
WhatsApp Group
Join Now
ರಾಮದುರ್ಗ ತಾಲೂಕಾ ಸ್ವೀಪ್ ಸಮಿತಿಯಿಂದ ತಾಲೂಕ ಪಂಚಾಯತ ಆವರಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕುರಿತು ವಿಶೇಷ ಚೇತನರ ಬೈಕ್ ರ‍್ಯಾಲಿಗೆ ತಹಶೀಲ್ದಾರ ಸುರೇಶ ಚವಲಾರ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್ಚು ಮತದಾನ ಮಾಡುವದರಿಂದ ಉತ್ತಮ ಆಡಳಿತ ನಿರೀಕ್ಷಿಸಬಹುದು. ಆದ್ದರಿಂದ ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸಿ ದೇಶದ ಸುಭದ್ರತೆಗೆ ಮುಂದಾಗುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ನೂರಾರು ವಿಶೇಷ ಚೇತನರು ತಮ್ಮ ಬೈಕ್‌ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆ ಕೂಗುತ್ತಾ ಮತದಾನದ ಜಾಗೃತಿಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವಾಜ ಐನಾಪೂರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಎಸಿಡಿಪಿಓ ಆರ್.ಮಂಜುಳಾ. ತಾಲೂಕ ಪಂಚಾಯತ ಹಾಗೂ ಪುರಸಭೆ ಸಿಬ್ಬಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.


