ಪೆನ್‍ಡ್ರೈವ್ ಪ್ರಕರಣದಲ್ಲಿ ಕ್ರಮ ಜರುಗಿಸುವಂತೆ ಕೋರಿ ನೈಜ ಹೋರಾಟಗಾರರ ವೇದಿಕೆಯಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ

WhatsApp Group Join Now

ಹಾಸನ: ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕ್ರಿಯೆಗಳ ವಿಡಿಯೋಗಳನ್ನು ವಿಕೃತಕಾಮಿಯೊಬ್ಬ ಸಾಮಾಜಿಕ ಜಾಲತಾಣ, ವಾಟ್ಸಪ್  ಮತ್ತು ಪೆನ್ ಡ್ರೈವ್ ಗಳ ಮೂಲಕ ವಿತರಿಸಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ವಿಷಯ ಬೆಳಕಿಗೆ ಬಂದ ತಕ್ಷಣ ಕೆಲ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದರು ಸಹಿತ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿ ತಮ್ಮ ಆವಾಗನೆಗೆ   ತರುವ ಗುರುತರ ಜವಾಬ್ದಾರಿ ನೈಜ ಹೋರಾಟಗಾರರ ವೇದಿಕೆಗೆ ಇದೆ ಎಂದು  ನಾವು ನಾವಾದರೂ ಭಾವಿಸಿದೆವು.

ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಯೋರ್ವಳಿಗೆ ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ನಂತರ ಮೆರವಣಿಗೆ ಮಾಡಿದ ಪ್ರಕರಣದ ವಿಚಾರಣೆ ಮಾಡಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿದ್ದ ಗೌರವಾನ್ವಿತ ನ್ಯಾಯಮೂರ್ತಿಗಳು ಮೌಕಿಕವಾಗಿ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ನಡೆಯುತ್ತಿರುವುದನ್ನು ನೋಡಿಯೂ ನೋಡದಂತೆ  ಸುಮ್ಮನಾಗಿರುವವರ ಬಗ್ಗೆ ಅಕ್ರೋಶವನ್ನು ಹೊರಹಾಕಿ ಅಂತಹ ವ್ಯಕ್ತಿಗಳ ವಿರುದ್ಧ ಪುಂಡುಗಂದಾಯವನ್ನು ಯಾಕೆ ಹಾಕಬಾರದೆಂದು ಸರ್ಕಾರವನ್ನು ಪ್ರಶ್ನೆ ಮಾಡಿತು. ಈ ವಿಷಯವು ಮಾಧ್ಯಮಗಳಲ್ಲಿ ಕೂಡ ಪ್ರಕಟವಾಗಿತ್ತು. ಹಾಗಾಗಿ  ಸಮಾಜದಲ್ಲಿ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯ ಶೋಷಣೆ, ಅತ್ಯಾಚಾರ ಜೊತೆಗೆ ಅವರ ಘನತೆಗೆ ಧಕ್ಕೆ ಉಂಟಾಗುತ್ತಿರುವುದನ್ನು ನೋಡಿಯೂ ನೋಡದಂತೆ ಇರಲು ನಮಗೆ ಸಾಧ್ಯವಾಗುತ್ತಿಲ್ಲ, ಹಾಗಾಗಿ ಈ ಪತ್ರವನ್ನು ನಾವು ತಮಗೆ ಬರೆಯುತ್ತಿದ್ದೇವೆ.

ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಲೈಂಗಿಕ ಕ್ರಿಯೆ   ಮಾಡಿದ ವ್ಯಕ್ತಿಯೇ ಸಾವಿರಾರು ವಿಡಿಯೋ ಕ್ಲಿಪ್ ಗಳನ್ನು   ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಹಾಗೂ ಅದನ್ನು ಸಾರ್ವಜನಿಕರಿಗೆ ದೊರೆಯುವಂತೆ ಪೆನ್ ಡ್ರೈವ್ಗಳನ್ನು, ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್ ಗಳಲ್ಲಿ ಕೆಲವು ವ್ಯಕ್ತಿಗಳು  ಹರಿ ಬಿಟ್ಟಿರುತ್ತಾರೆ.

