
ರಾಮದುರ್ಗ ವೃತ್ತಿ ನಿರತ ಛಾಯಾಗ್ರಾಹಕರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ರಾಮದುರ್ಗ ತಾಲೂಕ ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಮದುರ್ಗ ಸಂಘದ ಪದಾಧಿಕಾರಿಗಳು ಶುಕ್ರವಾರ ಬೈಕ ರ್ಯಾಲಿ ಮೂಲಕ ಪ್ರತಿಭಟನೆ ಮಾಡಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಶಿವಾಜಿನಗರದ ಶೈಮ್ಸ್ ಕಲ್ಯಾಣ ಮಂಟಪದಲ್ಲಿ
ವೃತ್ತಿ ನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು
ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ವೃತ್ತಿ ನಿರತ ಛಾಯಾಗ್ರಾಹಕರ ಕ್ಯಾಮೆರಾ ಪರಿಕರ ಕಳ್ಳತನ, ಸ್ಪುಡಿಯೋಗಳಲ್ಲಿ ಕಳ್ಳತನ ಮತ್ತು ಛಾಯಾಗ್ರಾಹಕರನ್ನು ರಸ್ತೆಗೆ ಅಡ್ಡಗಟ್ಟಿ ಪರಿಕರಗಳನ್ನು ವಶ ಪಡಿಸಿಕೊಳ್ಳುವ ಪ್ರಕರಣಗಳು
ಹೆಚ್ಚಾಗುತ್ತಿವೆ. ಅತಿ ಬೆಲೆ ಬಾಳುವ
ವಸ್ತುಗಳನ್ನು ಕಳೆದುಕೊಂಡ ವೃತ್ತಿಪರರು. ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಛಾಯಾಚಿತ್ರಗಾರರ ರಕ್ಷಣೆ ಮತ್ತು ಪರಿಕರಗಳ
ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಶಿವಾಜಿ ನಗರದಲ್ಲಿ ಛಾಯಾಗ್ರಾಹಕನ ಹಲ್ಲೆಗೊಳಗಾದ
ನ್ಯಾಯ ಕೊಡಿಸಲು ಪೊಲೀಸರು ಕ್ರಮ ಜರುಗಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕ ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಮದುರ್ಗ ಗೌರವ ಅಧ್ಯಕ್ಷರು ರಮೇಶ್ ರಾಯಬಾಗ. ವಿಜಯ ನಾಯ್ಕ. ಅಧ್ಯಕ್ಷರು ಸಿದ್ದು ಮೋಹಿತೆ. ಉಪಾಧ್ಯಕ್ಷರು ಅಕ್ಷಯ್ ಯಾದವಾಡ. ಕಾರ್ಯದರ್ಶಿಗಳು ಸೋಮೇಶ್ವರ ಕುಂದರಗಿ. ಖಜಾಂಚಿ ಬಸವರಾಜ ಬಾರ್ಕಿ. ಸಹ ಕಾರ್ಯದರ್ಶಿ ವೀರಣ್ಣ ಕಟ್ಟಿಮನಿ. ಬಾಲನಗೌಡ ಪಾಟೀಲ್. ಮಾಂತೇಶ್ ಗೋಡಿ. ಮರಾತಿ ಪತ್ತಾರ. ಮೌನೇಶ್ ಪತ್ತಾರ್. ಸಿದ್ದಪ್ಪ ಬೂತಲಿ .ಸುರೇಬಾನ. ಖಾನಪೇಟ. ರಾಮದುರ್ಗ. ಬಟಕುರ್ಕಿ. ಸಾಲಹಳ್ಳಿ . ಕಟಕೊಳ . ಗ್ರಾಮದ ಛಾಯಾಗ್ರಾಹಕರ ಸದಸ್ಯರು ಭಾಗವಹಿಸಿದ್ದರು.


