
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡ ಜಿ.ಎಂ. ಜೈನೆಖಾನ್ ವಹಿಸಿ ಅವರು ಮಾತನಾಡಿದರು. ಹಿಂದೆ ಬಂಡವಾಳ ಶಾಹಿಗಳ ವಿರುದ್ಧ ಯಾವ ರೀತಿ ಹೋರಾಟ ನಡೆದಿತ್ತು ಅದೇ ರೀತಿಯಲ್ಲಿ ಇನ್ನೊಂದು ಹೋರಾಟ ನಡೆಯಬೇಕಾಗಿದೆ. ಏಕೆಂದರೆ ಕಾರ್ಮಿಕರು ಗುಲಾಮರಲ್ಲ ಅವರು ಮಾಡುವ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ನಾವೆಲ್ಲರೂ ಚಿಕಾಗೋ ನಗರದಲ್ಲಿ ನಡೆಸಿದಂತಹ ಹೋರಾಟಕ್ಕೆ ಸಜ್ಜಾಗಬೇಕೆಂದು ಆಗ್ರಹಿಸಿದರು.
ನಿಖಿಲ ಕುಲಕರ್ಣಿ ಮಾತನಾಡಿ, ಇವತ್ತಿನ ಬೆಲೆ ಏರಿಕೆ ದಿನಗಳಲ್ಲಿ ಕಾರ್ಮಿಕ ತನ್ನ ಶ್ರಮಶಕ್ತಿ ಮಾರಿಕೊಂಡರು ಕೊಂಡು ಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾನೆ. ಶ್ರಮಶಕ್ತಿಗೆ ಅನುಗುಣವಾಗಿ ವೇತನ ಸಿಗಬೇಕು. ಸಂಪತ್ತು ಸೃಷ್ಠಿ ಮಾಡುವವನೇ ಕಾರ್ಮಿಕ. ಈ ಭೂಮಿ ನಮ್ಮದು, ಈ ದೇಶ ನಮ್ಮದು, ನಮ್ಮ ಹಕ್ಕನ್ನು ಪಡೆಯುವುದಕ್ಕೆ ನಾವು ಏಕೆ ಹೆದರಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ಎಲ್ಲರೂ ಒಕ್ಕಟ್ಟಾಗಿ ಹೋರಾಟಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.
ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಈ ವೇಳೆ ನಾಗಪ್ಪ ಸಂಗೊಳ್ಳಿ , ಧನಲಕ್ಷಿö್ಮÃ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘದ ಮುಖಂಡ ಕೃಷ್ಣಾ ಹೊಸೂರ, ಅಕ್ಷರ ದಾಸೋಹ ನೌಕರರ ಸಂಘದ ತುಳಸಮ್ಮ ಮಾಳದಕರ, ಪಂಚಾಯತ ನೌಕರರ ಸಂಘದ ಕೇಶವ ದಾಸರ, ಕಟ್ಟಡ ಕಾರ್ಮಿಕರ ಸಂಘದ ಮಾರುತಿ ಮುದಗುರಿ, ಡಬ್ಬಾ ಅಂಗಡಿ ಕಾರರ ಸಂಘದ ಮುಖಂಡ ಫಾರೂಖ್ ಶೇಖ್, ಕಾಯಕ ಮಿತ್ರ ನೌಕರರ ಸಂಘದ ಶಂಕ್ರಮ್ಮ ಪಾಟೀಲ, ಸಂಜೀವಿನಿ ನೌಕರರ ಸಂಘದ ರೇಖಾ ಪೂಜಾರ ಮತ್ತು ಕರ್ನಾಟಕ ಪ್ರಾಂತರೈತ ಸಂಘದ ಸುಲೇಮಾನ ಪೈಲ್ವಾನ್, ಲಕ್ಷö್ಮಣ ಮದ್ಲೂರ, ದಾದಾ ಪಾಗದ ಸೇರಿದಂತೆ ಇತರರಿದ್ದರು.


