ್ಯ ಶಿವಯೋಗಿಗಳವರ ಜಾತ್ರಾ ಮಹೋತ್ಸವದಂದು ಓಬಳಾಪೂರ ಗ್ರಾಮದ ಸಾಹಿತಿಗಳಾದ ಶ್ರೀನಿವಾಸಗೌಡ ಪಾಟೀಲ ರವರು ರಚಿಸಿದ ಕಾಯಕಯೋಗಿ ಸದ್ಗುರು ಶ್ರೀ ರೇವಯ್ಯ ಮಹಾಸ್ವಾಮಿಗಳು ದ್ವಿತೀಯ ಮುದ್ರಣ ಕೃತಿಯನ್ನು ಕನ್ನಡ ಧ್ವಜದೊಂದಿಗೆ ಶ್ರೀ ಬಸವಾನಂದ ಭಾರತಿ ಸ್ವಾಮಿಗಳು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇಂದಿನ ಯುವ ಜನಾಂಗ ಗುಟಕಾ ಸಿಗರೇಟನಂತಹ ಧೂಮಪಾನ ಮಾಡಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ದೂಮಪಾನ ವ್ಯಸನವನ್ನು ಬಿಟ್ಟು ಅಧ್ಯಾತ್ಮದ ಕಡೆ ಒಲವು ತೋರಿ ಶ್ರೀ ರೇವಯ್ಯಜ್ಜನವರಂತಹ ಮಹಾತ್ಮರ ಗ್ರಂಥವನ್ನು ಓದಿ ಜೀವನವನ್ನು ಹಸನ ಮಾಡಿಕೊಳ್ಳಬೇಕು ಇಂದಿನ ಸನ್ನಿವೇಷದಲ್ಲಿ ಎರಡು ತರ ಗ್ರಂಥ ಇರುತ್ತವೆ. ರೇವಯ್ಯಜ್ಜನವರ ಗ್ರಂಥವನ್ನು ಕೈ ತೊಳೆದುಕೊಂಡು ಮುಟ್ಟಬೇಕು, ಕೆಲವು ಗ್ರಂಥ ಓದಿದ ಮೇಲೆ ಕೈ ತೊಳೆದುಕೊಳ್ಳಬೇಕು. ಆದರೆ ರೇವಯ್ಯಜ್ಜನವರ ಗ್ರಂಥವನ್ನು ಓದುವದರಿಂದ ಜೀವನ ಪಾವನವಾಗುತ್ತದೆ ಎಂದ ಅವರು, ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ನವ ವಧುವರರಿಗೆ ಆಶೀರ್ವದಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕೊಟಬಾಗಿಯ ಶ್ರೀ ಸಿದ್ದಾರೊಡ ಆಶ್ರಮದ ಶ್ರೀ ಪ್ರಭುದೇವರು, ಹೊಸಕೋಟಿಯ ಶ್ರೀ ರೇವಯ್ಯಜ್ಜನವರ ಮಠದ ಶ್ರೀ ಅಭಿನವ ರೇವಯ್ಯ ಸ್ವಾಮಿಗಳು, ಕೆ.ಕೆ. ಕೊಪ್ಪದ ಶಿವಯೋಗೇಶ್ವರ ಮಠದ ಶ್ರೀ ಸಿದ್ದಪ್ರಭು ಶಿವಾಚಾರ್ಯರು ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಈ ವೇಳೆಯಲ್ಲಿ ಗ್ರಾಮದ ಹಿರಿಯರಿಂದ ಶ್ರೀಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಹಿತಿ ಶ್ರೀನಿವಾಸಗೌಡ ಪಾಟೀಲ ಹಾಗೂ ಸಾಹಿತ್ಯ ಸೇವೆಗೆ ಬೆಂಬಲಿಸಿದ ಮಹನಿಯರನ್ನು ಸತ್ಕರಿಸಲಾಯಿತು. ಗ್ರಾಮದ ಹಿರಿಯರು, ವಿವಿಧ ಗ್ರಾಮಗಳಿಂದ ಆಗಮಿಸಿದ ಸದ್ಭಕ್ತರು ಉಪಸ್ಥಿತರಿದ್ದರು.

About The Author