ರಾಜ್ಯಕ್ಕೆ 7ನೇ ರ್ಯಾಂಕ್ ತೆಗೆದಿರುವ ವಿದ್ಯಾರ್ಥಿ ಶಂಕರ್ ರಣಧೀರ.ಎಂ.

ಬೆಂಗಳೂರು: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ (SSLC) 617ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಬಂದಿರುವ ನೆಲಗದರನಹಳ್ಳಿಯ ಗಂಗಾ ಇಂಟರ್ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಂಕರ್ ರಣಧೀರ.ಎಂ, ಡೈರಿ ಮಂಜುನಾಥ್ ರವರ ಪುತ್ರ ನೆಲಗದರಹಳ್ಳಿ ಗ್ರಾಮಕ್ಕೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಸಂಚಾರಿ ಸತ್ಯ ಪತ್ರಿಕೆಯ ಜೊತೆ ಶಂಕರ್ ರಣಧೀರ.ಎಂ, ರವರು ಮಾತಾಡಿ ಹರ್ಷ ವ್ಯಕ್ತ ಪಡಿಸುತ್ತಾ ಮುಂದಿನ ಕನಸನ್ನು ಹಂಚಿಕೊಂಡರು.
ನನ್ನ ಹೆತ್ತವರು ನನಗೆ ಯಾವುದೇ ರೀತಿಯ ಒತ್ತಡವನ್ನು ನೀಡಿರಲಿಲ್ಲ ಆದರೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪರೀಕ್ಷೆಯ ಸಂದರ್ಭ ಮಾತ್ರ ಹಾರ್ಡ್ ವರ್ಕ್ ಮಾಡಿದ್ದೇನೆ. ನನಗೆ ರ್ಯಾಂಕ್ ಬರುತ್ತೆ ಎನ್ನುವ ಭರವಸೆ ಇತ್ತು ಎಂದಿದ್ದಾರೆ.
ನನ್ನ ಸಾಧನೆಗೆ ಬೆನ್ನೆಲುಬಾಗಿ ನನ್ನ ತಂದೆ ತಾಯಿ ಮತ್ತು ಶಾಲೆಯ ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂದಿ ವರ್ಗ ಮತ್ತು ಪೋಷಕರಿಗೆ ಚಿರರುಣಿಯಾಗಿದ್ದೇನೆ. ಮುಂದೆ ಯು.ಪಿ.ಎಸ್.ಸಿ (UPSC) ಪರೀಕ್ಷೆ ಬರೆದು ಐ.ಏ.ಏಸ್ (IAS) ಅಧಿಕಾರಿಯಾಗುವ ಆಸೆಯಿದೆ ಎಂದರು.
