
ಲೈಂಗಿಕವಾಗಿ ಮಹಿಳೆಯರನ್ನು ಬಳಸಿಕೊಂಡ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ಜನಪರ ಸಂಘಟನೆಗಳು ಸಮ್ಮುಖದಲ್ಲಿ ರಾಮದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರನ್ನು ಉದ್ದೇಶಿಸಿ ಸಿಐಟಿಯು ಕಾರ್ಮಿಕ ಮುಖಂಡ ಜಿ.ಎಂ. ಜೈನೆಖಾನ್ ಮಾತನಾಡಿ, ಇತ್ತಿಚೇಗೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಕೊಲೆಗಳು ನಡೆಯುತ್ತಿರುವುದು ಮಾನವ ಸಮಾಜಕ್ಕೆ ನಾಚಿಕೆ ತರುವಂತಹದ್ದು. ಕಳೆದ ಕೆಲವು ದಿನಗಳಿಂದ ಹಾಸನದಲ್ಲಿ ಪೆನ್ ಡ್ರೆöÊವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ಅಧಿಕಾರ, ಆಸ್ತಿ ಮತ್ತು ಜಾತೀಯ ಮಧದಿಂದ ಮೆರೆಯುತ್ತಿರುವ ಹಾಸನ ಜಿಲ್ಲೆಯ ಪ್ರಭಾವಿ ಕುಟುಂಬದ ಪ್ರಜ್ವಲ್ ರೇವಣ್ಣ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಲ್ಲದೆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದು ಹೀನ ಕೆಲಸವಾಗಿದೆ. ಈ ವಿಕೃತ ಕಾಮಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಲೈಂಗಿಕ ವಿಡಿಯೋ ಮಾಡಿದ ಆರೋಪಿ ಯಾರು ಎಂಬುವುದನ್ನು ಮೊದಲು ಪತ್ತೆ ಮಾಡಬೇಕು. ಈ ಹಗರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅದೇ ರೀತಿ ಹೊಳೆನರಸಿಪುರದಲ್ಲಿ ಒಂದು ಪ್ರಕರಣ ದಾಖಲಾಗಿದೆ ಇದರ ಪ್ರಮುಖ ಆರೋಪಿ ಎಚ್.ಡಿ.ರೇವಣ್ಣ ಇವರಿಬ್ಬರನ್ನೂ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಅಂಜುಮನ್ ಕಮಿಟಿಯ ಮಹಮ್ಮದಶಫಿ ಬೆಣ್ಣಿ ಸರಕಾರಕ್ಕೆ ಒತ್ತಾಯಿಸಿದರು.
ಸರಕಾರ ಯಾವುದೇ ಒತ್ತಡಗಳಿಗೆ ಮನಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡಬೇಕು ಮತ್ತು ನ್ಯಾಯವನ್ನು ಒದಗಿಸಬೇಕೆಂದು ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಸ ಘೋಡಕೆ, ಕರವೇ ಪ್ರವೀಣ ಶೆಟ್ಟಿ ಬಣ ಸಂಘಟನೆಯ ಶ್ರೇಯಸ್ಸ್ ವಾಲಿ, ಕಾರ್ಮಿಕ ಸಂಘಟನೆಯ ನಾಗಪ್ಪ ಸಂಗೊಳ್ಳಿ, ಮಹಿಳಾ ಸಂಘಟನೆಯ ತುಳಸಮ್ಮ ಮಾಳದಕರ ಆಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪೈರೋಜ್ ಪಠಾಣ, ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಸಂಘಟನೆಯ ಅಧ್ಯಕ್ಷ ಆಶೀಪ್ ಖಲಿಫ್, ಅಮೀನಸಾಬ ಹವಲ್ದಾರ, ಫಾರೂಖ್ ಶೇಖ್, ರಮೀಜಾ ಖಲೀಫ್, ಗೀತಾ ಮಾಳದಕರ ಮತ್ತು ಶಬಾನಾ ಶೇಖ್ ಮುಂತಾದವರಿದ್ದರು.


