
ಹನೂರು ಪಟ್ಟಣದ ಕೆನರಾ ಬ್ಯಾಂಕ್ ನ ಎಟಿಎಮ್ ನಲ್ಲಿ ಜರುಗಿದ್ದು ಹನೂರು ತಾಲ್ಲೂಕಿನ ಕುರಟ್ಟಿಹೊಸರು ಗ್ರಾಮದ ರೈತ ಬಸವರಾಜು ಎಂಬಾತನೆ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ
ಈತ ಹನೂರು ಪಟ್ಟಣದ ಕೆನರಾ ಬ್ಯಾಂಕ್ ನ ಎಟಿಎಂ ಗೆ ಆಗಮಿಸಿ ನನಗೆ ಹಣ ಪಡೆಯಲು ತಿಳಿದಿಲ್ಲ ನನಗೆ ಹಣ ತೆಗೆದುಕೊಳ್ಳಲು ಸಹಾಯ ಮಾಡಿ ಎಂದು ಅಪರಿಚಿತ ವ್ಯಕ್ತಿ ಬಳಿ ಕೇಳಿದಾಗ ಆತ ರೈತ ಕೇಳಿದ 5000 ರೂ ಹಣವನ್ನು ತೆಗದು ಕೂಟ್ಡು ನಂತರ ಎಟಿಎಂನ್ನ ಬದಲಿಸಿ, ಕೋಡ್ ನ್ನು ತಿಳಿದು ಅನಾಮೀಯ ಎಟಿಎಂನ್ನು ರೈತನಿಗೆ ನೀಡಿ ಪರಾರಿಯಾಗಿ ರೈತ ಬಸವರಾಜ್ ಖಾತೆಯಿಂದ ಬರೊಬ್ಬರಿ 61000 ರೂ ಲಪಾಟಿಸಿದ್ದಾನೆ ಈ ಸಂಬಂಧ ಹಣ ಕಳೆದುಕೊಂಡ ರೈತ ಬಸವರಾಜ್ ಪೋಲಿಸರಿಗೆ ದೂರಿದ್ದು ಹನೂರು ಪೋಲಿಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆಈ ಸಂಬಂಧ ಹನೂರು ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿ ಸೋಮವಾರ ಮದ್ಯಾಹ್ನ 12ಘಂಟೆ ವೇಳೆ ಕೆನಾರಾ ಬ್ಯಾಂಕ್ ಗೂ ತೆರಳಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ರೈತನಿಗೆ ಅಪರಿಚಿತ ವ್ಯಕ್ತಿ ಸಹಾಯ ಮಾಡಿ ನಂತರ ಪರಾರಿಗಿದ್ದ ದೃಶ್ಯ ಸೆರೆಯಾಗಿದ್ದು ಆ ಕಿಡಿಗೇಡಿಯ ಪತ್ತೆಗೆ ಹನೂರು ಪೊಲೀಸರು ಕೂಡ ವಿವಿಧ ಆಯಾಮಗಳಲ್ಲಿ ಬಲೆ ಬಿಸಿದ್ದಾರೆ


