
ಗದಗ ಜಿಲ್ಲೆಯದಾಂತ್ಯ ಹೆಣ್ಣು ಮಕ್ಕಳು ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಅಕ್ರಮವಾಗಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಕೆಲವು ಕಾಲೇಜು
ಆಸುಪಾಸಿನಲ್ಲಿ ಮಾರಾಟ ಮಾಡುತ್ತಿದ್ದಾರೆ, ಇದ್ದರಿಂದ ಕೆಲವು ಕಾಲೇಜು ವಿದ್ಯಾರ್ಥಿಗಳಿಗೆ
ಅಲ್ಲಿಯ ಸ್ಥಳೀಯ ಹುಡುಗರಿಂದ ಕುಡಿದ ಮತ್ತಿನಲ್ಲಿ. ವಿದ್ಯಾರ್ಥಿಗಳ ಮೇಲೆ ಗಾಂಜಾ ಅಫೀಮ
ಮದ್ಯಪಾನ ಲೈಂಗಿಕ ಕಿರುಕುಳ ನೀಡುತ್ತಿರುವುದು ಕೇಳಿ ಬರ್ತಾ ಇದೆ.
ಮಾನ್ಯ ಉಪವಿಭಾಗಾಧಿಕಾರಿ ಅಧಿಕಾರಿಗಳು ಇತ ಕಡೆ ಗಮನಹರಿಸಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಮಾಡುವವರು ಮೇಲೆ ಹಾಗೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡುವರ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಯುವ ಕರ್ನಾಟಕ ಭೀಮ್ ಸೇನೆ, ಗದಗ ಜಿಲ್ಲಾಧ್ಯಕ್ಷರಾದ ರಾಮು ಬಾಗಲಕೋಟ ನಾಯಕತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಗದಗ ಜಿಲ್ಲಾ ಉಪಾಧ್ಯಕ್ಷರಾದ ಖಾಜಾಸಾಬ ಗಬ್ಬೂರು, ಅಲ್ತಾಫ್ ಸಾಬ್ ಕಟ್ಟಿಮನಿ. ಶಬ್ಬಿರ ತಹಶೀಲ್ದಾರ್ ಗದಗ ತಾಲುಕು ಅಧ್ಯಕ್ಷರು , ಮೆಹಬೂಬ್ ಬೇಟಗೇರಿ ಜಿಲ್ಲಾ ಖಜಾಂಚಿ,ಯಕಂಣ ತೇರದಾಳ ಸಂಚಾಲಕರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.