ಈ ವಿಷಯವು ಸರ್ಕಾರ, ಶಾಸಕಾಂಗ, ಕಾರ್ಯಾಂಗದ ಗಮನಕ್ಕೆ ಹೋದರು ಸಹಿತ ಯಾವುದೇ ಕಾನೂನು ಕ್ರಮಗಳನ್ನು ಈವರೆಗೆ ಜರೂಗಿಸದೆ ಇರುವುದರಿಂದ  ಈ ವಿಷಯವನ್ನು ತಮ್ಮ ಗಮನಕ್ಕೆ ತರುವ ಗುರುತರ ಜವಾಬ್ದಾರಿಯುತನಾಗರಿಕರಾದನಮ್ಮ ಮೇಲೆ ಇದೆ ಎಂದು ನಾವು ಭಾವಿಸಿದ್ದೇವೆ.

ನಮ್ಮ ದೇಶದಲ್ಲಿ ಹೆಣ್ಣಿಗೆ ಅತ್ಯಂತ ಪವಿತ್ರ ಮತ್ತು ಗೌರವಾನ್ವಿತ ಸ್ಥಾನವಿದೆ ಹಾಗಾಗಿ  ನಾವು ಹೆಣ್ಣನ್ನು ಭಾರತ ಮಾತೆ ಎಂದೇ ಕರೆಯುವ ಭಾರತೀಯ ಸಂಸ್ಕೃತಿಯ ನಾಡಿನಲ್ಲಿ ಮಹಿಳೆ ಯಾರನ್ನು ಬಳಸಿಕೊಂಡು ವಿಕೃತಕಾಮ, ಅಧಿಕಾರ ದುರುಪಯೋಗ, ನಂಬಿಕೆ ದ್ರೋಹ, ಬ್ಲಾಕ್ ಮೇಲ್ ಮಾಡುವಂತೆ ಮೇಲ್ನೋಟಕ್ಕೆ ಕಂಡು ಬರುವ  ವ್ಯಭಿಚಾರ ನಡೆಸಿದ  ವಿಡಿಯೋಗಳು ಯುವಜನರ, ಮಕ್ಕಳ, ಮಹಿಳೆಯರ ಹಾಗೂ ವೃದ್ಧರ  ಕೈಗೆ ಸುಲಭವಾಗಿ ಸಿಗುವಂತೆ ಮಾಡಿ ಮಹಿಳೆಯ ಘನತೆ ಗೌರವಕ್ಕೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ ನೆಮ್ಮದಿಯಾಗಿ ಸಂಸಾರಿಕ ಜೀವನ ನಡೆಸುವವರ ಮೇಲೆ ಈ ವಿಡಿಯೋಗಳು  ಬಹಳ ದೊಡ್ಡ ದುಷ್ಪರಿಣಾಮವನ್ನ ಮಾಡಿರುತ್ತದೆ.

ಈ ಲೈಂಗಿಕ ಕ್ರಿಯೆಯನ್ನು ನಡೆಸಿದ ವ್ಯಕ್ತಿ ಹಾಸನ ಜಿಲ್ಲೆಯ  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣ ಮಾಧ್ಯಮಗಳು ಹೇಳುತ್ತಿವೆ.

ನಿಜವಾಗಲೂ ಈ ಲೈಂಗಿಕ ಕ್ರಿಯೆಗಳನ್ನು ನಡೆಸಿ ಅದನ್ನು ಸ್ವತಹ ವಿಡಿಯೋ ಮಾಡಿಕೊಂಡ ವ್ಯಕ್ತಿಯ ವಿರುದ್ಧ ಮತ್ತು  ವಿಡಿಯೋವನ್ನು ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ಹರಿ ಬಿಟ್ಟಿರುವುದಲ್ಲದೆ ಪೆನ್ ಡ್ರೈವ್ಗಳನ್ನು ಮಾಡಿ  ಅದನ್ನು ಸಾರ್ವಜನಿಕರಿಗೆ ಸಿಗುವಂತೆ ವಿತರಿಸಿರುವ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆಯು ತಮ್ಮಲ್ಲಿ ವಿನಯ ಪೂರ್ವಕವಾಗಿ ಪ್ರಾರ್ಥಿಸುತ್ತಿದೆ.

ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳನ್ನು ನೋಡಲು ಅತ್ಯಂತ ಅಸಹ್ಯವಾಗಿದೆ  ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗೂ ಇಂತಹ ಲೈಂಗಿಕ ಕ್ರಿಯೆಗಳಲ್ಲಿ ಭಾಗವಹಿಸಿದ ಸಾವಿರಾರು ಹೆಣ್ಣು ಮಕ್ಕಳ ಕುಟುಂಬಗಳು ಇಂದು ದಿಕ್ಕು ತೋಚದೆ ಮುಖ್ಯವಾಹಿನಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಾಗದೆ  ಮಾನಸಿಕ ಹಿಂಸೆಯಿಂದ ಬಳಲುತ್ತಿದ್ದಾರೆ ಎಂಬುದು ಈ ವಿಡಿಯೋದಿಂದ ತಿಳಿದು ಬರುತ್ತಿದೆ.

ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆ ಈ ಬಗ್ಗೆ ಚಕಾರವೆತ್ತುತ್ತಿಲ್ಲ!  ಹಾಗೂ ಕಠಿಣ ಕಾನೂನುಗಳಾದ ಫೋಕ್ಸು   ಪ್ರಕರಣಗಳಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೆಲೆಬ್ರೇಟಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು  ಭಾಗಿಯಾಗುವ ಲೈಂಗಿಕ ದೌರ್ಜನ್ಯ ಗಳಿಗೆ  ಪೋಕ್ಸೋ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಅಂತಹವರನ್ನು ರಕ್ಷಿಸುವ ಕೆಲಸ ನಡೆಯುತ್ತಿರುವುದು ಮೇಲ್ನೋಟಕ್ಕೆ ನಮಗೆ ಕಂಡು ಬರುತ್ತಿದೆ. ಜನಸಾಮಾನ್ಯರಿಗೆ ಮಾತ್ರ ಕಾನೂನು, ಆಕ್ಟ್ ಗಳು  ನಿಯಮಗಳು ಲಾಗು ಆಗುತ್ತಿವೆ ವಿನಃ ಇತರರಿಗೆ ಅಲ್ಲ ಎಂಬುದು ಪೊಲೀಸರು ಹಲವಾರು ಪ್ರಕರಣಗಳಲ್ಲಿ ಸಾಬೀತುಪಡಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ  ನಿಷ್ಕ್ರಿಯವಾಗುತ್ತಿರುವುದು  ಈ ರಾಜ್ಯದ ದುರಂತವಾಗಿದೆ.

ಆದುದರಿಂದ  ನಾವೆಲ್ಲರೂ ನ್ಯಾಯಾಂಗದ ಬಗ್ಗೆ ಅತ್ಯಂತ ಗೌರವ, ಘನತೆ, ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದೇವೆ.
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ತಾವು ಈ ಪ್ರಕರಣದಲ್ಲಿ ಮಹಿಳೆಯರನ್ನು ಬಳಸಿ ದೌರ್ಜನ್ಯವೆಸಗಿ ಸ್ವತಹ ವಿಡಿಯೋವನ್ನು ಮಾಡಿದವರು ಯಾರು? ಮತ್ತು ಅದನ್ನು ಹರಿಬಿಟ್ಟವರು ಯಾರು? ಎಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ  ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲು ಈ ನಮ್ಮ ಮನವಿ ಪತ್ರವನ್ನು  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಕರ್ನಾಟಕ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಸೂಕ್ತ  ಆದೇಶವನ್ನು ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಯ ಪೂರ್ವಕವಾಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ.

About The Author