
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಹತ್ತಿರ ಬೈಕ್ ಮತ್ತು ಟಾಟಾ ಗುಡ್ಸ್ ವಾಹನ ಮಧ್ಯ ಭೀಕರ ರಸ್ತೆ ಅಪಘಾತ ಇಬ್ಬರ ಬೈಕ್ ಸವರಾರು ಸ್ಥಳದಲ್ಲಿ ಸಾವು.
ಶಿವಾನಂದ ಹೊಳೆಬಸಪ್ಪ ಖಾನಾಪುರ ಸಾಕಿನ ಆನೆಗುದ್ದಿ ಮತ್ತು,ಮಲ್ಲಪ್ಪ ಹಣಮಂತ ಕೌಜಲಗಿ ಸಾಕಿನ ಆನೆಗುದ್ದಿ ಈವರಿಬ್ಬರು ಆನೆಗುದ್ದಿಯಿಂದ ಬಜಾಜ್ ಡಿಸ್ಕವರಿ ಬೈಕನಲ್ಲಿ ವಿದ್ಯಾರ್ಥಿನಿ, ಸೌಂದರ್ಯ ಮಲ್ಲಪ್ಪ ಕೌಜಲಗಿ ಈವರಿಗೆ CET ಪರೀಕ್ಷೆಗೆಯಂದು ಕರೆದುಕೊಂಡು ಲೋಕಾಪುರಕ್ಕೆ ಹೋಗುವ ಸಂಧರ್ಭದಲ್ಲಿ ಬಟಕುರ್ಕಿ ಹತ್ತಿರ ಟಾಟಾ ಗುಡ್ಸ್ ವಾಹನ ಬೈಕಿಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತವಾಗಿದೆ.
ಈ ಅಪಘಾತದಲ್ಲಿ ಶಿವಾನಂದ ಖಾನಾಪುರ ಮತ್ತು ಮಲ್ಲಪ್ಪ ಕೌಜಲಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ವಿದ್ಯಾರ್ಥಿನಿ, ಸೌಂದರ್ಯ ಮಲ್ಲಪ್ಪ ಕೌಜಲಗಿ ಈವರಿಗೆ ಬಲಗಾಲಕ್ಕೆ ಗಂಭೀರವಾಗಿ ಪೆಟ್ಟುಬಿದ್ದು ಕಾಲು ಮುರದಿದೆ, ಇನ್ನು ಮಹಾರಾಷ್ಟ್ರದಿಂದ ರಾಮದುರ್ಗಕ್ಕೆ ಬರುವ ಟಾಟಾ ಗುಡ್ಸ್ ವಾಹನದಲ್ಲಿ ಒಟ್ಟು 4ಜನ ವಾಹನದಲ್ಲಿದ್ದರು ಅಪಘಾತದಲ್ಲಿ ಗಂಭೀರವಾಗಿ ಪೆಟ್ಟುಬಿದ್ದಿದರಿಂದ ಆಸ್ತವೇಸ್ಥೆರಾಗಿದ್ದಾರೆ,
ವಿದ್ಯಾರ್ಥಿನಿ, ಸೌಂದರ್ಯ ಮಲ್ಲಪ್ಪ ಕೌಜಲಗಿ ಮತ್ತು ಟಾಟಾ ಗುಡ್ಸ ವಾಹನದಲ್ಲಿದ್ದ ನಾಲ್ವರಿಗೆ ಮುಂದಿನ ಚಿಕೆತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಭೀಕರ ರಸ್ತೆ ಅಪಘಾತದ ಬಗ್ಗೆ ವಿಷಯ ತಿಳಿದು ತಕ್ಷಣದಲ್ಲಿ ರಾಮದುರ್ಗ ಡಿವೈಎಸ್ಪಿ ಪಾಂಡುರಂಗ್ಯಾ ಮತ್ತು ಪಿಎಸ್ಐ ಸುನಿಲಕುಮಾರ್ ನಾಯಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಷಿಲನೆ ಮಾಡಿ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


