ಮೆಸೇಜ್ ಓಪನ್ ಮಾಡಿ 8.84 ಲಕ್ಷ ಕಳೆದುಕೊಂಡ ಉದ್ಯಮಿ

WhatsApp Group
Join Now
ರಾಮನಗರ ನಗರದ ಯಾರಬ್ ನಗರದ ನೂರಾನಿ ಮಸೀದಿ ಬಳಿಯ ವಾಸಿಯಾದ ಉದ್ಯಮಿ ಸಲ್ಮಾನ್ ಖಾನ್ ಪಾರ್ಟ್ ಟೈಮ್ ಜಾಬ್ ಮೆಸೇಜ್ ಓಪನ್ ಮಾಡಿ ಉದ್ಯಮಿಯೊಬ್ಬರು 8.84 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಹಣ ಕಳೆದುಕೊಂಡವರು. ಸಲ್ಮಾನ್ ಖಾನ್ ರವರ ಮೊಬೈಲ್ ಗೆ ವಾಟ್ಸ್ ಆಪ್ ನಲ್ಲಿ ಆಟೋಮೆಟಿಕ್ ಆಗಿ ಗ್ರೂಪ್ ಕ್ರಿಯೇಟ್ ಆಗಿದ್ದು, ಪಾರ್ಟ್ ಟೈಮ್ ಜಾಬ್ ಎಂಬ ಮೆಸೇಜ್ ಟೆಲಿಗ್ರಾಂ ಲಿಂಕ್ ಬಂದಿದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಟಾಸ್ಕ್ ಗ್ರೂಪ್ ರಚನೆಯಾಗಿದೆ. ಟೆಲಿಗ್ರಾಂನಲ್ಲಿ ಮೆಸೇಜ್ ಮಾಡಿ 5 ಟಾಸ್ಕ್ ಗಳನ್ನು ನೀಡಿ ಶೇ.30ರಷ್ಟು ಕಮಿಷನ್ ನೀಡುತ್ತೇವೆಂದು ಹೇಳಿ ಸಲ್ಮಾನ್ ಖಾನ್ ಅವರಿಂದ ಫೋನ್ ಪೇ ಮೂಲಕ 5 ಸಾವಿರ , 15 ಸಾವಿರ, ಸಮೀರ್ ಖಾನ್ ಎಂಬುವರಿಗೆ 50 ಸಾವಿರ, ಅನಿತಾ ಎಂಬುವರ ಖಾತೆಗೆ 1 ಲಕ್ಷ , ವಿಷ್ಣುಗೆ 25 ಸಾವಿರ ಹೀಗೆ ಒಟ್ಟು 8,84,000 ರು.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ವಂಚನೆಗೊಂಡಿರುವುದು ಗೊತ್ತಾದ ಬಳಿಕ ಸಲ್ಮಾನ್ ಖಾನ್ ರವರು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
